ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

April 16, 2025
10:50 AM

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ ಹಲಸು ಬೆಳೆಯ ಬಗ್ಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಐಐಎಚ್‌ಆರ್‌ ವಿಜ್ಞಾನಿಗಳು ಮಾಹಿತಿ ನೀಡಿದರು.ಇದೇ ವೇಳೆ ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಪ್ರಚಾರದ ಕುರಿತು ಚರ್ಚೆ ನಡೆಸಿದರು.…..ಮುಂದೆ ಓದಿ….

ಭಾರತದ ವಿವಿಧ ರಾಜ್ಯಗಳಲ್ಲಿ ವಿಸ್ತೀರ್ಣ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವ ಕಮಲಂ(ಡ್ರಾಗನ್‌ ಫ್ರುಟ್) ಆಯ್ಕೆಗಳಾದ ಐಐಎಚ್‌ಆರ್ ಪಿಂಕ್ ಮತ್ತು ಐಐಎಚ್‌ಆರ್ ವೈಟ್ ಬಗ್ಗೆ  ಸಚಿವರಿಗೆ ಮಾಹಿತಿ ನೀಡಿದರು.ಕಮಲಂ ಲಾಭದಾಯಕ ಹಣ್ಣಿನ ಬೆಳೆಯಾಗಿದ್ದು, ಇದನ್ನು ಮೆಕ್ಸಿಕೊ, ಆಸ್ಟ್ರೇಲಿಯಾ, ಥೈಲ್ಯಾಂಡ್, ತೈವಾನ್, ಇಸ್ರೇಲ್ ಇತ್ಯಾದಿ ದೇಶಗಳಲ್ಲಿ ವಾಣಿಜ್ಯಿಕವಾಗಿ ಬೆಳೆಸಲಾಗುತ್ತಿದೆ. ಆದರೆ ಈಗ ಭಾರತದ ರೈತರಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಕಮಲಂನಲ್ಲಿನ ಸುಧಾರಿತ ತಳಿಶಾಸ್ತ್ರ ಮತ್ತು ತಳಿಗಳು ಈ ಬೆಳೆಯ ವಿಸ್ತೀರ್ಣ ವಿಸ್ತರಣೆಗೆ ಮತ್ತು ರೈತರ ಆದಾಯವನ್ನು ಸುಧಾರಿಸಲು ದಾರಿ ಮಾಡಿಕೊಡುತ್ತವೆ ಎಂಬ ಮಾಹಿತಿಯನ್ನು ವಿಜ್ಞಾನಿಗಳು ನೀಡಿದರು.

ಕೃಷಿ-ಗ್ರಾಮೀಣ ಹಾಗೂ ಪರಿಸರಕ್ಕೆ ಸಂಬಂಧಿಸಿದ ರಚನಾತ್ಮಕ ಸುದ್ದಿಗಳಿಗೆ ಆದ್ಯತೆ ನೀಡುವ ನಮ್ಮ www.theruralmirror.com ಇದರ WhatsApp ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ...

ಕೆಂಪು ಬಣ್ಣದ ಹಲಸಿನ ಹಣ್ಣು ಸಿದ್ದು ಮತ್ತು ಶಂಕರ ಪ್ರಭೇದಗಳನ್ನು ಐಸಿಎಆರ್‌ ಮತ್ತು ಐಐಎಚ್‌ ಆರ್ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಅವು ಹಲಸಿನ ಹಣ್ಣಿನ ಕೃಷಿಯ ಮೇಲೆ ಉತ್ತಮ ಪರಿಣಾಮ ಬೀರಿವೆ. 1500 ಕ್ಕೂ ಹೆಚ್ಚು ಎಕರೆಗಳಲ್ಲಿ ಈ ಪ್ರಭೇದವನ್ನು ಬೆಳೆಯಲಾಗುತ್ತಿದೆ. ರೈತರು ಸುಮಾರು 50 ಲಕ್ಷ ರೂ.ಗಳ ಲಾಭವನ್ನು ಪಡೆಯುತ್ತಾರೆ ಎಂದು ವಿಜ್ಞಾನಿಗಳು ವಿವರಿಸಿದರು.

Advertisement

ಮತ್ತೊಂದು ಪ್ರಮುಖ ಹಣ್ಣಿನ ಬೆಳೆಯಾದ ಆವಕಾಡೊ, ರೈತರ ಆದಾಯದ ಸುಸ್ಥಿರತೆಗಾಗಿ ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡಬಬಹುದಾಗಿದೆ. ಈ ನಿಟ್ಟಿನಲ್ಲಿ ಐಐಎಚ್‌ಆರ್ ಎರಡು ಪ್ರಭೇದಗಳಾದ ಅರ್ಕಾ ಸುಪ್ರೀಂ ಮತ್ತು ಅರ್ಕಾ ರವಿಯನ್ನು ಬಿಡುಗಡೆ ಮಾಡಿದೆ. ಈ ಪ್ರಭೇದಗಳು ನಿಯಮಿತವಾಗಿ ಫಲ ನೀಡುವ, ಹೆಚ್ಚಿನ ಇಳುವರಿ ನೀಡುವ. 400-600 ಗ್ರಾಂ ಹಣ್ಣಿನ ತೂಕವನ್ನು ಹೊಂದಿದ್ದು, ಸುಮಾರು 80% ತಿರುಳು ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ ಕೃಷಿಗೆ ಸೂಕ್ತವಾಗಿದೆ ಎಂಬ ಮಾಹಿತಿಯನ್ನು ಸಚಿವರಿಗೆ ನೀಡಿದರು.  ಈ ಹಣ್ಣಿನ ಬೆಳೆಗಳನ್ನು ಉತ್ತೇಜಿಸಲು ತೋಟಗಾರಿಕಾ ವಿಜ್ಞಾನ ವಿಭಾಗ, ಐಸಿಎಆರ್ ