ಚಿಪ್ಸ್, ನೂಡಲ್ಸ್, ಸಂಸ್ಕರಿಸಿದ ಆಹಾರದಿಂದ ಅಕಾಲಿಕ ಮರಣ | ವಿಶ್ವ ಆರೋಗ್ಯ ಸಂಘಟನೆ ವರದಿ

March 12, 2023
12:47 PM

ಈಗಿನ ಮಕ್ಕಳಿಗೆ, ಹಾಗೆ ಯುವಕರಿಗೂ ಜಂಕ್ ಫುಡ್ ಒಂದು ಬಿಟ್ರೆ ಬೇರೆ ತಿನಿಸುಗಳೆಲ್ಲಾ ತಿನಿಸೇ ಅಲ್ಲ. ಅಷ್ಟರ ಮಟ್ಟಿಗೆ ಇದಕ್ಕೆ ಜೋತು ಬಿದ್ದಿದ್ದಾರೆ. ಇದನ್ನು ತಿನ್ನುವ ಅಭ್ಯಾಸ  ಇರುವವರಿಗೆ ಇಲ್ಲಿದೆ ಎಚ್ಚರಿಕೆಯ ಸುದ್ದಿ.

Advertisement
Advertisement
Advertisement
Advertisement
ದೇಹದಲ್ಲಿನ ನೀರು ಮತ್ತು ಖನಿಜಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸೋಡಿಯಂ ಪ್ರಮುಖ ಪೋಷಕಾಂಶವಾಗಿದೆ. ಸೋಡಿಯಂ ಅಂದರೆ ಉಪ್ಪಿನ ಅಧಿಕ ಸೇವನೆಯು ಅನೇಕ ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.

Advertisement

ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸೋಡಿಯಂ ಪ್ರಮುಖ ಪೋಷಕಾಂಶವಾಗಿದ್ದರೂ, ಹೆಚ್ಚಿನ ಪ್ರಮಾಣದ ಸೋಡಿಯಂ ಸೇವನೆಯು ಅನೇಕ ದೀರ್ಘಕಾಲದ ಕಾಯಿಲೆಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ಅಕಾಲಿಕ ಮರಣದ ಅಪಾಯವನ್ನು ಉಂಟುಮಾಡುತ್ತದೆ. ಹೆಚ್ಚು ಉಪ್ಪನ್ನು ತಿನ್ನುವುದರಿಂದ ಇದು ನಮ್ಮ ಹೃದಯದ ಕಾಯಿಲೆ, ಪಾರ್ಶ್ವವಾಯು ಮತ್ತು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ.

ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಘಟನೆಯ ಸೋಡಿಯಂ ಸೇವನೆಯ ಕಡಿತದ ಕುರಿತ ಮೊದಲ ಜಾಗತಿಕ ವರದಿಯು 2025ರ ವೇಳೆಗೆ ಪ್ರಪಂಚವು ಸೋಡಿಯಂ ಸೇವನೆಯನ್ನು 30% ನಷ್ಟು ಕಡಿಮೆ ಮಾಡುವ ಜಾಗತಿಕ ಗುರಿಯನ್ನು ಸಾಧಿಸಲು ಹೊರಗುಳಿದಿದೆ ಎಂದು ತೋರಿಸುತ್ತದೆ. ಹಾಗೂ WHO ಸದಸ್ಯ ರಾಷ್ಟ್ರಗಳಲ್ಲಿ 5% ಮಾತ್ರ ಕಡ್ಡಾಯ ಹಾಗೂ ಸಮಗ್ರ ಸೋಡಿಯಂ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ವರದಿ ಹೇಳಿದೆ.

Advertisement

ದೇಹದಲ್ಲಿನ ನೀರು ಮತ್ತು ಖನಿಜಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸೋಡಿಯಂ ಪ್ರಮುಖ ಪೋಷಕಾಂಶವಾಗಿದೆ. ಸೋಡಿಯಂ ಅಂದರೆ ಉಪ್ಪಿನ ಅಧಿಕ ಸೇವನೆಯು ಅನೇಕ ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ ಹಾಗೂ ಅಕಾಲಿಕ ಮರಣಕ್ಕೂ ಕಾರಣವಾಗುತ್ತದೆ.

