ರಾಜ್ಯಕ್ಕೆ ಸ್ಟಾರ್ ಕ್ಯಾಂಪೇನರ್‌ ಆಗಿ ಪ್ರಿಯಾಂಕಾ ಗಾಂಧಿ | ಬೆಂಗಳೂರು, ಚಿತ್ರದುರ್ಗದಲ್ಲಿ ಭರ್ಜರಿ ಪ್ರಚಾರ

April 23, 2024
12:05 PM

ಲೋಕಸಭೆ ಚುನಾವಣೆಗೆ(Lok sabha Election) ರಾಜ್ಯದಲ್ಲಿ ಇನ್ನೇನು ಎರಡು ದಿನ ಬಾಕಿ ಇದೆ. ವಿವಧ ಪಕ್ಷಗಳ ಸ್ಟಾರ್‌ ಪ್ರಚಾರಕರ(Election Campaign) ದಂಡೇ ರಾಜ್ಯಕ್ಕೆ ಹರಿದು ಬರುತ್ತಿದೆ. ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳ(Candidate) ಪರ ಭರ್ಜರಿಯಾಗಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಕಾಂಗ್ರೆಸ್‌(Congress) ನಿಂದ ರಾಹುಲ್‌ ಗಾಂಧಿ(Rahul Gandhi) ಕ್ಯಾಂಪೇನ್‌ ಮಾಡಿದ ನಂತರ ಈಗ ಪ್ರಿಯಾಂಕ ಗಾಂಧಿ(Priyanka Gandhi) ಹವಾ.. ರಾಜ್ಯ ಚುನಾವಣಾ ಪ್ರಚಾರ  ಅಖಾಡಕ್ಕೆ ಇಂದು ಪ್ರಿಯಾಂಕಾ ಗಾಂಧಿ ಎಂಟ್ರಿ ಕೊಡುತ್ತಿದ್ದಾರೆ. ಇಂದು ಚಿತ್ರದುರ್ಗ(Chitradurga) ಲೋಕಸಭಾ ಕ್ಷೇತ್ರ ಹಾಗೂ ಸಂಜೆ ಬೆಂಗಳೂರು(Bengaluru) ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.

ಮಹಿಳಾ ಮತದಾರರನ್ನ ಗಮನದಲ್ಲಿಟ್ಟುಕೊಂಡು ಪ್ರಿಯಾಂಕಾ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ (Priyanka Gandhi) ಮೂಲಕ ಮಹಿಳೆಯರಿಗೆ 2 ಸಾವಿರದ ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿಸಲಾಗಿತ್ತು. ಈ ಬಾರಿಯೂ ಮಹಿಳಾ ಮತದಾರರ ಮನ ಗೆಲ್ಲಲು ಪ್ರಿಯಾಂಕಾ ಗಾಂಧಿ ಪ್ರಚಾರಕ್ಕೆ ಕಾಂಗ್ರೆಸ್ ಮೊರೆ ಹೋಗಿದೆ ಎನ್ನಲಾಗಿದೆ.
ಎರಡು ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರದ ಸಂದರ್ಭದಲ್ಲಿ ಮಹಿಳಾ ಅಸ್ತ್ರ ಬಳಕೆ ಮೂಲಕ ಪ್ರಚಾರ ನಡೆಸಲಿದ್ದಾರೆ. ಗ್ಯಾರಂಟಿ ಜೊತೆಗೆ ಮಹಿಳಾ ಮತಗಳ ಗ್ಯಾರಂಟಿಗೆ ಪ್ರಿಯಾಂಕಾ ಮೂಲಕ ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಒಟ್ಟಾರೆ ಈ ಬಾರಿಯೂ ಮಹಿಳಾ ಮತ ಗ್ಯಾರಂಟಿಗಾಗಿ ಪ್ರಿಯಾಂಕಾ ಗಾಂಧಿ ಮೂಲಕ ಮಹಿಳಾ ಮತ ಭೇಟೆಗೆ ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ.
– ಅಂತರ್ಜಾಲ ಮಾಹಿತಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ನೈಸರ್ಗಿಕ ಕೃಷಿಗೆ ರಾಜಸ್ಥಾನದ ದೊಡ್ಡ ಹೆಜ್ಜೆ : 32 ಸಂಸ್ಥೆಗಳೊಂದಿಗೆ ಒಪ್ಪಂದ, ರೈತರಿಗೆ ತಂತ್ರಜ್ಞಾನ – ಮಾರುಕಟ್ಟೆ ಬೆಂಬಲ
July 13, 2026
10:46 PM
by: ದ ರೂರಲ್ ಮಿರರ್.ಕಾಂ
ಬಾಂಗ್ಲಾದೇಶದಲ್ಲಿ ಭೀಕರ ಪ್ರವಾಹ – ಭಾರಿ ಮಳೆಯಿಂದ 50 ಕ್ಕೂ ಅಧಿಕ ಮಂದಿ ಸಾವು ; 10 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ
July 13, 2026
10:16 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ |13-07-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲ – ಮುಂದಿನ 10 ದಿನ ಜೋರು ಮಳೆ ಇಲ್ಲ
July 13, 2026
2:42 PM
by: ಸಾಯಿಶೇಖರ್ ಕರಿಕಳ
ಅಮರನಾಥದ ಹಿಮ ಶಿವಲಿಂಗ 90% ಕರಗಿತು…! ಹವಾಮಾನ ಬದಲಾವಣೆಯೇ ಕಾರಣವೇ?
July 13, 2026
7:17 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror