ಗೋವು ಉಳಿಸಲು “ದೊಡ್ಡಿ” ಗೆ ಮೊರೆ ಹೋಗಬಹುದೇ…? | ಊರಿಗೊಂದು “ಗೋವು ಪಾಲನಾ ಕೇಂದ್ರ”ದ ಅವಶ್ಯಕತೆ ಇದೆ

April 7, 2024
10:59 PM
ಗೋವು ಉಳಿಸುವ ಹಲವು ಅಭಿಯಾನ ನಡೆಯುತ್ತಿದೆ. ಈ ನಡುವೆ ಸಾಮೂಹಿಕ ಗೋ ಸಾಕಾಣಿಕೆಯ ಪರಿಕಲ್ಪನೆ ಯೋಚನೆಯಾಗಬೇಕಿದೆ.ಇದಕ್ಕಾಗಿ ದೊಡ್ಡಿಗಳನ್ನು ಮತ್ತೆ ಸ್ಥಾಪಿಸುವ ಯೋಜನೆಯೂ ಮಾಡಬಹುದಾಗಿದೆ.

ಗೋ ಉಳಿಸಲು “ದೊಡ್ಡಿ” ಗೆ ಮೊರೆ ಹೋಗಬಹುದೇ…?  ಮೂರು ದಶಕದ ಹಿಂದೆ ತುಂಬಿದ ಸರ್ಕಾರಿ‌ ಶಾಲೆಯ ತರಗತಿ ಕೋಣೆಯನ್ನು ದನದ ದೊಡ್ಡಿ ಇದ್ದಂಗಿದೆ ಎನ್ನುತ್ತಿದ್ದರು. ಇವತ್ತು ದನದ ದೊಡ್ಡಿ ಇಲ್ಲದಿದ್ದರೂ , ಜಾನುವಾರು ಕಡಿಮೆಯಾದರೂ ಆಗಾಗ್ಗೆ “ದೊಡ್ಡಿ” ಎಂಬ ಪದ ಕೇಳಿಸಿಕೊಳ್ಳುತ್ತೇವೆ.

Advertisement
Advertisement

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆರಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೊಂದು ದರೆಗುರುಳುವ ದಿನ ಎಣಿಸುತ್ತಿರುವ ದನದ ದೊಡ್ಡಿಯೊಂದಿದೆ. ನನಗೆ ಗೊತ್ತಿದ್ದಂತೆ ಮಲೆನಾಡಿನ ಬಹುತೇಕ ಗ್ರಾಮ ಪಂಚಾಯತಿಯಲ್ಲಿ ದನದ ದೊಡ್ಡಿ ಇತ್ತು. ಊರ ತುಡುಗು ಜಾನುವಾರುಗಳು ಕೃಷಿ ಜಮೀನಿನ ಮೇಲೆ ದಾಳಿ ಮಾಡಿದಾಗ ಆ ಸದರಿ ಜಮೀನಿನ ಮಾಲಿಕರು ಈ ತುಡುಗು ಜಾನುವಾರುಗಳನ್ನು ಈ ದೊಡ್ಡಿ ತಂದು ಗ್ರಾಮ ಪಂಚಾಯತಿ ಕಾರ್ಯಾಲಯ ಸಂಧರ್ಭದಲ್ಲಿ, ದೊಡ್ಡಿಯ ಬೀಗದ ಕೀಲಿ ಪಡೆದು ಗೋವುಗಳ ದೊಡ್ಡಿ ಬಂಧನವನ್ನು ದಾಖಲಿಸಿ ಬರುತ್ತಿದ್ದರು. ಗ್ರಾಮ ಪಂಚಾಯತಿಯವರು ಆ ಬಂಧಿತ ಜಾನುವಾರುಗಳಿಗೆ ಮೇವು ನೀರು ಕೊಡುತ್ತಿದ್ದರು. ತದನಂತರ ಆ ತುಡುಗು ಜಾನುವಾರುಗಳ ಮಾಲಿಕರು ತಮ್ಮ ಜಾನುವಾರುಗಳು ದೊಡ್ಡಿಯಲ್ಲಿ ಬಂಧನವಾಗಿರುವುದನ್ನ ಖಾತ್ರಿ ಪಡಿಸಿಕೊಂಡು ಗ್ರಾಮ ಪಂಚಾಯತಿಗೆ ಸೂಕ್ತ “ದಂಡ” ಪಾವತಿಸಿ ತಮ್ಮ ಗೋವುಗಳನ್ನು ಬಿಡಿಸಿಕೊಂಡು ಬರುತ್ತಿದ್ದರು.

ಇದು ಗೋವುಗಳ ಮಾಲಿಕ ರಿಗೆ ಒಂದು ಬಗೆಯ ಶಿಕ್ಷೆ ಮತ್ತು ಎಚ್ಚರಿಕೆ ಇದ್ದಂತೆ. ಇದೆಲ್ಲಾ ಒಂದು ಕಾಲದಲ್ಲಿ ನಮ್ಮ ಹಳ್ಳಿಯಲ್ಲಿ ಯಥೇಚ್ಛವಾಗಿ ಜಾನುವಾರುಗಳು ಇದ್ದ ಕಾಲದಲ್ಲಿ ನೆಡೆಯುತ್ತಿದ್ದ ಘಟನೆ. ಆದರೆ ಇದೀಗ ದೊಡ್ಡಿಗಳು ಹೀಗಿತ್ತು ಎಂದು ನೋಡಲೇ ಸಿಗದಷ್ಟು ಕಾಣೆ ಯಾಗಿದೆ. ನಮ್ಮ ಆರಗದ ದೊಡ್ಡಿ ವಿಶೇಷ ವಿನ್ಯಾಸದಿಂದ ದೂರದಿಂದ ನೋಡಿದವರ ಗಮನ ಸೆಳೆಯುತ್ತದೆ. ಬಹುತೇಕ ಆರಗದ ವರಿಗೇ ಈ ಕಟ್ಟಡ ಏನು ಎತ್ತ ಎಂಬ ಮಾಹಿತಿ ಇಲ್ಲ. ಈ ಕಟ್ಟಡದೊಳಗೆ ಇಪ್ಪತ್ತೈದು ಮೂವತ್ತು ಜಾನುವಾರುಗಳನ್ನು ತುಂಬಬಹುದು. ದೊಡ್ಡಿಯ ಮುಂದಿನ ಭಾಗದ ಕೋಣೆ ಯಲ್ಲಿ ದೊಡ್ಡಿ ನಿರ್ವಾಹಕನಿಗೆ ಚಿಕ್ಕದಾಗಿ ವ್ಯವಸ್ಥೆ ಇದೆ.

ಈಗಲೂ ಈ ದೊಡ್ಡಿಯ ಪರಿಕಲ್ಪನೆಯ ಊರಿಗೊಂದು “ಗೋ ಪಾಲನಾ ಕೇಂದ್ರ”ದ ಅವಶ್ಯಕತೆ ಇದೆ. ಊರಿನ ಗೋಪಾಲಕ ರೈತರಿಗೆ ಪರ ಊರಿಗೆ ಹೋಗುವುದಾದಲ್ಲಿ ಕೆಲ ದಿವಸಗಳವರಗೆ ಅವರ ಗೋವುಗಳನ್ನು ನಿರ್ವಹಣೆ ಮಾಡಿಕೊಡುವಂತಹ “ಗೋಪಾಲನಾ ಕೇಂದ್ರ” ಬೇಕಿದೆ. ಈ ಗೋಪಾಲನಾ ಕೇಂದ್ರ ಪಟ್ಟಣದ ಸಾಕು ಪ್ರಾಣಿಗಳ ” ಪೆಟ್ ಕೇರ್ ಸೆಂಟರ್ ” ನಮೂನೆಯಲ್ಲಿ ನಿರ್ವಹಣೆ ಆಗಬೇಕು. ಈ ತರಹದ ಗೋಪಾಲನಾ ಕೇಂದ್ರ ವನ್ನು ಸರ್ಕಾರ ಅಂಗನವಾಡಿ ಯಂತೆ ಸ್ಥಾಪಿಸಿ ನಿರ್ವಹಣೆ ಮಾಡಿದರೆ ಸಾಕಷ್ಟು ಗೋವು ಗಳು ಕಸಾಯಿಖಾನೆಯ ಪಾಲಾಗದೇ ಉಳಿಯುತ್ತದೆ. ಇದನ್ನು ಖಾಸಗಿ ಮಠ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸರ್ಕಾರ ಸ್ಥಾಪಿಸಬಹುದು. ನೆನಪಿಡಿ ಇದು ಗೋಶಾಲೆ ಅಲ್ಲ…

ಊರ ಕೃಷಿಕ ಗೋಪಾಲಕರ ಗೋವುಗಳ ತಾತ್ಕಾಲಿಕ ಪಾಲನಾ ಕೇಂದ್ರ ಮಾತ್ರ. ಗೋಪಾಲಕರಿಗೆ ಅನಾರೋಗ್ಯ ವಾದಾಗ, ತುರ್ತು ಕಾರ್ಯ ನಿಮಿತ್ತ ಪರ ಊರಿಗೆ ಹೋಗಬೇಕಾದ ಸಂದರ್ಭದಲ್ಲಿ, ಮದುವೆ ಮಂಜಿ ಇನ್ನಿತರ ಕಾರ್ಯಕ್ರಮ ದ ಸಂಧರ್ಭದಲ್ಲಿ ಇಂತಹ ಗೋಪಾಲನಾ ಕೇಂದ್ರ ದಲ್ಲಿ ಗೋಪಾಲಕರು ತಮ್ಮ ಗೋವುಗಳನ್ನು ತಂದು ಬಿಟ್ಟು ತಮ್ಮ ಕೆಲಸ ಮುಗಿದ ಮೇಲೆ ಮರಳಿ ತಮ್ಮ ಮನೆಗೆ ಹಸುಗಳನ್ನು ಹೊಡೆದುಕೊಂಡು ಹೋಗಬಹುದು. ಗೋವುಗಳ ನಿರ್ವಹಣಾ ಬಾಬ್ತಿನ‌ ಹಣವನ್ನು ಗೋವುಗಳ ಮಾಲಿಕ ಗೋಪಾಲನಾ ಕೇಂದ್ರ ದವರಿಗೆ ನೀಡಬೇಕು. ಈ ತರಹದ ಸಾಧ್ಯತೆಯ ಬಗ್ಗೆ ಚಿಂತನೆ ಮಾಡಬೇಕಿದೆ….

ಬರಹ :
ಪ್ರಬಂಧ ಅಂಬುತೀರ್ಥ
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror