ರೈತ ಮಹಿಳೆಯ ಅಮೋಘ ಸಾಧನೆ ಮೆಚ್ಚಿದ ಪ್ರಧಾನಿ : ಕೃಷಿ ಸಖಿ ಸಂವಾದದಲ್ಲಿ ಮೋದಿ ಜೊತೆ ಭಾಗವಹಿಸಿದ ಯಲ್ಲಾಪುರದ ಶ್ರೀಲತಾ ಹೆಗಡೆ

June 22, 2024
1:29 PM

ಕೃಷಿ(Agriculture) ನಮ್ಮ ದೇಶದ ಬೆನ್ನೆಲುಬು. ಆಧುನಿಕತೆ(Modernization) ಬೆಳೆಯುತ್ತಿದೆ. ಆದರೂ ಕೃಷಿಯನ್ನೇ ನಂಬಿ ಬದುಕುವವರು ಬಹಳ ಮಂದಿ ಇದ್ದಾರೆ. ಹಾಗೇ ಮಹಿಳೆಯರೂ(Women) ಇಂದು ಕೃಷಿಯನ್ನು ಪೂರ್ಣ ಪ್ರಮಾಣದ ಉದ್ಯೂಗವನ್ನಾಗಿ ಮಾಡಿಕೊಂಡಿದ್ದಾರೆ. ಕೃಷಿಯಲ್ಲಿ ಬದುಕು ಕಟ್ಟಿಕೊಂಡ ಅನೇಕ ರೈತ ಮಹಿಳೆಯರಿದ್ದಾರೆ.. ಮಹಿಳಾ ಸಾಧಕರಿದ್ದಾರೆ. ಅವರಲ್ಲಿ ಉತ್ತರ ಕನ್ನಡ(Uttar Kannada) ಜಿಲ್ಲೆಯ ಯಲ್ಲಾಪುರದ ಸಣ್ಣ ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಜನರಿಗೆ ಕೃಷಿ ಬಗ್ಗೆ ಮಾಹಿತಿ(Information) ನೀಡುವ ಶ್ರೀಲತಾ ಹೆಗಡೆಯವರು ಒಬ್ಬರು. ಇವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ (PM Narendra Modi) ಕೃಷಿ ಸಖಿಯಾಗಿ (Krishi Sakhi) ಸಂವಾದ ನಡೆಸಿದ್ದಾರೆ. ವಾರಣಾಸಿಯಲ್ಲಿ ನಡೆದ ಪ್ರಧಾನಿ ಅವರ ಕಾರ್ಯಕ್ರಮದಲ್ಲಿ ರಾಜ್ಯದ ಪರವಾಗಿ ಆಯ್ಕೆಯಾದ ಇಬ್ಬರು ಮಹಿಳೆಯರಲ್ಲಿ ಇವರು ಒಬ್ಬರು. ರಸಮೇವು ಉತ್ಪಾದನೆಯಲ್ಲಿ ತೊಡಗಿಸಿಕೊಂಡು ಜನರಿಗೆ ಸಾವಯವ ಕೃಷಿಗೆ ಬೆಂಬಲಿಸುತ್ತಾ ಬಂದಿದ್ದಾರೆ ಶ್ರೀಲತಾ ಅವರು.

Advertisement

ಕೃಷಿ ಸಖಿಯಾಗಿ ಸೇವೆ : ಶ್ರೀಲತಾ ರಾಜೀವ ಹೆಗಡೆಯವರು ತಮ್ಮ ಪತಿಯೊಂದಿಗೆ ನೈಸರ್ಗಿಕ ಪುಷ್ಪಕೃಷಿ, ಪಶು ಆಹಾರ ತಯಾರಿಕೆ, ಹೈನುಗಾರಿಕೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದು ತಾಲೂಕಿನ ಚಂದ್ಗುಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೃಷಿ ಸಖಿಯಾಗಿ ಗ್ರಾಮೀಣ ಪ್ರದೇಶದ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.

ಪ್ರಸ್ತುತ ಯಲ್ಲಾಪುರದ ಜಂಬೇಸಾಲಿನಲ್ಲಿ ವಾಸವಾಗಿರುವ ಶ್ರೀಲತಾ ಹೆಗಡೆ ಹಾಗೂ ಅವರ ಪತಿ ಬರಗಾಲದಲ್ಲಿ ರಸಮೇವಿನ ಪ್ರಯೋಗದಿಂದ ಹೈನುಗಳಿಗೆ ಪರಿಣಾಮಕಾರಿ ಆಹಾರವನ್ನು ಒದಗಿಸಿ ರೈತರಿಗೆ ಬಂದೊಗಗಿದ್ದ ದುಬಾರಿ ಒಣಹುಲ್ಲಿನ ಹೊರೆಯ ಸಂಕಟವನ್ನು ತಪ್ಪಿಸಿದ್ದರು. ಇದೀಗ ಅವರು ಪ್ರಧಾನಿ ಅವರ ಕೈಯಿಂದ ಕೃಷಿ ಸಖಿ ಪ್ರಶಸ್ತಿ ಪತ್ರವನ್ನು ವಾರಣಾಸಿಯಲ್ಲಿ ಪಡೆದುಕೊಂಡು ಇನ್ನಷ್ಟು ರೈತ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.

  • ಅಂತರ್ಜಾಲ ಮಾಹಿತಿ
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು
May 8, 2025
7:21 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ
May 8, 2025
6:54 AM
by: ದ ರೂರಲ್ ಮಿರರ್.ಕಾಂ
ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ
May 7, 2025
10:02 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ
May 7, 2025
2:42 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group