ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ಈಚೆಗೆ ‘ಪುಸ್ತಕ ಸಂತೆ’ ಸಂಪನ್ನಗೊಂಡಿತು. ಇದರ ಸಮಾರೋಪ ಸಮಾರಂಭದಲ್ಲಿ ಪುತ್ತೂರಿನ ಸಾಹಿತ್ಯ ಪರಿಚಾರಕ ಪ್ರಕಾಶ್ ಕುಮಾರ್ ಕೊಡೆಂಕಿರಿ ಅವರನ್ನು ಸಂಮಾನಿಸಲಾಯಿತು.
ಈ ಸಂದರ್ಭದಲ್ಲಿ “ಜೀವನದಲ್ಲಿ ಆಸಕ್ತಿಗಳನ್ನು ಸಕ್ರಿಯಗೊಳಿಸಿದಾಗ ಅದು ಇತರರಿಗೆ ‘ಹುಚ್ಚು’ ಎಂದೆನಿಸಿಕೊಳ್ಳುತ್ತದೆ. ಇಂತಹ ಹುಚ್ಚುಗಳೇ ಬದುಕಿಗೆ ಸುಭಗತನವಾಗುತ್ತದೆ. ಓದುವ ಆಸಕ್ತಿ ಬೆಳೆಯುತ್ತದೆ” ಎಂದು ತನ್ನ ಅನುಭವವನ್ನು ಪ್ರಸ್ತುತ ಪಡಿಸಿದ ಪ್ರಕಾಶರನ್ನು ಶಾಲು, ಹಾರ, ಸ್ಮರಣಿಕೆ, ಪುಸ್ತಕಗಳು ಮತ್ತು ನಗದು ಮೊತ್ತದೊಂದಿಗೆ ಗೌರವಿಸಲಾಯಿತು.
ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಸಿ.ಆರ್.ಚಂದ್ರಶೇಖರ್, ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಎಂ.ಪಿ.ಕುಮಾರ್ ಉಪಸ್ಥಿತರಿದ್ದು ಸಂಮಾನಿತರ ಸದ್ದಿಲ್ಲದ ಸಾಹಿತ್ಯ ಕೈಂಕರ್ಯಗಳನ್ನು ನೆನಪಿಸಿಕೊಂಡರು. ಪುಸ್ತಕ ಪ್ರಕಾಶನ, ಸಂಚಾರಿ ಪುಸ್ತಕ ಮಳಿಗೆ, ಸದಭಿರುಚಿಯ ಪುಸ್ತಕಗಳ ಪ್ರಕಟಣೆ, ಸಾಹಿತಿಗಳ ಸಂಪರ್ಕ ಜತೆಗೆ ನಿರಂತರ ಓದು. ಪ್ರಕಾಶ್ ಕೊಡೆಂಕಿರಿಯವರ ಸದ್ದಿಲ್ಲದ ಕಾಯಕಗಳು. 2004ರಲ್ಲಿ ‘ಪ್ರಥಮ ಗೃಹ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ತನ್ನ ಮನೆಯಲ್ಲೇ, ಸ್ವ-ವೆಚ್ಚದಲ್ಲಿ ಏರ್ಪಡಿಸಿರುವುದು ಮೇಲ್ಪಂಕ್ತಿ.
ಅಡಿಕೆ ಆಮದು ತಡೆಯ ನಿಟ್ಟಿನಲ್ಲಿ ಡಿಜಿಎಫ್ಟಿ(DGFT) ಹುರಿದ ಅಡಿಕೆಯ ನೆಪದಲ್ಲಿ ಬರುವ ಅನಿರ್ಬಂಧಿತ…
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಸೇರಿದಂತೆ ಮಲೆನಾಡು ಭಾಗದ ಕೆಲವು ಕಡೆ…
ಈಗಿನಂತೆ ಎಪ್ರಿಲ್ 7 ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ.
ಕಲಬುರಗಿ ಹೈಕೋರ್ಟ್ ಪೀಠವು ನಾರಾಯಣಪುರ ಜಲಾಶಯದಿಂದ ಕಾಲುವೆಗೆ ನೀರು ಹರಿಸುವಂತೆ ಆದೇಶ ನೀಡಿದರೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490