ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ | ಮಧ್ಯಾಹ್ನ ಸುದ್ದಿಗೋಷ್ಟಿಯಲ್ಲಿ ಸಮಗ್ರ ಮಾಹಿತಿ | ಆರೋಪಿಗಳ ಬಂಧನ – ತನಿಖೆಯ ಹಾದಿಯ ಬಗ್ಗೆ ವಿವರ ಸಾಧ್ಯತೆ | ಪ್ರಕರಣದ ಬಗ್ಗೆ ಏನೇನು ತಪ್ಪು ಮಾಹಿತಿ ಇತ್ತು?

ಪ್ರವೀಣ್‌ ನೆಟ್ಟಾರು
Advertisement

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಮಧ್ಯಾಹ್ನ ಸುದ್ದಿಗೋಷ್ಟಿ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ಮಾಹಿತಿ ಹಾಗೂ ಆರೋಪಿಗಳ ಬಂಧನ, ತನಿಖೆಯ ಹಾದಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ.

Advertisement

ಸದ್ಯದ ಮಾಹಿತಿ ಪ್ರಕಾರ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳೂ ಸುಳ್ಯ ಆಸುಪಾಸಿನವರೇ ಆಗಿದ್ದಾರೆ. ತನಿಖೆಯ ಹಾದಿ ತಪ್ಪಿಸಲು ಕೇರಳ ವಾಹನ ಬಳಕೆ, ಗಡಿಭಾಗದವರೆಗೆ ಹಂತಕರ ಬಿಟ್ಟಿರುವ ಬಗ್ಗೆ ಸುಳ್ಳು ಮಾಹಿತಿ, ಮಾಹಿತಿಯೇ ತಿಳಿದಿಲ್ಲ ಎಂಬ ತಪ್ಪು ಮಾಹಿತಿ ಇತ್ಯಾದಿಗಳ ಮೂಲಕ ಇಡೀ ಪ್ರಕರಣ ದಿಕ್ಕು ತಪ್ಪಿಸುವಂತೆ ಪ್ರಯತ್ನ ಮಾಡಲಾಗಿತ್ತು. ಆದರೆ ಪೊಲೀಸರು ತಮ್ಮ ಜಾಲದ ಮೂಲಕ ಎಲ್ಲಾ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.  ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ 6 ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ತುರ್ತು ಸಭೆಯೂ ಆ.10 ರಂದು ಬೆಳ್ಳಾರೆಯಲ್ಲಿ ನಡೆದಿತ್ತು. ಎನ್‌ ಐ ಎ ಕೂಡಾ ತನಿಖೆ ನಡೆಸುತ್ತಿದೆ. ಇಂದು ಎಸ್.ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಮೂಲಕ ಪ್ರಕರಣದ ಸಮಗ್ರವಾದ ಅಧಿಕೃತ ಮಾಹಿತಿ ಹೊರಬೀಳಲಿದೆ.

Advertisement
Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement
Advertisement

Be the first to comment on "ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ | ಮಧ್ಯಾಹ್ನ ಸುದ್ದಿಗೋಷ್ಟಿಯಲ್ಲಿ ಸಮಗ್ರ ಮಾಹಿತಿ | ಆರೋಪಿಗಳ ಬಂಧನ – ತನಿಖೆಯ ಹಾದಿಯ ಬಗ್ಗೆ ವಿವರ ಸಾಧ್ಯತೆ | ಪ್ರಕರಣದ ಬಗ್ಗೆ ಏನೇನು ತಪ್ಪು ಮಾಹಿತಿ ಇತ್ತು?"

Leave a comment

Your email address will not be published.


*