#Forest | 10 ಸಾವಿರಕ್ಕೂ ಅಧಿಕ ಗಿಡ ನೆಟ್ಟ “ಪವರ್‌ ಮ್ಯಾನ್”‌ | ಮಿಯಾವಾಕಿ ವಿಧಾನದಲ್ಲಿ ಕಾಡು ಬೆಳೆಸುತ್ತಿರುವ ದುರ್ಗಾಸಿಂಗ್‌ |

August 5, 2023
10:58 AM
ಮರಗಳನ್ನು ಕಡಿದು ನಾಶ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಧ್ಯೆಯೇ ನಡುವೆಯೇ  ಸಾಲು ಸಾಲು ಗಿಡಗಳನ್ನು ನೆಟ್ಟು ಅರಣ್ಯೀಕರಣ ಮಾಡಲು ಪಣತೊಟ್ಟಿದ್ದಾರೆ ಪವರ್‌ ಮ್ಯಾನ್ ದುರ್ಗಾಸಿಂಗ್.ಇವರ ಆಸಕ್ತಿ, ಕೆಲಸವೇ ಆಸಕ್ತಿದಾಯಕ.

ಗಿಡ ನೆಡುವುದು ಬಿಡಿ, ಗಿಡ ಉಳಿಸುವುದಕ್ಕೂ ಮನಸ್ಸು ಮಾಡದ ಯುಗ ಇದು.ಅಂತಹದ್ದರಲ್ಲಿ ನಿರಂತರ ಗಿಡ ಬೆಳೆಸುತ್ತಿರುವ ಪವರ್‌ಮ್ಯಾನ್‌ ಈಗ ಗಮನ ಸೆಳೆದಿದ್ದಾರೆ. ಸುಮಾರು 10,000 ಗಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ 10 ಕಡೆಗಳಲ್ಲಿ ಬೆಳೆಸುವ ಮೂಲಕ ವಿಶೇಷವಾದ ಪರಿಸರ ಪ್ರೇಮವನ್ನು ಬೆಳೆಸಿದ್ದಾರೆ.

Advertisement
Advertisement
Advertisement

ಅಭಿವೃದ್ಧಿಯ ಹೆಸರಿನಲ್ಲಿ ಸಾಲು ಸಾಲು ಮರಗಳನ್ನು ಕಡಿದು ನಾಶ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎನ್ನುವ ಆರೋಪದ  ನಡುವೆಯೇ  ಸಾಲು ಸಾಲು ಗಿಡಗಳನ್ನು ನೆಟ್ಟು ಅರಣ್ಯೀಕರಣ ಮಾಡಲು ಪಣತೊಟ್ಟಿದ್ದಾರೆ ದುರ್ಗಾಸಿಂಗ್. ಮೆಸ್ಕಾಂ ಇಲಾಖೆಯ ಗೋಳಿತೊಟ್ಟು ವಿಭಾಗದ ಪವರ್ ಮ್ಯಾನ್ ದುರ್ಗಾ ಸಿಂಗ್ ಈ ಸಾಧನೆಯ ರೂವಾರಿ.

Advertisement
ಗಿಡ ನೆಟ್ಟಿರುವ ದುರ್ಗಾಸಿಂಗ್‌ ; Photo Credit : Samarth

ಕೆಲ ವರ್ಷಗಳ ಹಿಂದೆ ವಿದ್ಯುತ್ ಇಲಾಖೆಯಿಂದ ಹೊಸ ತಂತಿಗಳ ಸಂಪರ್ಕದ ಬಗ್ಗೆ ಕಾರ್ಯಗಳು ನಡೆಯುತ್ತಿತ್ತು. ಈ ಸಂದರ್ಭ ಅನೇಕ ಮರಗಳ ತೆರವಿನ ಪರಿಸ್ಥಿತಿ ಎದುರಾಯಿತು. ಆಗ ಮರಗಳ ಅಳಿವಿನ ಬಗ್ಗೆ ಯೋಚಿಸಿದ ಪವರ್ ಮ್ಯಾನ್ ಅವುಗಳನ್ನು ಉಳಿಸುವ ಹಾಗೂ ಹೊಸದಾಗಿ ಸಸಿ ನೆಟ್ಟು ಬೆಳೆಸುವ ಬಗ್ಗೆ ಯೋಚಿಸಿದರು.‌ ಸ್ವತಃ ಇಲಾಖೆಯ ವಿರುದ್ಧವೇ ಕಾದಾಡಿ ಮರಗಳನ್ನು ರಕ್ಷಿಸಿ ವಿದ್ಯುತ್ ಕಂಬಗಳನ್ನು ಮತ್ತು ತಂತಿಗಳನ್ನು ಬೇರೆ ಕಡೆಯಿಂದ ವರ್ಗಾಯಿಸಿಕೊಂಡು ಹೋಗುವಂತೆ ಒತ್ತಾಯಿಸುತ್ತಿದ್ದರು. ಆ ಮೂಲಕ ಅವರ ಪರಿಸರ ಜಾಗೃತಿಯ ಅರಿವನ್ನು ಇತರರಿಗೆ ಮೂಡಿಸುತ್ತಿದ್ದರು. ಆ ಬಳಿಕ ಯೂಟ್ಯೂಬ್ ನಲ್ಲಿ ಮಿಯಾವಾಕಿ ಅರಣ್ಯಗಳ ಬಗ್ಗೆ ಅಧ್ಯಯನ ನಡೆಸಿದರು. ವೃತ್ತಿಯಲ್ಲಿ ಪವರ್ ಮ್ಯಾನ್ ಆಗಿರುವ ಇವರು ತಮ್ಮ ವರ್ಷದ ಆದಾಯದಲ್ಲಿ 30,000 ರೂಪಾಯಿಯನ್ನು ಈ ಪರಿಸರ ರಕ್ಷಣೆಗಾಗಿಯೇ ಮೀಸಲಿಟ್ಟಿದ್ದಾರೆ.

ಇಂದು ಹೆಚ್ಚಿನ ಎಲ್ಲಾ ಕಡೆ ಕಾಡನ್ನು ನಾಶಗೊಳಿಸುವ ವಿಚಾರಗಳೇ ಕೇಳಿ ಬರುತ್ತಿರುವ ನಡುವೆ ದುರ್ಗಾ ಸಿಂಗ್ ಮಾಡುತ್ತಿರುವ ಮಿಯವಾಕಿ ಪದ್ಧತಿಯ ಅರಣ್ಯೀಕರಣ ಮಾದರಿ ಕಾರ್ಯವಾಗಿದೆ. ತಮಗೆ ಲಭ್ಯ ಇರುವ ಜಾಗದಲ್ಲಿ ಅನೇಕ ಪ್ರಭೇದಗಳ ಅತಿ ಹೆಚ್ಚು ಗಿಡಗಳನ್ನು ನೆಟ್ಟು ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ ಪಕ್ಷಿ ಕೀಟಗಳಿಗೂ ಆಸರೆಯ ತಾಣವನ್ನು ಸೃಷ್ಟಿ ಮಾಡುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.

Advertisement
ಮಿಯಾವಕಿ ಮಾದರಿ ಗಿಡಗಳು | Photo Credit : Samarth

ಜಪಾನಿನ ಸಸ್ಯಶಾಸ್ತ್ರಜ್ಞ ಅಭಿವೃದ್ಧಿಪಡಿಸಿದ ಈ ಮಿಯಾವಾಕಿ ವಿಧಾನವು ಸ್ಥಳೀಯ ಪ್ರಭೇದಗಳ ಗಿಡಗಳನ್ನು ನೆಟ್ಟು ಅಲ್ಪಸಮಯದಲ್ಲಿ ಬೆಳೆಸುವ ರೀತಿಯಾಗಿದೆ. ಮಿಯಾವಾಕಿ ವಿಧಾನವು ಸ್ಥಳೀಯ ಸಸ್ಯಗಳ ವೇಗವಾಗಿ ಬೆಳೆಯುವ ತೋಪುಗಳನ್ನು ಬೆಳೆಸಲು ಅರಣ್ಯೀಕರಣದ ತಂತ್ರವಾಗಿದೆ. ಮೂಲತಃ ಜಪಾನಿನ ಪರಿಸರಶಾಸ್ತ್ರಜ್ಞ ಅಕಿರಾ ಮಿಯಾವಾಕಿ ಅವರು ನಿಪ್ಪಾನ್ ಸ್ಟೀಲ್‌ಗಾಗಿ 1970 ರ ದಶಕದ ಆರಂಭದಲ್ಲಿ ಅಭಿವೃದ್ಧಿಪಡಿಸಿದರು, ಈ ವಿಧಾನವನ್ನು ವಿವಿಧ ಜಪಾನಿನ ನಿಗಮಗಳು ಅಳವಡಿಸಿಕೊಂಡಿವೆ.

ಕಡಿಮೆ ಜಾಗದಲ್ಲಿ ಅಕ್ಕ ಪಕ್ಕ ಗಿಡಗಳನ್ನು ನೆಡುವ ಮೂಲಕ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವ ವಿಧಾನ ಇದಾಗಿದೆ. ನಗರೀಕರಣದ ವ್ಯಾಮೋಹದಲ್ಲಿ ಕಾಡು ನಾಶಗೊಳ್ಳುವ ಪ್ರಸ್ತುತ ಸಮಯದಲ್ಲಿ ಈ ವಿಧಾನದಿಂದಾಗಿ ಪರಿಸರದಲ್ಲಿರುವ ಇಂಗಾಲದ ಡೈ ಆಕ್ಸೈಡ್ ಅನ್ನು ಇಲ್ಲಿರುವ ಗಿಡಗಳು ಬೇಗನೆ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ಆಮ್ಲಜನಕವನ್ನು ಹೊರ ಸೂಸುತ್ತವೆ. ಪರಿಸರ ಸ್ವಚ್ಛತೆಯೊಂದಿಗೆ ಪ್ರಾಣಿ ಪಕ್ಷಿಗಳಿಗೂ ಇಲ್ಲಿನ ಮರಗಳು ಆಹಾರದ ಭದ್ರತೆಯನ್ನು ನೀಡುತ್ತವೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಯ ಮೌಲ್ಯವರ್ಧನೆ ದಾರಿ | ಅಡಿಕೆ ಸಿಪ್ಪೆಯ ನಾರಿನಿಂದ ಬಟ್ಟೆಯ ನೂಲು | ಕೇರಳದಲ್ಲಿ ಇನ್ನೊಂದು ಪ್ರಯತ್ನ |
October 30, 2024
7:32 AM
by: ಮಹೇಶ್ ಪುಚ್ಚಪ್ಪಾಡಿ
ಆರೋಗ್ಯ ಯೋಜನೆಗಳಿಗೆ ಪ್ರಧಾನಿ ಚಾಲನೆ | ಆಯುಷ್ಮಾನ್ ಭಾರತ್  ಜನಾರೋಗ್ಯ ಯೋಜನೆ ವಿಸ್ತರಣೆ
October 30, 2024
6:21 AM
by: The Rural Mirror ಸುದ್ದಿಜಾಲ
ಧನ್ವಂತರಿ ಜಯಂತಿ | ಆಯುರ್ವೇದ ಚಿಕಿತ್ಸೆ ಕುರಿತು ಜನ ಜಾಗೃತಿ
October 30, 2024
6:07 AM
by: The Rural Mirror ಸುದ್ದಿಜಾಲ
ಪ್ರತೀ ಜಿಲ್ಲೆಯಲ್ಲಿ ರೈತರಿಗೆ ತರಬೇತಿ ಕೇಂದ್ರ | ಮಣ್ಣು ಪರೀಕ್ಷೆ ನಡೆಸಲು ಯೋಜನೆಗಳು |
October 30, 2024
6:04 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror