#Arecanut | ಹೊಸ ಚಾಲಿ ಅಡಿಕೆಗೆ ಧಾರಣೆ ನಿಗದಿ | 365 ರೂಪಾಯಿಗೆ ಖಾತೆ ತೆರೆದ ಚಾಲಿ ಹೊಸ ಅಡಿಕೆ | ಏನಾಗಬಹುದು ಈ ಬಾರಿಯ ಅಡಿಕೆ ಮಾರುಕಟ್ಟೆ.. ?

October 4, 2023
8:18 PM
ಹೊಸ ಚಾಲಿ ಅಡಿಕೆ ಧಾರಣೆ ನಿಗದಿಯಾಗಿದೆ. ಈ ತಿಂಗಳ ಅಂತ್ಯಕ್ಕೆ ಹೊಸ ಚಾಲಿ ಅಡಿಕೆ ಮಾರುಕಟ್ಟೆ ಪ್ರವೇಶ ಸಾಧ್ಯತೆ ಇದೆ. ಈ ಬಾರಿ ಅಡಿಕೆ ಮಾರುಕಟ್ಟೆ ಕುತೂಹಲ ಮೂಡಿಸಿದೆ.

ಚಾಲಿ ಹೊಸ ಅಡಿಕೆಗೆ ಧಾರಣೆ ನಿಗದಿಯಾಗಿದೆ. ಸದ್ಯ 365 ರೂಪಾಯಿ ಗರಿಷ್ಟ ಹಾಗೂ 330 ರೂಪಾಯಿ ಕನಿಷ್ಟ ಧಾರಣೆ ನಿಗದಿಯಾಗಿದೆ. ಕ್ಯಾಂಪ್ಕೋ ಹೊಸ ಅಡಿಕೆ ಧಾರಣೆ ನಿಗದಿಪಡಿಸಿದೆ. ಇದೇ ವೇಳೆ ಖಾಸಗಿ ವಲಯದಲ್ಲೂ ಹೊಸ ಚಾಲಿ ಅಡಿಕೆ ಧಾರಣೆಯು 360 ಆಸುಪಾಸಿನ ಗರಿಷ್ಟ ಧಾರಣೆ ನಿಗದಿ ಪಡಿಸಿದೆ. ಹೊಸ ಅಡಿಕೆ ಇನ್ನಷ್ಟೇ ಮಾರುಕಟ್ಟೆ ಪ್ರವೇಶ ಮಾಡಬೇಕಿದೆ. 

Advertisement
Advertisement
Advertisement

ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಅಡಿಕೆ ಹೆಚ್ಚು ಪ್ರಮಾಣದಲ್ಲಿ ಬೀಳಲು ಪ್ರಾರಂಭವಾಗಿದೆ. ಚಾಲಿ ಅಡಿಕೆ ಮಾಡುವ ಕೃಷಿಕರು ಅಡಿಕೆ ಒಣಗಿಸುವತ್ತ ಗಮನಹರಿಸಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಹೊಸ ಅಡಿಕೆ ಮಾರುಕಟ್ಟೆ ಪ್ರವೇಶ ಮಾಡುವ ಸಾಧ್ಯತೆ ಇದೆ.ಈ ಬಾರಿ ಅಡಿಕೆಯ ಕೊಳೆರೋಗ ಪ್ರಮಾಣ ತೀರಾ ಕಡಿಮೆಯಾಗಿತ್ತು. ಆದರೆ ಬೇಸಗೆಯ ಸಂದರ್ಭ ನೀರಿನ ಕೊರತೆ ಹಾಗೂ ವಿಪರೀತ ಬಿಸಿಲಿನ ಕಾರಣದಿಂದ ಎಳೆ ಅಡಿಕೆ ವಿಪರೀತವಾಗಿ ಉದುರಿ ಬೆಳೆಗಾರರಿಗೆ ಫಸಲಿನ ಕೊರತೆ ಕಾಡಿತ್ತು. ಹೀಗಾಗಿ ಅಡಿಕೆ ಫಸಲು ಕಳೆದ ವರ್ಷದ ಮಾದರಿಯಲ್ಲಿಯೇ ಇರಬಹುದು ಎನ್ನುವ ನಿರೀಕ್ಷೆ ಮಾರುಕಟ್ಟೆ ವಲಯದ್ದಾಗಿದೆ.

Advertisement

ಈ ಬಾರಿಯ ಅಡಿಕೆ ಮಾರುಕಟ್ಟೆ ಹೇಗಿರಲಿದೆ ಎನ್ನುವ ಚರ್ಚೆ ಎಲ್ಲೆಡೆ ಇದೆ. ಸದ್ಯದ ಮಾರುಕಟ್ಟೆ ಮಾಹಿತಿ ಪ್ರಕಾರ ಹೊಸ ಚಾಲಿ ಅಡಿಕೆ 400 ರೂಪಾಯಿ ಹಾಗೂ ಹಳೆ ಅಡಿಕೆ 425 ರೂಪಾಯಿ ಆಸುಪಾಸಿಗೆ ಸದ್ಯಕ್ಕೆ ಇರಲಿದೆ. ನವೆಂಬರ್‌ -ಡಿಸೆಂಬರ್‌ ಬಳಿಕ ಧಾರಣೆ ಏರಿಕೆ ಕಾಣಬಹುದು ಎನ್ನುವುದು  ಸದ್ಯದ ನಿರೀಕ್ಷೆ.

ಮಾರುಕಟ್ಟೆ ವಿಶ್ಲೇಷಣೆ ಪ್ರಕಾರ ಅಡಿಕೆ ಧಾರಣೆ ವಿಪರೀತವಾಗಿ ಏರಿಕೆಯಾದರೆ ಖರೀದಿದಾರರು ಹಾಗೂ ವ್ಯಾಪಾರಿಗಳಿಗೆ ಹೆಚ್ಚಿನ ಸಂದರ್ಭ ನಷ್ಟ ಉಂಟಾಗುತ್ತಿದೆ. ಮಾತ್ರವಲ್ಲ ಬೆಲೆ ಏರಿಕೆಯ ಕಾರಣದಿಂದ ಅಡಿಕೆ ವಹಿವಾಟು ನಿಧಾನವಾಗುತ್ತದೆ. ವಹಿವಾಟು ನಿಧಾನವಾಗುವ ಕಾರಣದಿಂದ ಲಾಭದ ಪ್ರಮಾಣವೂ ಕಡಿಮೆಯಾಗುತ್ತಿದೆ. ಹೀಗಾಗಿ ವಿಪರೀತ ಹೆಚ್ಚಿನ ಧಾರಣೆಯ ಕಾರಣದಿಂದ ವ್ಯಾಪಾರಿಗಳೂ ಖರೀದಿಗೆ ಉತ್ಸಾಹ ತೋರುತ್ತಿಲ್ಲ, ಕಡಿಮೆ ಗುಣಮಟ್ಟದ ಕಳಪೆ ಅಡಿಕೆ, ಬರ್ಮಾ ಅಡಿಕೆಯನ್ನೂ ಹೆಚ್ಚಾಗಿ ಖರೀದಿ ಮಾಡುತ್ತಾರೆ ಎನ್ನುವುದು ಮಾರುಕಟ್ಟೆಯ ಮಾಹಿತಿ.

Advertisement

ಹೀಗಾಗಿ ಈ ಬಾರಿ ಅಡಿಕೆ ಧಾರಣೆ ಭಾರೀ ಪ್ರಮಾಣದಲ್ಲಿ ಏರಿಕೆ ನಿರೀಕ್ಷೆ ಕಷ್ಟ. ಕಳೆದ ಬಾರಿ ಚಾಲಿ ಅಡಿಕೆ ಧಾರಣೆ 500 ಗಡಿ ದಾಟಿರಲಿಲ್ಲ. ಈ ಬಾರಿಯೂ 500 ರೂಪಾಯಿ ಗಡಿ ದಾಟುವ ಸಾಧ್ಯತೆ ಕಡಿಮೆ ಇದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror