ಸಾಧನೆ -ಸಾಹಸ | 5 ಶಿಖರಗಳನ್ನು ಏರಿದ ಮೊದಲ ಭಾರತೀಯ ಮಹಿಳೆ | 30 ವರ್ಷ ವಯಸ್ಸಿನ ಪ್ರಿಯಾಂಕಾ ಮೋಹಿತೆ ಸಾಧನೆ |

May 7, 2022
1:18 PM

ಪಶ್ಚಿಮ ಮಹಾರಾಷ್ಟ್ರದ ಸತಾರಾ ಮೂಲದ ಸದ್ಯ ಬೆಂಗಳೂರಿನಲ್ಲಿರುವ ಪ್ರಿಯಾಂಕಾ ಮೋಹಿತೆ ಅವರು ಗುರುವಾರ ಕಾಂಚನ್‌ಜುಂಗಾ ಪರ್ವತವನ್ನು ಏರುವ ಮೂಲಕ  8,000 ಮೀಟರ್‌ಗಳ ಮೇಲಿನ ಐದು ಶಿಖರಗಳನ್ನು ಏರಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ವಿಶ್ವದ 10 ನೇ ಅತಿ ಎತ್ತರದ ಪರ್ವತ ಶಿಖರವಾದ ಅನ್ನಪೂರ್ಣ ಮೌಂಟ್ (8,091 ಮೀ) ಅನ್ನು ಅವರು ಏರುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

Advertisement

2020 ರ ತೇನ್ಸಿಂಗ್ ನಾರ್ಗೆ ಸಾಹಸ ಪ್ರಶಸ್ತಿ ಪುರಸ್ಕೃತರಾದ ಪ್ರಿಯಾಂಕಾ ಮೋಹಿತೆ (30) ಅವರು  ಮೂರನೇ ಅತಿ ಎತ್ತರದ ಪರ್ವತವಾದ ಕಾಂಚನಜುಂಗಾ ಪರ್ವತಕ್ಕೆ (8,586 ಮೀ) ತನ್ನ ಯಾತ್ರೆಯನ್ನು ಮೇ.4 ರಂದು ಸಂಜೆ 4.52 ಕ್ಕೆ ಯಶಸ್ವಿಯಾಗಿ ಪೂರ್ಣಗೊಳಿಸಿದರು, ”ಎಂದು ಅವರ ಸಹೋದರ ಆಕಾಶ್ ಮೋಹಿತೆ ಪಿಟಿಐಗೆ ತಿಳಿಸಿದರು.

ಏಪ್ರಿಲ್ 2021 ರಲ್ಲಿ, ಅವರು ವಿಶ್ವದ 10 ನೇ ಅತಿ ಎತ್ತರದ ಪರ್ವತ ಶಿಖರವಾದ ಅನ್ನಪೂರ್ಣ ಮೌಂಟ್ (8,091 ಮೀ) ಅನ್ನು ಏರಿದ್ದರು ಮತ್ತು ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಆರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪ್ರಿಯಾಂಕಾ ಮೋಹಿತೆ 2013 ರಲ್ಲಿ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ (8,849 ಮೀ), 2018 ರಲ್ಲಿ ಲೊಟ್ಸೆ (8,516 ಮೀ), ಮೌಂಟ್ ಮಕಾಲು (8,485 ಮೀ) ಮತ್ತು 2016 ರಲ್ಲಿ ಕಿಲಿಮಂಜಾರೋ ಪರ್ವತ (5,895 ಮೀ) ಏರಿದ್ದಾರೆ.

2019 ರಲ್ಲಿ, ಅವರು ಮೌಂಟ್ ಎವರೆಸ್ಟ್‌ನ ಆಗ್ನೇಯಕ್ಕೆ 19 ಕಿಲೋಮೀಟರ್ ದೂರದಲ್ಲಿರುವ ಮಹಾಲಂಗೂರ್ ಹಿಮಾಲಯದ ಐದನೇ ಅತಿ ಎತ್ತರದ ಶಿಖರ ಮಕಾಲುವನ್ನು ಏರಿದರು. ಮಾಧ್ಯಮದೊಂದಿಗೆ ಮಾತನಾಡಿದ ಪ್ರಿಯಾಂಕ ಮೋಹಿತೆ ಅವರು,  “ನಾನು ಟ್ರೆಕ್ಕಿಂಗ್‌ಗಾಗಿ ಸೋದರ ಸಂಬಂಧಿ ಮತ್ತು ನನ್ನ ಚಿಕ್ಕಪ್ಪನ ಜೊತೆ ಹೋಗುತ್ತಿದ್ದೆ. ಬೆಟ್ಟಗಳ ನಗರವಾದ ಸತಾರಾದಿಂದ ಬಂದ ನಾನು ಬಾಲ್ಯದಿಂದಲೂ ನನ್ನ ಪ್ರದೇಶದಲ್ಲಿ ಬೆಟ್ಟಗಳನ್ನು ಹುಡುಕಿ ಏರುತ್ತಿದೆ. 7 ನೇ ತರಗತಿಯಲ್ಲಿದ್ದಾಗ ನಾನು ವೃತ್ತಿಪರ ಗುಂಪಿನೊಂದಿಗೆ ಚಾರಣವನ್ನು ಪ್ರಾರಂಭಿಸಿದೆ ಎನ್ನುತ್ತಾರೆ.

Advertisement

12 ನೇ ತರಗತಿ ಪರೀಕ್ಷೆಯ ನಂತರ ಅವರು ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನಲ್ಲಿ 2010 ರಲ್ಲಿ ಪರ್ವತಾರೋಹಣದಲ್ಲಿ ಕೋರ್ಸ್ ತೆಗೆದುಕೊಂಡರು. ನಂತರ ಅವರು 2012 ರಲ್ಲಿ ತನ್ನ ಮುಂದುವರಿದ ಪರ್ವತಾರೋಹಣ ಕೋರ್ಸ್ ಅನ್ನು ಮುಗಿಸಿದರು. ಆಕೆಯ ಮೊದಲ ಆರೋಹಣ 2012 ರಲ್ಲಿ. ಅವರು 6200 ಮೀಟರ್ ಎತ್ತರವಿರುವ ಬಂದರ್‌ಪೂಂಚ್ ಪರ್ವತವನ್ನು ಏರಿದರು.

ಮಹಾರಾಷ್ಟ್ರ ಮೂಲದ ಈಕೆ ಈಗ ಬೆಂಗಳೂರಿನಲ್ಲಿ ನೆಲೆಸಿದ್ದು, 2017-2018ರ ಸಾಹಸ ಕ್ರೀಡೆಗಳಿಗಾಗಿ ಮಹಾರಾಷ್ಟ್ರ ಸರ್ಕಾರದ ಶಿವ ಛತ್ರಪತಿ ರಾಜ್ಯ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕುಶಾಲಿ ಗೌಡ, ಬೆಂಗಳೂರು
July 16, 2025
10:47 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಅನ್ವಿತಾ ಸಿ
July 16, 2025
10:39 PM
by: ದ ರೂರಲ್ ಮಿರರ್.ಕಾಂ
ಕರಾವಳಿ ಕರ್ನಾಟಕ, ಕೇರಳ ಭಾರೀ ಮಳೆ ಸಾಧ್ಯತೆ
July 16, 2025
10:18 PM
by: The Rural Mirror ಸುದ್ದಿಜಾಲ
ಕರಾವಳಿ-ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ | ಶಾಲೆಗಳಿಗೆ ಜು.17 ರಂದು ರಜೆ
July 16, 2025
10:07 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group