ಸೋಡಿಯಂನ ಮುಖ್ಯ ಮೂಲವೆಂದರೆ ಪುಡಿ ಉಪ್ಪು (ಸೋಡಿಯಂ ಕ್ಲೋರೈಡ್), ಆದರೆ ಇದು ಸೋಡಿಯಂ ಗ್ಲುಟಮೇಟ್‌ನಂತಹ ಇತರ ಅಂಶಗಳನ್ನೂ ಹೊಂದಿದೆ. ಫಾಸ್ಟ್ ಫುಡ್, ಚಿಪ್ಸ್, ಸಂಸ್ಕರಿಸಿದ ತಿಂಡಿಗಳು, ಸೂಪ್‌ಗಳು, ಸಂಸ್ಕರಿಸಿದ ಮಾಂಸಗಳು, ಇನ್‌ಸ್ಟೆಂಟ್ ನೂಡಲ್ಸ್ ಇವೆಲ್ಲವೂ ಹೆಚ್ಚಾಗಿ ಸೋಡಿಯಂ ಗ್ಲುಟಮೇಟ್‌ನ್ನು ಹೊಂದಿರುತ್ತದೆ. ಹಾಗೂ ಇಂತಹ ಆಹಾರ ಪದಾರ್ಥಗಳ ನಿಯಮಿತ ಸೇವನೆಯು ನಮ್ಮ ಆರೋಗ್ಯದ ಮೇಲೆ ಹಾನಿಯುಂಟುಮಾಡುತ್ತವೆ.

Advertisement

ಹೆಚ್ಚಿನ ಪ್ರಮಾಣದ ಸೋಡಿಯಂ ಸೇವನೆಯು ಗ್ಯಾಸ್ಟಿಕ್, ಕ್ಯಾನ್ಸರ್, ಸ್ಥೂಲಕಾಯತೆ, ಆಸ್ಟಿಯೊಪೊರೋಸಿಸ್ ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಆರೋಗ್ಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಎಂದು ವರದಿ ಹೇಳುತ್ತದೆ. ಆರೋಗ್ಯಕರವಲ್ಲದ ಆಹಾರಗಳ ಸೇವನೆಯು ಹಾಗೂ ಅತಿಯಾದ ಸೋಡಿಯಂ ಸೇವನೆಯು ಜಾಗತಿಕ ಮಟ್ಟದಲ್ಲಿ ಅಕಾಲಿಕ ಮರಣ ಮತ್ತು ಸಾವುಗಳಿಗೆ ಮುಖ್ಯ ಕಾರಣ ಎಂದು WHO ನ ಮಹಾನಿರ್ದೇಶಕ ಡಾ. ಟೆಡ್ರೋಸ್ ಅಧಾನಮ್ ಘೆಬ್ರೆಯೆಸಸಸ್ ಹೇಳಿದರು.

ಹೆಚ್ಚಿನ ದೇಶಗಳಲ್ಲಿ ಇನ್ನೂ ಯಾವುದೇ ಕಡ್ಡಾಯ ಸೋಡಿಯಂ ಕಡಿತ ನೀತಿಗಳನ್ನು ಅಳವಡಿಸಿಲ್ಲ ಎಂದು WHO ವರದಿ ಹೇಳುತ್ತದೆ. ರಾಷ್ಟ್ರಗಳು ಕಠಿಣ ಕ್ರಮಗಳನ್ನು ಅನುಸರಿಸದೆ ತಮ್ಮ ಜನರನ್ನು ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಆರೋಗ್ಯ ಸಮಸ್ಯೆಗಳ ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಹೇಳಿದೆ. ಸೋಡಿಯಂ ಸೇವನೆ ಕಡಿತಕ್ಕಾಗಿ ‘ಬೆಸ್ಟ್ ಬೈಸ್’ನ್ನು ಜಾರಿಗೆ ತರಲು WHO ಎಲ್ಲಾ ದೇಶಗಳಿಗೆ ಕರೆ ನೀಡಿದೆ. ಮತ್ತು ಆಹಾರ ತಯಾರಕರ ಮೇಲೆ ಸೋಡಿಯಂ ಮಟ್ಟದ ಮಾನದಂಡವನ್ನು ಅಳವಡಿಸಲು ಕೆಲವೊಂದು ನೀತಿಗಳನ್ನು ಜಾರಿಗೆ ತಂದಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ
February 24, 2025
12:14 PM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ
February 24, 2025
12:09 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 24-02-2025 | ಫೆ.28 ರಂದು ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ |
February 24, 2025
12:04 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 23-02-2025 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror