ವಿಶ್ವದ ಪ್ರತಿ ಡೈನಿಂಗ್ ಟೇಬಲ್ ಮೇಲೆ ಭಾರತದ ಒಂದಲ್ಲ ಒಂದು ಉತ್ಪನ್ನ ಇರಬೇಕು | ಕಿಸಾನ್ ಸಮ್ಮಾನ್ ಯೋಜನೆಯಡಿ 20 ಸಾವಿರ ಕೋಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ |

June 19, 2024
11:58 AM

ಎಂದಿನಂತೆ ಈ ಬಾರಿಯೂ ಕಿಸಾನ್ ನಿಧಿಯನ್ನು (PM-Kisan Samman Nidhi) ಪ್ರಧಾನಿ ಮೋದಿ ರಿಲೀಸ್ ಮಾಡಿದ್ದಾರೆ. ದೇಶದ ಒಟ್ಟು 9.26 ಕೋಟಿ ರೈತರ(Farmer) ಖಾತೆಗಳಿಗೆ(Account) 20 ಸಾವಿರ ಕೋಟಿ  ಬಿಡುಗಡೆ ಮಾಡಿದರು. ಮೂರನೇ ಬಾರಿಗೆ ಪ್ರಧಾನಿಯಾದ ನಂತರ ಪಿಎಂ ಕಿಸಾನ್ ನಿಧಿಗೆ ಸಂಬಂಧಿಸಿದ ಕಡತಕ್ಕೆ ಮೋದಿ (Narendra Modi) ಮೊದಲ ಸಹಿ ಹಾಕಿದ್ರು. ಇಂದು ಸ್ವಕ್ಷೇತ್ರದಲ್ಲಿ ನಡೆದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ, ಕೃಷಿ ಸಖಿಯರಾಗಿ ತರಬೇತಿ ಹೊಂದಿದ ಸ್ವಯಂ ಸಹಾಯಕ ತಂಡಗಳ ಮಹಿಳೆಯರಿಗೆ(Women) ಮೋದಿ ಪ್ರಮಾಣಪತ್ರ ವಿತರಿಸಿದರು. ಬಳಿಕ ವಾರಣಾಸಿಯ ದಶಾಶ್ವಮೇಧ ಘಾಟ್‍ನಲ್ಲಿ ನಡೆಯುವ ಗಂಗಾರತಿಯಲ್ಲಿ ಪ್ರಧಾನಿ ಮೋದಿ ಭಾಗಿಯಾದರು.

Advertisement

ಇದೇ ವೇಳೆ ವಾರಣಾಸಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮೂರನೇ ಅವಧಿಯಲ್ಲಿ ರೈತರು ಮತ್ತು ಬಡವರಿಗೆ ಸಂಬಂಧಿಸಿದ ಮೊದಲ ನಿರ್ಧಾರ ತೆಗೆದುಕೊಂಡಿದ್ದೇನೆ. ದೇಶದಲ್ಲಿ ಬಡವರಿಗಾಗಿ ಮೂರು ಕೋಟಿ ಮನೆ ನಿರ್ಮಾಣ ಮಾಡುವ ಗುರಿ ಇದೆ. ಕಿಸಾನ್ ಸಮ್ಮಾನ್ ನಿಧಿ ಮುಂದುವರಿಸಲು ನಿರ್ಧಾರ ಕೈಗೊಂಡಿದ್ದೇವೆ. ಈ ಯೋಜನೆಯು ಕೋಟ್ಯಂತರ ಜನರಿಗೆ ಲಾಭ ಮಾಡಲಿದೆ. ಇಂದು ಕೋಟ್ಯಂತರ ರೈತರು ನಮ್ಮ ಜೊತೆಗೆ ಸೇರಿದ್ದಾರೆ. ಕಿಸಾನ್ ಸಮ್ಮಾನ್ ನಿಧಿ ವಿಶ್ವದ ಅತಿದೊಡ್ಡ ಡಿಬಿಟಿ ಯೋಜನೆಯಾಗಿದೆ. ತಂತ್ರಜ್ಞಾನ ಬಳಸಿಕೊಂಡು ಫಲಾನುಭವಿಗೆ ನೇರ ಸರ್ಕಾರದ ಯೋಜನೆ ತಲುಪಿಸುತ್ತಿದೆ. ಯೋಜನೆಗೆ ಸೇರಲು ನಿಯಮಗಳನ್ನು ಇನ್ನಷ್ಟು ಸಡಿಲಿಸಲಾಗಿದೆ. ಕೃಷಿಯಲ್ಲಿ ನಾವು ಇನ್ನಷ್ಟು ಸ್ವಾವಲಂಬಿಯಾಗಬೇಕಿದೆ ಎಂದು ಹೇಳಿದರು. ಭಾರತದ ಹಲವಾರು ತರಕಾರಿ ವಿದೇಶಿ ಮಾರುಕಟ್ಟೆ ತಲುಪುತ್ತಿದೆ. ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಿಂದ ರಫ್ತು ಹೆಚ್ಚುತ್ತಿದೆ. ವಿಶ್ವದ ಪ್ರತಿ ಡೈನಿಂಗ್ ಟೇಬಲ್ ಮೇಲೆ ಭಾರತದ ಒಂದಲ್ಲ ಒಂದು ಉತ್ಪನ್ನ ಇರಬೇಕು ಎನ್ನುವುದು ನನ್ನ ಗುರಿ ಎಂದು ಅವರು ತಿಳಿಸಿದರು.

ಕೃಷಿ ಸಖಿ ಯೋಜನೆ ಮೂಲಕ ಮಹಿಳೆಯರನ್ನು ಕೃಷಿಯಲ್ಲಿ ಗುರುತಿಸಲಾಗುವುದು. ಇದು ಲಕ್ ಪತಿ ದೀದಿಯನ್ನಾಗಿಸಲು ಅನುಕೂಲವಾಗಲಿದೆ. ಡೈರಿಗಳ ನಿರ್ಮಾಣದಿಂದ ರೈತರ ಬದುಕು ಬದಲಾಗಿದೆ. ಹಾಲಿನ ಉತ್ಪನ್ನ ದೊಡ್ಡ ಪ್ರಮಾಣ ಹೆಚ್ಚಾಗಿದೆ. ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಿದೆ. 40 ಸಾವಿರ ಜನರು ಸೋಲಾರ್ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕಾಶಿ ಸುತ್ತಮುತ್ತಲಿನ ಸಾರಿಗೆ ಸಂಪರ್ಕ ಹೆಚ್ಚಿಸಿರುವುದು ಆರ್ಥಿಕತೆಗೆ ದೊಡ್ಡ ಶಕ್ತಿ ಸಿಕ್ಕಿದೆ ಎಂದು ಹೇಳಿದರು.
  • ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ |14.04.2025 | ಕರಾವಳಿ ಕೆಲವು ಕಡೆ ಗುಡುಗು ಸಹಿತ ಮಳೆ | ಎ.19ರ ನಂತರ ಮಳೆಯ ಪ್ರಮಾಣ ತೀರಾ ಕಡಿಮೆ |
April 14, 2025
12:45 PM
by: ಸಾಯಿಶೇಖರ್ ಕರಿಕಳ
ಅನುಭವದ ಕೃಷಿಯಿಂದ ಡಾಟಾ ಆಧಾರಿತ “ಸ್ಮಾರ್ಟ್ ಫಾರ್ಮಿಂಗ್ “‌ ಕಡೆಗೆ ಆಧುನಿಕ ಕೃಷಿ
April 14, 2025
7:28 AM
by: ದ ರೂರಲ್ ಮಿರರ್.ಕಾಂ
ಜೂ.30 ರಿಂದ ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ  ಕಬ್ಬು ಅರೆಯುವ ಪ್ರಕ್ರಿಯೆ ಆರಂಭ
April 14, 2025
6:20 AM
by: The Rural Mirror ಸುದ್ದಿಜಾಲ
ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ | ಸಚಿವ ಅಮಿತ್‌ ಶಾ ಹೇಳಿಕೆ
April 14, 2025
6:16 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group