ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ | ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನಲ್ಲಿ ಸುದ್ದಿಗೋಷ್ಟಿ | ಶಿಹಾಬ್ ಈ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ |

Advertisement

ಬಿಜೆಪಿ ಯುವಮೋರ್ಚಾ ಮುಖಂಡ , ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಡೀ ಪ್ರಕರಣದ ಮಾಸ್ಟರ್‌ ಮೈಂಡ್‌ ಶಿಹಾಬ್  ಎಂದು ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

Advertisement

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಬೇಧಿಸಿದ ಜಿಲ್ಲಾ ಪೊಲೀಸರು  ಇಡೀ ಪ್ರಕರಣದ ಪ್ರಮುಖ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ  ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳು ಶಿಹಾಬುದ್ದೀನ್ ಸುಳ್ಯ(33), ಬಶೀರ್ ಎಲಿಮಲೆ (29) ರಿಯಾಸ್ ಅಂಕತ್ತಡ್ಕ (27).  ಸುಳ್ಯದ ಶಿಹಾಬುದ್ದೀನ್‌ ಈ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್  ಆಗಿದ್ದಾನೆ ಎಂದು ಎಜಿಡಿಪಿ ಮಾಹಿತಿ ನೀಡಿದರು.

Advertisement
Advertisement
Advertisement

ಆರೋಪಿಗಳ ಬಗ್ಗೆ ಮಾಹಿತಿ ಇದ್ದರೂ ಪದೇ ಪದೇ ಸ್ಥಳ ಬದಲಾವಣೆ ಮಾಡುತ್ತಿದ್ದ ಕಾರಣ ಪ್ರಮುಖ ಆರೋಪಿಗಳ ಬಂಧನಕ್ಕೆ ತಡವಾಗಿದೆ.ಹತ್ಯೆ ಮಾಡಿದ ಬಳಿಕ ಆರೋಪಿಗಳು ಕಾಸರಗೋಡಿನ ಮಸೀದಿಯೊಂದರಲ್ಲಿ ಆಶ್ರಯ ಪಡೆದಿದ್ದಾರೆ ಎನ್ನುವುದು ಮಾಹಿತಿ ಲಭ್ಯವಾಗಿದೆ. ಅದಾದ ನಂತರ ಸ್ಥಳ ಬದಲಾವಣೆಗಾಗಿ ಎಲ್ಲೆಲ್ಲಾ ಹೋಗಿದ್ದಾರೆ ಎಂಬ ಮಾಹಿತಿ ಪಡೆಯಲಾಗುತ್ತಿದ್ದು ತನಿಖೆಯ ಬಳಿಕ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು. ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎನ್ನುವುದು  ತನಿಖೆ ನಡೆಸಲಾಗುತ್ತಿದೆ. ಇದುವರೆಗೆ ಈ ಆರೋಪಿಗಳ ಮೇಲೆ ಬೇರೆ ಯಾವುದೇ ಕೇಸುಗಳು ಇಲ್ಲ. ಆರೋಪಿಗಳಿಗೆ ಯಾವೆಲ್ಲಾ ಸಂಘಟನೆಗಳ ಜೊತೆ ಲಿಂಕ್‌ ಇದೆ ಎನ್ನುವುದನ್ನು  ಪತ್ತೆ ಮಾಡಲಾಗುತ್ತಿದೆ, ತನಿಖೆಯ ಸಂಪೂರ್ಣ ವರದಿಯನ್ನು ಎನ್ ಐ  ಎ ಗೆ ನೀಡಲಿದ್ದೇವೆ ಮುಂದಕ್ಕೆ ಅವರು ತನಿಖೆ ಮುಂದುವರಿಸಲಿದ್ದಾರೆ ಎಂದು ಅಲೋಕ್‌ ಕುಮಾರ್‌ ಮಾಹಿತಿ ನೀಡಿದರು.

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ | ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನಲ್ಲಿ ಸುದ್ದಿಗೋಷ್ಟಿ | ಶಿಹಾಬ್ ಈ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ |"

Leave a comment

Your email address will not be published.


*