ಎನ್ ಡಿಟಿವಿಯ ಪೋಷಕ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಪ್ರಣಯ್ ರಾಯ್ ಹಾಗೂ ಅವರ ಪತ್ನಿ ರಾಜೀನಾಮೆ

Advertisement
Advertisement

ನ್ಯೂ ಡೆಲ್ಲಿ ಟೆಲಿವಿಷನ್‌ನ (ಎನ್‌ಡಿಟಿವಿಯ) ಪೋಷಕ ಸಂಸ್ಥೆ ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ ಲಿಮಿಟೆಡ್‌ನ ನಿರ್ದೇಶಕ ಸ್ಥಾನಕ್ಕೆ ಸಂಸ್ಥಾಪಕರಾದ ಪ್ರಣಯ್‌ ರಾಯ್‌ ಹಾಗೂ ಅವರ ಪತ್ನಿ ರಾಧಿಕಾ ರಾಯ್‌ ರಾಜೀನಾಮೆ ನೀಡಿದ್ದಾರೆ.

Advertisement

ಅಲ್ಲಿಗೆ ಏಷ್ಯಾದ ನಂಬರ್‌ 1 ಶ್ರೀಮಂತ ಗೌತಮ್‌ ಅದಾನಿ ಅವರ ‘ಮಿಷನ್ ಎನ್‌ಡಿಟಿವಿ’ ಬಹುತೇಕ ಯಶಸ್ವಿಯಾಗಿದೆ.

Advertisement
Advertisement

ನವೆಂಬರ್‌ 29ರಿಂದಲೇ ಇವರ ರಾಜೀನಾಮೆ ಅನ್ವಯವಾಗಲಿದೆ ಎಂದು ಸೆಬಿಗೆ ಸಲ್ಲಿಸಲಾದ ದಾಖಲೆಯಲ್ಲಿ ಹೇಳಲಾಗಿದೆ.
ಸೆಬಿಗೆ ಸಲ್ಲಿಸಲಾಗಿರುವ ದಾಖಲೆಯ ಪ್ರತಿ ಕೆಲ ದಿನಗಳ ಹಿಂದಷ್ಟೇ ಆರ್‌ಆರ್‌ಪಿಆರ್‌ ಅನ್ನು ಅದಾನಿ ಖರೀದಿ ಮಾಡಿದ್ದರು. ಈ ಸಂಸ್ಥೆಯು ಎನ್‌ಡಿಟಿವಿಯಲ್ಲಿ ಶೇ 29.18 ರಷ್ಟು ಪಾಲು ಹೊಂದಿದೆ.

ಪ್ರಣಯ್‌ ರಾಯ್‌ ಅವರು ಎನ್‌ಡಿಟಿವಿಯ ಮುಖ್ಯಸ್ಥರಾಗಿದ್ದು, ರಾಧಿಕಾ ರಾಯ್‌ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ. ಈ ಇಬ್ಬರೂ ಎನ್‌ಡಿಟಿವಿಯ ಈ ಹುದ್ದೆಗಳಲ್ಲಿ ಮುಂದುವರಿಯಲಿದ್ದಾರೆ.

Advertisement
Advertisement

ವೈಯಕ್ತಿಕವಾಗಿ ರಾಯ್‌ ದಂಪತಿಗಳು ಎನ್‌ಡಿಟಿವಿಯಲ್ಲಿ ಶೇ 32.26 ರಷ್ಟು ಪಾಲು ಹೊಂದಿದ್ದಾರೆ. ಇವರಿಬ್ಬರ ರಾಜೀನಾಮೆ ಬೆನ್ನಲ್ಲೇ, ಸುದೀಪ್ತಾ ಭಟ್ಟಾಚಾರ್ಯ, ಸಂಜಯ್‌ ಪುಗಾಲಿಯಾ ಹಾಗೂ ಸೆಂಥಿಲ್‌ ಸಿನ್ನಯ್ಯ ಚೆಂಗಲ್‌ವರಯನ್‌ ಅವರನ್ನು ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಎನ್ ಡಿಟಿವಿಯ ಪೋಷಕ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಪ್ರಣಯ್ ರಾಯ್ ಹಾಗೂ ಅವರ ಪತ್ನಿ ರಾಜೀನಾಮೆ"

Leave a comment

Your email address will not be published.


*