#Yashobhoomi | ಜನ್ಮ ದಿನದ ಅಂಗವಾಗಿ ದೆಹಲಿಯಲ್ಲಿ ಯಶೋಭೂಮಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ | ವಿಶ್ವದರ್ಜೆಯ ಪ್ರದರ್ಶನ ಕೇಂದ್ರದ ಉದ್ಘಾಟನೆ

September 17, 2023
6:20 PM
ಇಂದು ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನದ ಪ್ರಯುಕ್ತ ವಿಶ್ವದರ್ಜೆಯ ಪ್ರದರ್ಶನ ಕೇಂದ್ರದ ಉದ್ಘಾಟನೆಯನ್ನು ಪ್ರಧಾನಿಯವರು ಮಾಡಿದ್ದಾರೆ. ರಾಷ್ಟ್ರರಾಜಧಾನಿಯ ದ್ವಾರಕಾ ಪ್ರದೇಶದಲ್ಲಿ ಪ್ರಧಾನಿಯವರು ತಮ್ಮ ಜನ್ಮದಿನದಂದು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಎಕ್ಸ್​ಪೋ ಸೆಂಟರ್​ನ ಮೊದಲ ಹಂತವನ್ನು ಉದ್ಘಾಟಿಸಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನ. ನಾಡಿನಾದ್ಯಂತ ಭಾರತೀಯರು ವಿಶೇಷ ರೀತಿಯಲ್ಲಿ ಪ್ರಧಾನಿಯವರ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಅನೇಕರು ಮೋದಿಯವರಿಗೆ ಜನ್ಮ ದಿನದ ಶುಭಾಶಯಗಳನ್ನು ರವಾನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನದ ಪ್ರಯುಕ್ತ ವಿಶ್ವದರ್ಜೆಯ ಪ್ರದರ್ಶನ ಕೇಂದ್ರದ ಉದ್ಘಾಟನೆಯನ್ನು ಪ್ರಧಾನಿಯವರು ಮಾಡಿದ್ದಾರೆ. ರಾಷ್ಟ್ರರಾಜಧಾನಿಯ ದ್ವಾರಕಾ ಪ್ರದೇಶದಲ್ಲಿ ಪ್ರಧಾನಿಯವರು ತಮ್ಮ ಜನ್ಮದಿನದಂದು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಎಕ್ಸ್​ಪೋ ಸೆಂಟರ್​ನ ಮೊದಲ ಹಂತವನ್ನು ಉದ್ಘಾಟಿಸಿದ್ದಾರೆ. ಯಶೋಭೂಮಿ ಎಂದು ಕರೆಯಲಾಗುವ ಈ ಎಕ್ಸ್​ಪೋ ಸೆಂಟರ್ಗೆ ಎಕ್ಸ್​ಪ್ರೆಸ್​ವೆ ಕನೆಕ್ಟಿವಿಟಿ ಕೂಡ ನೀಡಲಾಗಿದೆ.

Advertisement
Advertisement

ದ್ವಾರಕಾ ಸೆಕ್ಟರ್ 21ನಲ್ಲಿರುವ ಏರ್ಪೋರ್ಟ್, ಮೆಟ್ರೋ ಎಕ್ಸ್​ಪ್ರೆಸ್ ಲೈನ್ ಅನ್ನು ಯಶೋಭೂಮಿ ಮೆಟ್ರೋ ಸ್ಟೇಷನ್​ವರೆಗೂ ವಿಸ್ತರಿಸಲಾಗಿದೆ. ಯಶೋಭೂಮಿ ಮೆಟ್ರೋಸ್ಟೇಷನ್ ಸ್ಥಳವು ದ್ವಾರಕಾ ಸೆಕ್ಟರ್ 25ರಲ್ಲಿ ಇದೆ. ನರೇಂದ್ರ ಮೋದಿ ಅವರು ಏರ್​ಪೋರ್ಟ್ ಲೈನ್ ವಿಸ್ತರಣೆಗೆ ಚಾಲನೆ ಕೊಟ್ಟ ಬಳಿಕ ಮೆಟ್ರೋ ರೈಲಿನಲ್ಲಿ ಸಾಮಾನ್ಯ ಜನರ ಜೊತೆ ಕುಳಿತು ಪ್ರಯಾಣಿಸಿದರು.

ಯಶೋಭೂಮಿ ವಿಶೇಷತೆಗಳೇನು?

  • ಯಶೋಭೂಮಿ ಎಂಬುದು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಅಂಡ್ ಎಕ್ಸ್​ಪೋ ಸೆಂಟರ್ (ಐಐಸಿಸಿ). ಅಂತಾರಾಷ್ಟ್ರೀಯ ಸಭೆ, ಸಮಾರಂಭ, ಪ್ರದರ್ಶನಗಳನ್ನು ಆಯೋಜಿಸಲು ಇರುವ ಬೃಹತ್ ಕೇಂದ್ರವಾಗಿದೆ. ಇಂಥ ಸೌಲಭ್ಯ ಹೊಂದಿರುವ ವಿಶ್ವದ ಬೃಹತ್ ಕಟ್ಟಡಗಳ ಪೈಕಿ ಯಶೋಭೂಮಿ ಒಂದೆನಿಸಿದೆ.
  • ಯಶೋಭೂಮಿಯ ಒಟ್ಟು ಯೋಜನಾ ಸ್ಥಳ ಬರೋಬ್ಬರಿ 8.9 ಲಕ್ಷ ಚದರ ಮೀಟರ್ ವಿಸ್ತೀರ್ಣದ್ದಾಗಿದೆ. ಇದರಲ್ಲಿ ಕಟ್ಟಡ ನಿರ್ಮಾಣ ಪ್ರದೇಶ 1.8 ಲಕ್ಷ ಚದರ ಮೀಟರ್ ವಿಸ್ತೀರಣದ್ದಾಗಿದೆ.
  • ಯಶೋಭೂಮಿ ನಿರ್ಮಾಣಕ್ಕೆ ಅಂದಾಜು 5,000 ಕೋಟಿ ರುಪಾಯಿಗೂ ಹೆಚ್ಚು ವೆಚ್ಚವಾಗುತ್ತಿದೆ.
  • ಯಶೋಭೂಮಿಯ ಕನ್ವೆನ್ಷನ್ ಸೆಂಟರ್ ಅನ್ನು 73,000 ಚದರ ಮೀಟರ್ ಜಾಗದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಮುಖ್ಯ ಆಡಿಟೋರಿಯಂ, 13 ಮೀಟಿಂಗ್ ರೂಮ್ ಸೇರಿದಂತೆ 15 ಕನ್ವೆನ್ಷನ್ ರೂಮ್​ಗಳು ಒಳಗೊಂಡಿವೆ.
  • ಯಶೋಭೂಮಿಯಲ್ಲಿ ಪರಿಸರಸ್ನೇಹಿ ಎನಿಸುವ ಹಲವು ಫೀಚರ್​ಗಳಿವೆ. ತ್ಯಾಜ್ಯನೀರು ನಿರ್ವಹಣೆ ವ್ಯವಸ್ಥೆ ಇದೆ. ಮಳೆನೀರು ಸಂಗ್ರಹಿಸುವ ವ್ಯವಸ್ಥೆ ಇದೆ. ಮೇಲ್ಚಾವಣಿ ಸೌರ ಫಲಕಗಳಿವೆ. ಈ ಕಟ್ಟಡಗಳ ಸಂಕೀರ್ಣಕ್ಕೆ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್​ನಿಂದ ಅತ್ಯುಚ್ಚವೆನಿಸುವ ಪ್ಲಾಟಿನಂ ಪ್ರಮಾಣಪತ್ರ ಕೊಡಲಾಗಿದೆ.
  • ಯಶೋಭೂಮಿ ಸಂಕೀರ್ಣದಲ್ಲಿರುವ ಪ್ರಮುಖ ಆಡಿಟೋರಿಯಂ ಅಥವಾ ಸಭಾಂಗಣವನ್ನು ವಿಶೇಷವಾಗಿ ನಿರ್ಮಿಸಲಾಗಿದೆ. ಶಬ್ದದ ನಿರ್ವಹಣೆ ಉತ್ತಮವಾಗಿರುವಂತೆ ನಿರ್ಮಿಸಲಾಗಿದೆ. ವಿಶ್ವದರ್ಜೆ ಮಟ್ಟದ ಆಡಿಟೋರಿಯಂ ಇದಾಗಿದೆ.

Source : Digital Media

Advertisement

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 28-06-2025 | ಕರಾವಳಿ ಜಿಲ್ಲೆಯಲ್ಲಿ ಮಳೆ ಏನಾಯ್ತು..? | ಜುಲೈ 6 ನಂತರ ಮಳೆ ಕಡಿಮೆ..?
June 28, 2025
2:17 PM
by: ಸಾಯಿಶೇಖರ್ ಕರಿಕಳ
ಮುಂಗಾರು ಮಳೆ ಸುದ್ದಿ | ಕೇರಳದಲ್ಲಿ ತೀವ್ರಗೊಳ್ಳಲಿದೆ ಮಳೆ | ದೆಹಲಿಯಲ್ಲೂ ಮಳೆ ಎಚ್ಚರಿಕೆ | ಹಿಮಾಚಲದಲ್ಲಿ 20 ಕ್ಕೂ ಹೆಚ್ಚು ಜೀವಹಾನಿ |
June 28, 2025
7:14 AM
by: The Rural Mirror ಸುದ್ದಿಜಾಲ
ಆಷಾಢ ಶುಕ್ರವಾರ, ಈ ಸ್ಥಳದಲ್ಲಿ ಈ ರಾಶಿಯವರು ಯಾವುದಾದರೂ ದೇವಿಯ ದೇವಸ್ಥಾನದಲ್ಲಿ ಹಿಟ್ಟಿನ ದೀಪ ಹಚ್ಚಿಡಿ..
June 28, 2025
6:37 AM
by: ದ ರೂರಲ್ ಮಿರರ್.ಕಾಂ
ಪರಿಸರ ವಿಚಾರದಲ್ಲಿ ಸರ್ಕಾರದ ಬೇಜವಾಬ್ದಾರಿ..! ಇಲ್ಲಿದೆ ಅಭಿಪ್ರಾಯ..
June 27, 2025
11:35 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group