ಎಂತವಾ… ಹರ್ರಟ್ಟೆ…
ಈ ಮಳೆಗೆ ಗುಡಿ ಎಳ್ದು ಮಲಗ್ವಾಂತೇಳಿದ್ರೆ….ಷೋಕ್…
ಕಯಿಂ ಕುಯಿಂ
ಚೈಂ ಚುಯಿಂ…
ಎಂತ ಗೊತುಂಟ…..ಈಗ ಮೂರು ತಿಂಗಳಿಂದ
ಎರಡು ನಾಯಿ ಕುಂಞಗಳು….ಚಳಿಗೆ ಕಯಿಂ ಕುಯಿಂ ಹೇಳ್ತಾ ಇರೋದು….
ಹರಟೇಂದ್ರೆ ಹರಟೆ….ಹೇಳಿದ್ರೆ ಸೊಲ್ಪವೂ ಬಾ…ಇಲ್ಲ..
ಅದ್ರೊಟಿಗೆ ನಮದೊಂದು ಇನೊರ್ಟರು…
ಚೈಂ
ಚುಯಿಂ…
ಇದ್ಕೆ ಎಂತ ಸಂಖ್ಟಾಂತವಾ…
ಅದು ನಮ್ಮ ಸುವ್ಯವಸ್ಥಿತ ಕರಂಟು…
ಈ ಇನೋರ್ಟರ್ ನಿಮಿಷಕ್ಕೊಮ್ಮೆ ಕೂಗೋದೇ ಕೂಗೋದು….ಕರಂಟು ಬಂತೋ ,ಕರಂಟ್ ಹೋಯ್ತೋ ಅಂತ…ಹರಟೇಂದ್ರೆ ಹರಟೆ…ಈ ಇನೊರ್ಟರಿಗೇನು ಸಂಖ್ಟ…ಮನೆಯೊಳಗೆ ಕೂತು ಅರೆದ್ದೋದಷ್ಟೆ…
ಈ ಕರೆಂಟು ಈ ಮಳೆ ಗಾಳಿ ತಪ್ಸಿ ಕಂಬದ ಮೇಲಿನ ಸರಿಗೆಯಲ್ಲಿ ಜಾರ್ತಾ ಜಾರ್ತಾ ಸೈಕಲ್ ಬೇಲೆನ್ಸ್ ಮಾಡ್ತಾ ಬರ್ಬೇಡ್ವಾ….
ಎಂತವಾ…
ಅಷ್ಟೂ ಗೊತ್ತಾಗ್ದಿಲ್ವಾ…
ಈ ಕರೆಂಟು ದೊಡ್ಡ ಮದಿಮ್ಮಾಯನಾಗೆ….ಬಾರಿ ಮರ್ಯಾದೆ… ಇವ ವಯರಲಿ ಬರ್ವಾಗುಂಟಲ ಯಾರೂ ವಯರನ್ನು ಮುಟ್ಬಾರ್ದು…ಮುಟ್ಟಿದ್ರೆ ವಿಕ್ರಮ್ ಔರ್ ಬೇತಾಳನ ಕತೆಯ ಹಾಗೆ ಈ ಕರೆಂಟ್ ಪುನಃ ಮೂಲಸ್ಥಾನಕ್ಕೆ. ಈ ಕೆಲವು ಪುದೇಲ್ ಕಾಟು ಬಲ್ಲೆ, ಬಳ್ಲುಗಳುಂಟಲ್ಲ, ಇವಕ್ಕೆ ಈಗೀಗ ಹೆದ್ರಿಕೆ ಕಮ್ಮಿ…. ಸೀದ ಕಂಬ ಹತ್ತೋದೇ….ಅದ್ರಲಿ ಬೋರ್ಡ್ ಉಂಟು….ಕಂಬದ ಸುತ್ತ ಯಾರೂ ದನ ಮೆಯಿಸಬಾರದೂ…ಬಟ್ಟೆ ಒಣಗಿಸಬಾರದೂ, ಹಾಗೇಹೀಗೆ ಅಂತ….ಈ ಕಾಡು ಬಳ್ಳ್ ಬೂರುಗಳಿಗೆ ಅರ್ಥವೇ ಆಗೊದಿಲ್ಲ…
ಸೀದ ಹತ್ತೋದಂತ….ಕಂಬದಲ್ಲಿ ಹತ್ತಿದ್ ಸಾಲದ್ದಕೆ ಕಂಬದ ಸೈಡಲ್ಲಿ ಎಳ್ದು ಕಟ್ತಾರಲ್ಲ, ಹಾ…ಸ್ಟೇ ವಯರ್…ಅದ್ರಲ್ಲಿ ಕೂಡಾ ಸೀದ ಹತ್ತೋದೇ….ಹತ್ತಿ ಮೇಲೆ ಹೋಗಿ ….ಈ ಗಾಳಿ ಬರ್ವಾಗ…ಸೊಲ್ಪ ಸೊಲ್ಪ ಲೈನನ್ನು ಮುಟ್ಟಿ ನೋಡೋದು….ಆಗ ಈ ಮರ್ಯಾದಿಯ ಕರೆಂಟ್ರಾಯ ಸೀದ ಪದ್ರಾಡ್….ನಮ್ಮ ಇನೋರ್ಟರ್ ಬಂತೋ ಹೋಯ್ತೋ ಅಂತ ಈ ನಾಯಿ ಕುಂಞಿಗಳ ಒಟ್ಟಿಗೆ ಅರೆದ್ದೂದು….ಈ ಹೊಸ ಇನೋರ್ಟರ್ ಉಂಟಲ….ಬಜೀ ಉಪದ್ರ….ಸೊಲ್ಪವೂ ಎಜಸ್ಟ್ ಮೆಂಟಿಲ….ಹರಟೆ ಹರಟೆ….ಮೊದ್ಲಿನ ಇನೋರ್ಟರ್ ಗಡ್ಕ್ ಗುಢ್ಕ್ ಅಷ್ಟೇ ಹೇಳ್ತಿದ್ದದು….
ಎಂತಾ ಅವಸ್ಥೆ ಮಾರ್ರೇ ಈ ಸ್ಟೇ ವಯರಲ್ಲೀ, ಕಂಬಗಳಲ್ಲೀ ಈ ಕಾಟು ಬೂರುಗಳ ಬಡತ್ತಾಟ….ನಮಗೆ ಮಾರ್ಗದಲ್ಲಿ ಕಾರು ಬೈಕಲ್ಲಿ ಹೋಗ್ವಾಗ ಕಾಣ್ತದೆ….ಸಾದಾರ್ಣೆ ಎಲ್ಲಾ ಕಂಬಾ, ಸ್ಟೇ ವಯರಲ್ಲೂ ಮೊಸರುಕುಡಿಕೆಗೆ ಹತ್ತಿದಾಗೆ ಹತ್ತುತಾ ಉಂಟು….
ಮತ್ತೆಂತ ಗೊತ್ತಾ….ಕೆಲವು ಕರೆಂಟ್ ಲೈನೆಲ್ಲ…
ಸುಂಯ್ಕಂತ ಗೆಲ್ಲುಗಳ ಎಡೇಯಲ್ಲಿ ಮಾಟೆ ಮಾಡಿಕೊಂಡು ಊರಿಡಿಕ ಹಬ್ಬಿಕೊಂಡು ಹೋಗಿದ್ದಾವೆ….ಈ ಗೆಲ್ಲುಗಳಲ್ಲಿ, ಪೆಲ್ಕಾಯ್,ಮಾವಿನಕಾಯಿ, ಬೀಜಣ್ಣಾಗುವಾಗ ಬಾರ ಆಗಿ ಸೊಲ್ಪ ಇ ಲೈನಿನ ಮೇಲೆ ಒರಗೊದು, ಈ ಸೊಲ್ಪ ಮುಟ್ಟಿದ ಕೂಡ್ಲೇ ಈ ಕರೆಂಟ್ ಮದ್ಮಾಯನಿಗೆ ಮರ್ಯಾದೆ ಆಗಿ ಹೋಗಿ ಆಯ್ತು…ಹಾಗಾರೆ ಈ ಪೆಲ್ಕಾಯ್ ಭಾರ ಹೊರೋದ್ಯಾರು, ಚೋಯ್ಸ್ ನಿಮ್ಮದು…ನಿಮಗೆ ಪೆಲ್ಕಾಯ್, ಮಾವಿನಣ್ಣು ಬೆಕೂಂದ್ರೆ ಕರೆಂಟ್ ಸೊಲ್ಪ ಕಷ್ಟ, ಪೆಲ್ಕಾಯ್ ಮುಗಿದ ಮೇಲೆ ನೊಡೋಣ , ಅಲ್ಲ ಕರೆಂಟೇ ಬೆಕೂಂದ್ರೆ ಪೆಲ್ಕಾಯ್ ಕೊಯ್ ಬೇಕಷ್ಟೆ…ಎರಡೂ ಒಮ್ಮೆಲೇ ಆಗುವಹೋಗುವ ಒಯ್ವಾಟಲ್ಲ……
ಅಷ್ಟೂ ಎಜಸ್ಟಿಲ್ಲ….ಹೀಗೆ ಸೊಲ್ಲ ಸೊಲ್ಪ ಮುಟ್ಬಾರ್ದೂಂತ ಇದ್ರೆ ಇದನ್ಯಾರೂಂತ ಮೆಂಟೆನ್ಸ್ ಮಾಡೂದಪ್ಪಾ….ಇದನ್ನು ಹೇಗೆ ಮೆಂಟೆನ್ಸ್ ಮಾಡೂದಪ್ಪಾ….ಈ ಬಲ್ಲೆ ಸದೆ, ಬೂರು ಬಳ್ಳ್ ಒತ್ತರೆ ಮಾಡಿ ಆಗುವ ಹೋಗುವ ಕೆಲಸವಾ….ಇದೆಲ್ಲಾ ಆಗೂದೋಗೊದಲ್ಲ….
ಹೇಳಿದಾಗೆ ಈ ಕಂಬ,ಸ್ಟೇ ವಯ್ಯರಿಗೆಲ್ಲ ಬಸಳೆ, ಲತ್ತಂಡೆ ಬಳ್ಲ್ ಬಿಟ್ರೆ ಎನಾದೀತು….ಇಟೆತ್ರ ಹೋಗಿ ಕರೆಂಟ್ರಾಯನಿಗೆ ತೊಂದ್ರೆ ಕೊಟ್ಟಾವಾ.. ಷೋಕ್ … ಹರ್ರಟ್ಟೆ…