ದಕ್ಷಿಣ ಕನ್ನಡ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ ನಿಯಮಿತ – ಜನತಾ ಬಜಾರ್ ಇದರ ನೂತನ ಅಧ್ಯಕ್ಷರಾಗಿ ಕಡಬ ತಾಲೂಕಿನ ಎಣ್ಮೂರಿನ ಪ್ರಸನ್ನ ಕೆ. ಹಾಗೂ ಉಪಾಧ್ಯಕ್ಷರಾಗಿ ಮದಲಾಕ್ಷಿ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜನತಾ ಬಜಾರ್ ಅಧ್ಯಕ್ಷ –ಉಪಾಧ್ಯಕ್ಷ ಹುದ್ದೆಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಾದ ಪ್ರಸನ್ನ ಕೆ ಎಣ್ಮೂರು ಮತ್ತು ಮದಲಾಕ್ಷಿ ರೈ ಅಧ್ಯಕ್ಷ –ಉಪಾಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದು ಬೇರಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿ ವಿಲಾಸ್ ಈ ಇಬ್ಬರ ಆಯ್ಕೆಯನ್ನು ಘೋಷಿಸಿದರು.
ನಿರ್ದೇಶಕರಾಗಿ ದಿನೇಶ್ ಹೆಗ್ಡೆ, ಪುರುಷೋತ್ತಮ ಭಟ್, ಮೋಹನ್ ಕುಂಬ್ಳೇಕರ್, ಶಾಂತಾ ಆರ್, ಉದಯ ಮಾದೋಡಿ, ಭಾಗೀರಥಿ ಮುರುಳ್ಯ, ಪಕೀರಪ್ಪ, ಸುಜಯ ಹೇಮಚಂದ್ರ, ಬಿ.ಜನಾರ್ದನ, ನವೀನ್ ಬಾಳುಗೋಡು, ಶಶಿಧರ ಶೆಟ್ಟಿ ಮತ್ತು ದಯಾನಂದ ಅಡ್ಯಾರ್ ಆಯ್ಕೆಯಾಗಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.



