#Plasticban |ರಾಜಧಾನಿಯಲ್ಲಿ ಬ್ಯಾನ್‌ ಆದ್ರೂ ನಿಲ್ಲದ ಪ್ಲಾಸ್ಟಿಕ್‌ ಉತ್ಪಾದನೆ | ಎಗ್ಗಿಲ್ಲದೇ ನಡೆಯೋ ದಂಧೆ ಬಗ್ಗೆ ತಲೆಕೆಡಿಸಿಕೊಳ್ಳದ ಮಾಲಿನ್ಯ ನಿಯಂತ್ರಣ ‌ಮಂಡಳಿ |

October 14, 2023
12:51 PM
ರಾಜಧಾನಿಯಲ್ಲಿ ಯಾವುದೇ ಅಧಿಕಾರಿಗಳ‌ ಭಯವಿಲ್ಲದೇ ಕಾರ್ಖಾನೆಗಳಲ್ಲಿ ಫ್ಲಾಸ್ಟಿಕ್ ತಯಾರಾಗುತ್ತಿದ್ದು, ಅಧಿಕಾರಿಗಳು ಮಾತ್ರ ಏನೂ ಗೊತ್ತಿಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ.‌ ರಾಜಾರೋಷವಾಗಿ ಕಾರ್ಖಾನೆಗಳಲ್ಲಿ ಪ್ಲಾಸ್ಟಿಕ್ ತಯಾರಾಗುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಪ್ಲಾಸ್ಟಿಕ್‌ #Plastic ಎಂಬ ಪೆಡಂಭೂತ ಇಡೀ ವಿಶ್ವವನ್ನೇ ತಿಂದು ಹಾಕುತಿದೆ. ಈ ಸಮಸ್ಯೆಯಿಂದ ಹೊರ ಬರಲು ಅನೇಕ ದೇಶಗಳು ಹೆಣಗಾಡುತ್ತಿವೆ. ಅನೇಕ ಕ್ರಮಗಳನ್ನು ಸರ್ಕಾರ, ಸಂಘಸಂಸ್ಥೆಗಳು, ಎನ್‌ಜಿಓಗಳು ತೆಗೆದುಕೊಳ್ಳುತ್ತಲೇ ಇದೆ. ಆದರೆ ಪ್ಲಾಸ್ಟಿಕ್‌ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದೆ. ಅದರಲ್ಲೂ ರಾಜ್ಯ ರಾಜಧಾನಿಯಲ್ಲಿ ಏಕ ಬಳಕೆ ಫ್ಲಾಸ್ಟಿಕ್​ಗಳನ್ನು ಬ್ಯಾನ್ ಮಾಡಿ ಒಂದು ವರ್ಷವೇ ಕಳೆದಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಪ್ಲಾಸ್ಟಿಕ್ ಇನ್ನೂ ಓಡಾಡುತ್ತಿದೆ…!

Advertisement
Advertisement
Advertisement

ಈ ಬ್ಯಾನ್ ಕೇವಲ ಹೆಸರಿಗೆ ಮಾತ್ರ ಎನ್ನುವಂತೆ ಕಾಣುತ್ತಿದೆ.‌ ಯಾಕೆಂದರೆ ರಾಜಧಾನಿಯಲ್ಲಿ ಯಾವುದೇ ಅಧಿಕಾರಿಗಳ‌ ಭಯವಿಲ್ಲದೇ ಕಾರ್ಖಾನೆಗಳಲ್ಲಿ ಫ್ಲಾಸ್ಟಿಕ್ ತಯಾರಾಗುತ್ತಿದ್ದು, ಅಧಿಕಾರಿಗಳು ಮಾತ್ರ ಏನೂ ಗೊತ್ತಿಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ.‌ ಹೌದು, ರಾಜಧಾನಿಯಲ್ಲಿ ಒಂದು ವರ್ಷದ ಹಿಂದೆ ಪ್ಲಾಸ್ಟಿಕ್ ಬ್ಯಾನ್ ಆಗಿತ್ತು. ಇನ್ನು ಸಿಂಗಲ್ ಯೂಸ್ ಪ್ಲಾಸ್ಟಿಕ್​ಗಳನ್ನ ಬಳಕೆ ಮಾಡಿದರೆ ಫೈನ್ ಹಾಕುವುದಾಗಿ ಅಧಿಕಾರಿಗಳು ಹೇಳಿದ್ದರು.‌ ಇನ್ನು ಸಣ್ಣ-ಪುಟ್ಟ ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಸಿದ್ರೆ ಪೌರುಷ ತೋರಿಸುವ ಅಧಿಕಾರಿಗಳು ರಾಜಾರೋಷವಾಗಿ ಕಾರ್ಖಾನೆಗಳಲ್ಲಿ ಪ್ಲಾಸ್ಟಿಕ್ ತಯಾರಾಗುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಯಲಚೇನಹಳ್ಳಿಯ ನಾಯ್ಡು ಲೇಔಟ್ ನಲ್ಲಿ ಪ್ಲಾಸ್ಟಿಕ್ ತಯಾರಿ ಮಾಡಿ, ತಮಗಿಷ್ಟದ ಬೆಲೆ ಮಾರಾಟ ಮಾಡ್ತಿದ್ದಾರೆ.

Advertisement

ಈ ಸಿಂಗಲ್ ಯೂಸ್ ಪ್ಲಾಸ್ಟಿಕ್ ತಯಾರು ಮಾಡ್ಬೇಕು ಅಂತ ಹೇಳಿದ್ರೆ ಪರಿಸರ ನಿಯಂತ್ರಣ ಮಂಡಳಿಯಿಂದ ಒಪ್ಪಿಗೆ ಪಡಿಯಬೇಕು. ಆದರೆ ಈ ಪ್ಲಾಸ್ಟಿಕ್ ತಯಾರಿಕಾ ಘಟಕದ ಮಾಲೀಕರು ಯಾವುದೇ ಅನುಮತಿ ಪಡೆಯದೇ ಯಾರಿಸುವುದಲ್ಲದೇ, ಎಲ್ಲರೂ ತಾಯಾರಿ ಮಾಡ್ತಿದ್ದಾರೆ. ಇನ್ನು, ಈ ಕುರಿತಾಗಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳ ವೀಕ್ಷಣೆ ಮಾಡಿ ಸ್ಥಳೀಯ ಎಇ ದೂರು ದಾಖಾಲಿಸಿಕೊಂಡಿದ್ದಾರೆ. ಜೊತೆಗೆ ಪ್ಲಾಸ್ಟಿಕ್ ತಯಾರಿಕಾ ಘಟಕದ ಬೆಸ್ಕಾಂ ಪವರ್ ಲೈನ್ ಕಟ್ ಮಾಡುವುದಾಗಿ ಹೇಳಿದ್ದಾರೆ. ಒಟ್ನಲ್ಲಿ, ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಎನ್ನುವ ಮಾಲಿನ್ಯ ನಿಯಂತ್ರಣ ಮಂಡಳಿ ಪ್ಲಾಸ್ಟಿಕ್ ತಯಾರಿಕಾ ಘಟಕಗಳ‌ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸದೇ ಇರುವುದುದೇ ಸಧ್ಯ ಪ್ಲಾಸ್ಟಿಕ್ ತಯಾರಿಕೆಗೆ ಕಾರಣವಾಗುತ್ತಿದ್ದು, ಕಾರ್ಖಾನೆಗಳ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಹದ್ದಿನ ಕಣ್ಣಿಡಬೇಕಿದೆ.‌

(ಅಂತರ್ಜಾಲ ಮಾಹಿತಿ)

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror