ಮಳೆ(Rain) ಬಾರದೆ ರಾಜ್ಯದಾದ್ಯಂತ ಬರಗಾಲದ(Drought) ಪರಿಸ್ಥಿತಿ ಎದುರಾಗಿರುವ ಕಾರಣ ಶ್ರೀ ಕ್ಷೇತ್ರ ಭಾಗಮಂಡಲದಲ್ಲಿ(Bhagamandala) ವಿಶೇಷ ಪೂಜೆ(pooja) ಮತ್ತು ಬೆಳ್ಳಿಯ ಹರಕೆಯನ್ನು ಸಮರ್ಪಿಸಲಾಯಿತು. ವಿಶ್ವ ಹಿಂದೂ ಪರಿಷತ್(vishwa Hindu parishath) ಕೊಡಗು(kodagu) ಮತ್ತು ಬೆಂಗಳೂರು(Bengaluru) ಮಹಾನಗರ, ಬನಶಂಕರಿ ಜಿಲ್ಲೆಯ ಕಾರ್ಯಕರ್ತರ ವತಿಯಿಂದ ಪೂಜೆ ಸಲ್ಲಿಸಲಾಯಿತು.
ಜೀವನದಿ ತಲಕಾವೇರಿಯ ಪವಿತ್ರ ತೀರ್ಥಕುಂಡಿಕೆಯಲ್ಲಿ ವಿಶೇಷ ಬಾಗಿನ ಸಮರ್ಪಣೆ ನಡೆಸಿ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುವಂತೆ ತಾಯಿ ಕಾವೇರಿ ಕರುಣಿಸಿ ಹರಸಲಿ ಎಂದು ಪ್ರಾರ್ಥಿಸಲಾಯಿತು. ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ್ಯ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಮಾತನಾಡಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಜನರು ಮಳೆಯಿಲ್ಲದೆ ನೀರಿಲ್ಲದೆ ಬರಗಾಲದ ಪರಿಸ್ಥಿತಿಯನ್ನು ಎದುರಿಸುವಂತಾಗಿದ್ದು, ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು ಕಾವೇರಿನದಿಯ ಉಗಮಸ್ಥಾನ ತಲಕಾವೇರಿಯಲ್ಲಿ ಮಳೆಯು ಸಕಾಲದಲ್ಲಿ ಬರಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.