ಚಾಲಿ ಹೊಸ ಅಡಿಕೆಗೆ ಧಾರಣೆ ನಿಗದಿಯಾಗಿದೆ. ಸದ್ಯ 365 ರೂಪಾಯಿ ಗರಿಷ್ಟ ಹಾಗೂ 330 ರೂಪಾಯಿ ಕನಿಷ್ಟ ಧಾರಣೆ ನಿಗದಿಯಾಗಿದೆ. ಕ್ಯಾಂಪ್ಕೋ ಹೊಸ ಅಡಿಕೆ ಧಾರಣೆ ನಿಗದಿಪಡಿಸಿದೆ. ಇದೇ ವೇಳೆ ಖಾಸಗಿ ವಲಯದಲ್ಲೂ ಹೊಸ ಚಾಲಿ ಅಡಿಕೆ ಧಾರಣೆಯು 360 ಆಸುಪಾಸಿನ ಗರಿಷ್ಟ ಧಾರಣೆ ನಿಗದಿ ಪಡಿಸಿದೆ. ಹೊಸ ಅಡಿಕೆ ಇನ್ನಷ್ಟೇ ಮಾರುಕಟ್ಟೆ ಪ್ರವೇಶ ಮಾಡಬೇಕಿದೆ.
ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಅಡಿಕೆ ಹೆಚ್ಚು ಪ್ರಮಾಣದಲ್ಲಿ ಬೀಳಲು ಪ್ರಾರಂಭವಾಗಿದೆ. ಚಾಲಿ ಅಡಿಕೆ ಮಾಡುವ ಕೃಷಿಕರು ಅಡಿಕೆ ಒಣಗಿಸುವತ್ತ ಗಮನಹರಿಸಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಹೊಸ ಅಡಿಕೆ ಮಾರುಕಟ್ಟೆ ಪ್ರವೇಶ ಮಾಡುವ ಸಾಧ್ಯತೆ ಇದೆ.ಈ ಬಾರಿ ಅಡಿಕೆಯ ಕೊಳೆರೋಗ ಪ್ರಮಾಣ ತೀರಾ ಕಡಿಮೆಯಾಗಿತ್ತು. ಆದರೆ ಬೇಸಗೆಯ ಸಂದರ್ಭ ನೀರಿನ ಕೊರತೆ ಹಾಗೂ ವಿಪರೀತ ಬಿಸಿಲಿನ ಕಾರಣದಿಂದ ಎಳೆ ಅಡಿಕೆ ವಿಪರೀತವಾಗಿ ಉದುರಿ ಬೆಳೆಗಾರರಿಗೆ ಫಸಲಿನ ಕೊರತೆ ಕಾಡಿತ್ತು. ಹೀಗಾಗಿ ಅಡಿಕೆ ಫಸಲು ಕಳೆದ ವರ್ಷದ ಮಾದರಿಯಲ್ಲಿಯೇ ಇರಬಹುದು ಎನ್ನುವ ನಿರೀಕ್ಷೆ ಮಾರುಕಟ್ಟೆ ವಲಯದ್ದಾಗಿದೆ.
ಈ ಬಾರಿಯ ಅಡಿಕೆ ಮಾರುಕಟ್ಟೆ ಹೇಗಿರಲಿದೆ ಎನ್ನುವ ಚರ್ಚೆ ಎಲ್ಲೆಡೆ ಇದೆ. ಸದ್ಯದ ಮಾರುಕಟ್ಟೆ ಮಾಹಿತಿ ಪ್ರಕಾರ ಹೊಸ ಚಾಲಿ ಅಡಿಕೆ 400 ರೂಪಾಯಿ ಹಾಗೂ ಹಳೆ ಅಡಿಕೆ 425 ರೂಪಾಯಿ ಆಸುಪಾಸಿಗೆ ಸದ್ಯಕ್ಕೆ ಇರಲಿದೆ. ನವೆಂಬರ್ -ಡಿಸೆಂಬರ್ ಬಳಿಕ ಧಾರಣೆ ಏರಿಕೆ ಕಾಣಬಹುದು ಎನ್ನುವುದು ಸದ್ಯದ ನಿರೀಕ್ಷೆ.
ಮಾರುಕಟ್ಟೆ ವಿಶ್ಲೇಷಣೆ ಪ್ರಕಾರ ಅಡಿಕೆ ಧಾರಣೆ ವಿಪರೀತವಾಗಿ ಏರಿಕೆಯಾದರೆ ಖರೀದಿದಾರರು ಹಾಗೂ ವ್ಯಾಪಾರಿಗಳಿಗೆ ಹೆಚ್ಚಿನ ಸಂದರ್ಭ ನಷ್ಟ ಉಂಟಾಗುತ್ತಿದೆ. ಮಾತ್ರವಲ್ಲ ಬೆಲೆ ಏರಿಕೆಯ ಕಾರಣದಿಂದ ಅಡಿಕೆ ವಹಿವಾಟು ನಿಧಾನವಾಗುತ್ತದೆ. ವಹಿವಾಟು ನಿಧಾನವಾಗುವ ಕಾರಣದಿಂದ ಲಾಭದ ಪ್ರಮಾಣವೂ ಕಡಿಮೆಯಾಗುತ್ತಿದೆ. ಹೀಗಾಗಿ ವಿಪರೀತ ಹೆಚ್ಚಿನ ಧಾರಣೆಯ ಕಾರಣದಿಂದ ವ್ಯಾಪಾರಿಗಳೂ ಖರೀದಿಗೆ ಉತ್ಸಾಹ ತೋರುತ್ತಿಲ್ಲ, ಕಡಿಮೆ ಗುಣಮಟ್ಟದ ಕಳಪೆ ಅಡಿಕೆ, ಬರ್ಮಾ ಅಡಿಕೆಯನ್ನೂ ಹೆಚ್ಚಾಗಿ ಖರೀದಿ ಮಾಡುತ್ತಾರೆ ಎನ್ನುವುದು ಮಾರುಕಟ್ಟೆಯ ಮಾಹಿತಿ.
ಹೀಗಾಗಿ ಈ ಬಾರಿ ಅಡಿಕೆ ಧಾರಣೆ ಭಾರೀ ಪ್ರಮಾಣದಲ್ಲಿ ಏರಿಕೆ ನಿರೀಕ್ಷೆ ಕಷ್ಟ. ಕಳೆದ ಬಾರಿ ಚಾಲಿ ಅಡಿಕೆ ಧಾರಣೆ 500 ಗಡಿ ದಾಟಿರಲಿಲ್ಲ. ಈ ಬಾರಿಯೂ 500 ರೂಪಾಯಿ ಗಡಿ ದಾಟುವ ಸಾಧ್ಯತೆ ಕಡಿಮೆ ಇದೆ.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?