ಶುರುವಾಯ್ತು ರುಚಿ ರುಚಿಯಾದ ನೇರಳೆ ಹಣ್ಣಿನ ಕಾಲ : ನೀಲಿ ಸುಂದರಿಯ ಖರೀದಿಸದವರು ಉಂಟೇ..?

June 9, 2023
12:56 PM

ರಾಜ್ಯಾದ್ಯಂತ ಮಾರುಕಟ್ಟೆಯಲ್ಲೀಗ ಕಪ್ಪು ಸುಂದರಿಯದ್ದೇ ಕಾರುಬಾರು.  ಮಾವಿನ ಹಣ್ಣಿನ ನಂತರ ನೇರಳೆ ಹಣ್ಣುಗಳ (Java Plum) ಸುಗ್ಗಿ. ಕಪ್ಪಗಿನ ದ್ರಾಕ್ಷಿ ಹೋಲುವ ಜಂಬು ನೇರಳೆ ಸವಿಯೋದಕ್ಕೆ ಗ್ರಾಹಕರು ಮುಗಿ ಬೀಳ್ತಿದ್ದಾರೆ. ಆರೋಗ್ಯಕ್ಕೆ ಕೂಡ ಈ ನೇರಳೆ ಉತ್ತಮ. ಹಾಗೆ ಅಷ್ಟೇ ರುಚಿ.  ಕಳೆದ ಬಾರಿಗೆ ಹೂಲಿಸಿದ್ರೆ ಈ ಬಾರಿ ಕೊಂಚ ರೇಟು ಜಾಸ್ತಿಯಾಗಿದೆ. ಆದ್ರೂ, ವರ್ಷಕ್ಕೊಂದು ಬಾರಿ ಸಿಗುವ  ಜಂಬು ನೇರಳೆ ತಿನ್ನೋ ಅವಕಾಶವನ್ನು  ಯಾರೂ ಮಿಸ್‌ ಮಾಡ್ತಿಲ್ಲ.

Advertisement

ಆದರೆ ಇದು ಪಟ್ಟಣದ ಮಂದಿ ಕಥೆ. ಆದರೆ ನಮ್ಮ ದಕ್ಷಿಣ ಕನ್ನಡದಲ್ಲಿ ಅಪರೂಪವಾದ್ರು ಕಾಡಿಗೆ ಹೋದ್ರೆ ಬೇಕಾದಷ್ಟು ಸಿಗುತ್ತದೆ. ಆದ್ರೆ ಅಷ್ಟೆಲ್ಲ ಕಷ್ಟಪಟ್ಟು ಕಾಡಿಗೆ ಹೋಗಿ ಕೊಯ್ದು ತಂದು ತಿನ್ನುವುದು ನಮ್ಮಲ್ಲಿ ವಿರಳ. ಹಿಂದೆ ಶಾಲೆಗೆ ಹೋಗುವಾಗ ಮಕ್ಕಳೆಲ್ಲ ಕಾಡು ಮೇಡು ಸುತ್ತಿ ಕೊಯ್ದು ತಿಂದದ್ದಿದೆ. ಆದರೆ ಈಗಿನ ಮಕ್ಕಳಿಗೆ ಆ ಭಾಗ್ಯವೂ ಇಲ್ಲ. ಬೆಡ್ ರೂಮಿನಿಂದ ನೇರ ಕ್ಲಾಸ್ ರೂಮಿಗೆ ಹೋಗುವ ಭಾಗ್ಯ ಈಗಿನ ಮಕ್ಕಳದ್ದು.

ಮಾವಿನ ಹಣ್ಣಿನ ಸೀಸನ್ ಮುಗಿದ ಬಳಿಕ ಮಾರುಕಟ್ಟೆಗಳಿಗೆ ಜಂಬು ನೇರಳೆ ಲಗ್ಗೆ ಇಟ್ಟಿದೆ. ಅದರಲ್ಲೂ ಮೇ, ಜೂನ್‌ ಈ ಎರಡು ತಿಂಗಳಲ್ಲಿ ಈ ಕಪ್ಪು ಸುಂದರಿಗೆ ಸುಗ್ಗಿಕಾಲ. ಸಾಕಷ್ಟು ಔಷಧಿ ಗುಣಗಳನ್ನು ಹೊಂದಿರುವ ಈ ಜಂಬು ನೇರಳೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ.

ಸ್ಥಳೀಯ ರೈತರಿಗೂ ಲಾಭ
 ಮಹಾರಾಷ್ಟ್ರದ ರತ್ನಗಿರಿ ಮತ್ತು ಸಾಂಗ್ಲಿ ಜಿಲ್ಲೆಯಿಂದ ಈ ಹಣ್ಣುಗಳನ್ನ ತಂದು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಸದ್ಯ ನಮಮ್ಮ ರಾಜ್ಯದ ಕೋಲಾರ, ರಾಮನಗರ, ಧಾರವಾಡ ಹಾಗೂ  ನಾನಾ ಭಾಗಗಳಲ್ಲಿ ಬೆಳೆಯುತ್ತಿರುವ ಈ ಹಣ್ಣುಗಳನ್ನ ಸ್ಥಳೀಯ ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡುತ್ತಿರುವುದು ಖುಷಿಯ ವಿಚಾರ. ವಆಯಾ ಜಿಲ್ಲೆಯ ರೈತರಿಂದ ಖರೀದಿಸಿ ವ್ಯಾಪಾರ ಮಾಡುತ್ತಿರುವುದರಿಂದ ಸ್ಥಳೀಯ ರೈತರಿಗೂ ಲಾಭ ತಂದು ಕೊಟ್ಟಿದೆ.

ರೈತರಿಗೆ ತಪ್ಪಿದ ಸಾಗಾಣಿಕೆ ಹೊರೆ
ಅಲ್ಲದೇ ಆಯಾ ಭಾಗದ ನೇರಳೆ ಹಣ್ಣುಗಳು ಭಾರೀ ರುಚಿ ಇರೋದು ಕೂಡಾ ವ್ಯಾಪಾರಿಗಳ ವ್ಯಾಪಾರ ಹೆಚ್ಚಿಸಿದೆ. ಜೊತೆಗೆ ರೈತರಿಗೂ ಅಷ್ಟೇ ಸಾಗಾಣಿಕೆ ಹಣ ಉಳಿಯುತ್ತದೆ. ಅದೇನಿದ್ದರೂ ನೇರಳೆ ಕಂಡು ಬಾಯಿಚಪ್ಪರಿಸೋರಿಗೆ ಭಾರೀ ಇಷ್ಟವಾಗುತ್ತಿದೆ. ಹೆಚ್ಚಾಗಿ ಜಮೀನಿನ ಬದುವಿನಲ್ಲೇ ಬೆಳೆಯುವ ನೇರಳೆಹಣ್ಣಿಗೆ ಪಟ್ಟಣ, ನಗರ ಪ್ರದೇಶದ ಜನರಿಗೆ ಅಚ್ಚುಮೆಚ್ಚಿನ ಹಣ್ಣಾಗಿದೆ.

ಬೆಲೆ ಕೊಂಚ ಜಾಸ್ತಿ!
ಕಳೆದ ವರ್ಷ ಒಂದು ಕೆಜಿ ಹಣ್ಣಿನ ಬೆಲೆ 100 ರಿಂದ 120 ರೂಪಾಯಿ ಬೆಲೆ ಇತ್ತು. ಈ ವರ್ಷ ಹವಾಮಾನ ಬದಲಾವಣೆಯಾದ ಹಿನ್ನೆಲೆಯಲ್ಲಿ ಮರದಲ್ಲಿ ಹೆಚ್ಚು ಹೂವು, ಕಾಯಿಗಳು ಉದುರಿದ ಪರಿಣಾಮ ಇಳುವರಿ ಕುಂಠಿತಗೊಂಡು ಬೆಲೆ ಹೆಚ್ಚಾಗಿದೆ.

ಸದ್ಯ ಮಾರುಕಟ್ಟೆಯ ನೇರಳೆ ಹಣ್ಣು ಕೆಜಿಗೆ 150 ರಿಂದ 160 ರವರೆಗೆ ಮಾರಾಟವಾಗುತ್ತಿದೆ.  ನೇರಳೆ ಹಣ್ಣು ಸೇವನೆ ಸಾಕಷ್ಟು ಪ್ರಯೋಜನ ಇರೋದನ್ನ ಮನಗಂಡ ಗ್ರಾಹಕರು ನೇರಳೆ ಸವಿಯೋದಕ್ಕೆ ಮುಗಿಬೀಳ್ತಿದ್ದಾರೆ. ವಿಶೇಷವಾಗಿ ಸಕ್ಕರೆ ಕಾಯಿಲೆ ನಿಯಂತ್ರಿಸುವ ಹಾಗೂ ಜೀರ್ಣ ಶಕ್ತಿ ವೃದ್ಧಿಸುವ ಜಂಬುನೇರಳೆ ಸಿಗುವುದೇ ಈಗ ಅಪರೂಪವಾಗಿದೆ. ಹಾಗಾಗಿ ಈ ಸೀಸನ್​ನಲ್ಲಿ ದೊರೆಯುವ ಜಂಬು ನೇರಳೆಗೆ ಸಖತ್‌ ಡಿಮ್ಯಾಂಡ್‌ ಇರೋದಂತೂ ನಿಜ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

2026 ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರು
April 11, 2025
7:00 AM
by: The Rural Mirror ಸುದ್ದಿಜಾಲ
ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ
April 11, 2025
6:10 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಬಾಡಿಗೆ ಕೊಳವೆಬಾವಿಗಳಿಂದ ನೀರು ಪೂರೈಕೆ
April 11, 2025
6:00 AM
by: The Rural Mirror ಸುದ್ದಿಜಾಲ
ಶುಕ್ರ ನೇರ ಸಂಚಾರದ ಪರಿಣಾಮ : ಕೆಲ ರಾಶಿಗಳ ಮೇಲೆ ಪ್ರಭಾವ
April 11, 2025
5:51 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group