ಈಗಿನ ಮಕ್ಕಳಿಗೆ, ಹಾಗೆ ಯುವಕರಿಗೂ ಜಂಕ್ ಫುಡ್ ಒಂದು ಬಿಟ್ರೆ ಬೇರೆ ತಿನಿಸುಗಳೆಲ್ಲಾ ತಿನಿಸೇ ಅಲ್ಲ. ಅಷ್ಟರ ಮಟ್ಟಿಗೆ ಇದಕ್ಕೆ ಜೋತು ಬಿದ್ದಿದ್ದಾರೆ. ಇದನ್ನು ತಿನ್ನುವ ಅಭ್ಯಾಸ ಇರುವವರಿಗೆ ಇಲ್ಲಿದೆ ಎಚ್ಚರಿಕೆಯ ಸುದ್ದಿ.
ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸೋಡಿಯಂ ಪ್ರಮುಖ ಪೋಷಕಾಂಶವಾಗಿದ್ದರೂ, ಹೆಚ್ಚಿನ ಪ್ರಮಾಣದ ಸೋಡಿಯಂ ಸೇವನೆಯು ಅನೇಕ ದೀರ್ಘಕಾಲದ ಕಾಯಿಲೆಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ಅಕಾಲಿಕ ಮರಣದ ಅಪಾಯವನ್ನು ಉಂಟುಮಾಡುತ್ತದೆ. ಹೆಚ್ಚು ಉಪ್ಪನ್ನು ತಿನ್ನುವುದರಿಂದ ಇದು ನಮ್ಮ ಹೃದಯದ ಕಾಯಿಲೆ, ಪಾರ್ಶ್ವವಾಯು ಮತ್ತು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ.
ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಘಟನೆಯ ಸೋಡಿಯಂ ಸೇವನೆಯ ಕಡಿತದ ಕುರಿತ ಮೊದಲ ಜಾಗತಿಕ ವರದಿಯು 2025ರ ವೇಳೆಗೆ ಪ್ರಪಂಚವು ಸೋಡಿಯಂ ಸೇವನೆಯನ್ನು 30% ನಷ್ಟು ಕಡಿಮೆ ಮಾಡುವ ಜಾಗತಿಕ ಗುರಿಯನ್ನು ಸಾಧಿಸಲು ಹೊರಗುಳಿದಿದೆ ಎಂದು ತೋರಿಸುತ್ತದೆ. ಹಾಗೂ WHO ಸದಸ್ಯ ರಾಷ್ಟ್ರಗಳಲ್ಲಿ 5% ಮಾತ್ರ ಕಡ್ಡಾಯ ಹಾಗೂ ಸಮಗ್ರ ಸೋಡಿಯಂ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ವರದಿ ಹೇಳಿದೆ.
ದೇಹದಲ್ಲಿನ ನೀರು ಮತ್ತು ಖನಿಜಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸೋಡಿಯಂ ಪ್ರಮುಖ ಪೋಷಕಾಂಶವಾಗಿದೆ. ಸೋಡಿಯಂ ಅಂದರೆ ಉಪ್ಪಿನ ಅಧಿಕ ಸೇವನೆಯು ಅನೇಕ ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ ಹಾಗೂ ಅಕಾಲಿಕ ಮರಣಕ್ಕೂ ಕಾರಣವಾಗುತ್ತದೆ.
ಸೋಡಿಯಂನ ಮುಖ್ಯ ಮೂಲವೆಂದರೆ ಪುಡಿ ಉಪ್ಪು (ಸೋಡಿಯಂ ಕ್ಲೋರೈಡ್), ಆದರೆ ಇದು ಸೋಡಿಯಂ ಗ್ಲುಟಮೇಟ್‌ನಂತಹ ಇತರ ಅಂಶಗಳನ್ನೂ ಹೊಂದಿದೆ. ಫಾಸ್ಟ್ ಫುಡ್, ಚಿಪ್ಸ್, ಸಂಸ್ಕರಿಸಿದ ತಿಂಡಿಗಳು, ಸೂಪ್‌ಗಳು, ಸಂಸ್ಕರಿಸಿದ ಮಾಂಸಗಳು, ಇನ್‌ಸ್ಟೆಂಟ್ ನೂಡಲ್ಸ್ ಇವೆಲ್ಲವೂ ಹೆಚ್ಚಾಗಿ ಸೋಡಿಯಂ ಗ್ಲುಟಮೇಟ್‌ನ್ನು ಹೊಂದಿರುತ್ತದೆ. ಹಾಗೂ ಇಂತಹ ಆಹಾರ ಪದಾರ್ಥಗಳ ನಿಯಮಿತ ಸೇವನೆಯು ನಮ್ಮ ಆರೋಗ್ಯದ ಮೇಲೆ ಹಾನಿಯುಂಟುಮಾಡುತ್ತವೆ.
ಹೆಚ್ಚಿನ ಪ್ರಮಾಣದ ಸೋಡಿಯಂ ಸೇವನೆಯು ಗ್ಯಾಸ್ಟಿಕ್, ಕ್ಯಾನ್ಸರ್, ಸ್ಥೂಲಕಾಯತೆ, ಆಸ್ಟಿಯೊಪೊರೋಸಿಸ್ ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಆರೋಗ್ಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಎಂದು ವರದಿ ಹೇಳುತ್ತದೆ. ಆರೋಗ್ಯಕರವಲ್ಲದ ಆಹಾರಗಳ ಸೇವನೆಯು ಹಾಗೂ ಅತಿಯಾದ ಸೋಡಿಯಂ ಸೇವನೆಯು ಜಾಗತಿಕ ಮಟ್ಟದಲ್ಲಿ ಅಕಾಲಿಕ ಮರಣ ಮತ್ತು ಸಾವುಗಳಿಗೆ ಮುಖ್ಯ ಕಾರಣ ಎಂದು WHO ನ ಮಹಾನಿರ್ದೇಶಕ ಡಾ. ಟೆಡ್ರೋಸ್ ಅಧಾನಮ್ ಘೆಬ್ರೆಯೆಸಸಸ್ ಹೇಳಿದರು.
ಹೆಚ್ಚಿನ ದೇಶಗಳಲ್ಲಿ ಇನ್ನೂ ಯಾವುದೇ ಕಡ್ಡಾಯ ಸೋಡಿಯಂ ಕಡಿತ ನೀತಿಗಳನ್ನು ಅಳವಡಿಸಿಲ್ಲ ಎಂದು WHO ವರದಿ ಹೇಳುತ್ತದೆ. ರಾಷ್ಟ್ರಗಳು ಕಠಿಣ ಕ್ರಮಗಳನ್ನು ಅನುಸರಿಸದೆ ತಮ್ಮ ಜನರನ್ನು ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಆರೋಗ್ಯ ಸಮಸ್ಯೆಗಳ ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಹೇಳಿದೆ. ಸೋಡಿಯಂ ಸೇವನೆ ಕಡಿತಕ್ಕಾಗಿ ‘ಬೆಸ್ಟ್ ಬೈಸ್’ನ್ನು ಜಾರಿಗೆ ತರಲು WHO ಎಲ್ಲಾ ದೇಶಗಳಿಗೆ ಕರೆ ನೀಡಿದೆ. ಮತ್ತು ಆಹಾರ ತಯಾರಕರ ಮೇಲೆ ಸೋಡಿಯಂ ಮಟ್ಟದ ಮಾನದಂಡವನ್ನು ಅಳವಡಿಸಲು ಕೆಲವೊಂದು ನೀತಿಗಳನ್ನು ಜಾರಿಗೆ ತಂದಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…