ಕೃಷಿ(Agriculture) ನಮ್ಮ ದೇಶದ ಬೆನ್ನೆಲುಬು. ಆಧುನಿಕತೆ(Modernization) ಬೆಳೆಯುತ್ತಿದೆ. ಆದರೂ ಕೃಷಿಯನ್ನೇ ನಂಬಿ ಬದುಕುವವರು ಬಹಳ ಮಂದಿ ಇದ್ದಾರೆ. ಹಾಗೇ ಮಹಿಳೆಯರೂ(Women) ಇಂದು ಕೃಷಿಯನ್ನು ಪೂರ್ಣ ಪ್ರಮಾಣದ ಉದ್ಯೂಗವನ್ನಾಗಿ ಮಾಡಿಕೊಂಡಿದ್ದಾರೆ. ಕೃಷಿಯಲ್ಲಿ ಬದುಕು ಕಟ್ಟಿಕೊಂಡ ಅನೇಕ ರೈತ ಮಹಿಳೆಯರಿದ್ದಾರೆ.. ಮಹಿಳಾ ಸಾಧಕರಿದ್ದಾರೆ. ಅವರಲ್ಲಿ ಉತ್ತರ ಕನ್ನಡ(Uttar Kannada) ಜಿಲ್ಲೆಯ ಯಲ್ಲಾಪುರದ ಸಣ್ಣ ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಜನರಿಗೆ ಕೃಷಿ ಬಗ್ಗೆ ಮಾಹಿತಿ(Information) ನೀಡುವ ಶ್ರೀಲತಾ ಹೆಗಡೆಯವರು ಒಬ್ಬರು. ಇವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ (PM Narendra Modi) ಕೃಷಿ ಸಖಿಯಾಗಿ (Krishi Sakhi) ಸಂವಾದ ನಡೆಸಿದ್ದಾರೆ. ವಾರಣಾಸಿಯಲ್ಲಿ ನಡೆದ ಪ್ರಧಾನಿ ಅವರ ಕಾರ್ಯಕ್ರಮದಲ್ಲಿ ರಾಜ್ಯದ ಪರವಾಗಿ ಆಯ್ಕೆಯಾದ ಇಬ್ಬರು ಮಹಿಳೆಯರಲ್ಲಿ ಇವರು ಒಬ್ಬರು. ರಸಮೇವು ಉತ್ಪಾದನೆಯಲ್ಲಿ ತೊಡಗಿಸಿಕೊಂಡು ಜನರಿಗೆ ಸಾವಯವ ಕೃಷಿಗೆ ಬೆಂಬಲಿಸುತ್ತಾ ಬಂದಿದ್ದಾರೆ ಶ್ರೀಲತಾ ಅವರು.
ಕೃಷಿ ಸಖಿಯಾಗಿ ಸೇವೆ : ಶ್ರೀಲತಾ ರಾಜೀವ ಹೆಗಡೆಯವರು ತಮ್ಮ ಪತಿಯೊಂದಿಗೆ ನೈಸರ್ಗಿಕ ಪುಷ್ಪಕೃಷಿ, ಪಶು ಆಹಾರ ತಯಾರಿಕೆ, ಹೈನುಗಾರಿಕೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದು ತಾಲೂಕಿನ ಚಂದ್ಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ಸಖಿಯಾಗಿ ಗ್ರಾಮೀಣ ಪ್ರದೇಶದ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
ಪ್ರಸ್ತುತ ಯಲ್ಲಾಪುರದ ಜಂಬೇಸಾಲಿನಲ್ಲಿ ವಾಸವಾಗಿರುವ ಶ್ರೀಲತಾ ಹೆಗಡೆ ಹಾಗೂ ಅವರ ಪತಿ ಬರಗಾಲದಲ್ಲಿ ರಸಮೇವಿನ ಪ್ರಯೋಗದಿಂದ ಹೈನುಗಳಿಗೆ ಪರಿಣಾಮಕಾರಿ ಆಹಾರವನ್ನು ಒದಗಿಸಿ ರೈತರಿಗೆ ಬಂದೊಗಗಿದ್ದ ದುಬಾರಿ ಒಣಹುಲ್ಲಿನ ಹೊರೆಯ ಸಂಕಟವನ್ನು ತಪ್ಪಿಸಿದ್ದರು. ಇದೀಗ ಅವರು ಪ್ರಧಾನಿ ಅವರ ಕೈಯಿಂದ ಕೃಷಿ ಸಖಿ ಪ್ರಶಸ್ತಿ ಪತ್ರವನ್ನು ವಾರಣಾಸಿಯಲ್ಲಿ ಪಡೆದುಕೊಂಡು ಇನ್ನಷ್ಟು ರೈತ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.
ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…
ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿನ ಪಾವತಿಯ…
ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ‘ಸೈಕಲ್ ಫಾರ್ ಕಾಫಿ’ ಜಾಥಾ ಆಯೋಜಿಸಲಾಗಿದ್ದು,…
ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಫೈನಲ್‌ನಲ್ಲಿ ಅ.3ರಂದು ಭಾರತ ಮತ್ತು ಪಾಕಿಸ್ತಾನ ಚಿನ್ನದ…
ಮಳೆಯ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಹಿನ್ನೆಲೆಯಲ್ಲಿ…
ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ 16 ಸ್ಥಳಗಳಲ್ಲಿ ವಿದೇಶಿ ಅಡಿಕೆ ಅಕ್ರಮ ಸಾಗಾಟಕ್ಕೆ…