ಭಾರತ ಪಾಲಿಗೆ ಎರಡು ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿರುವ ಕ್ಷಣಗಳಾದ 18 ವರ್ಷ ವಯಸ್ಸಿನ ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ FIDE ಚೆಸ್ ವರ್ಲ್ಡ್ ಕಪ್ ನ ನಂಬರ್ ವನ್ ರ‍್ಯಾಂಕಿಂಗ್ ನ ಮ್ಯಾಗ್ನಸ್ ಕಾರ್ಲ್ ಸನ್ ಜೊತೆಗೆ 2 ನೇ ಸುತ್ತಿನ ಆಟ ನಡೆಯಲಿದೆ. ಈಗಾಗಲೇ ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶ ಭಾರತ ಆಗಿದ್ದು ಇಂದು ಸಂಜೆ 6 ಸಮಯಕ್ಕೆ ಚಂದ್ರಯಾನ-3 ನೌಕೆ ಚಂದ್ರನ ಮೇಲೆ ಲ್ಯಾಂಡಿಂಗ್ ಆಗುವ ಮೂಲಕ ನಮ್ಮ ಭಾರತ ಇತಿಹಾಸ ಬರೆಯಲಿದೆ. ಈ ಎರಡು ಕ್ಷಣಗಳಲ್ಲಿ ಭಾರತಕ್ಕೆ ಗೆಲುವು ಸಿಗಲೆಂದು ಪುತ್ತೂರಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುತ್ತಿಲ ಪರಿವಾರದ ವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
Special prayer was offered by the Puttila Parivar at Puttur Sri Mahalingeshwar Temple for the victory of India’s Chess Grand Master Pragyananda in the FIDE Chess World Cup and the successful landing of Chandrayaan3 on the moon#Chandrayaan3Landing
#Chandrayaan3
#Chandrayaan_3 pic.twitter.com/7AL9J5pHcvAdvertisement— theruralmirror (@ruralmirror) August 23, 2023
ವಿಶ್ವವೇ ಭಾರತದ ಸಾಧನೆಗೆ ಕಣ್ಣೆತ್ತಿ ನೋಡುತ್ತಿದೆ. ಪ್ರಜ್ಞಾನಂದರಿಗೆ ಹಾಗೂ ಚಂದ್ರಯಾನ ಯಶಸ್ವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಮಾರ್ತ, ನಗರ ಅಧ್ಯಕ್ಷರಾದ ಅನಿಲ್ ತೆಂಕಿಲ, ರಾಜ್ ಶೆಟ್ಟಿ , ಪ್ರವೀಣ್ ಭಂಡಾರಿ, ರವಿ ಶೆಟ್ಟಿ, ಪ್ರಕಾಶ್, ಶನ್ಮಿತ್, ಮನೀಶ್ ಬನ್ನೂರು, ದಯಾನಂದ ರೈ ಪ್ರಾರ್ಥನೆ ಸಂದರ್ಭ ಉಪಸ್ಥಿತರಿದ್ದರು.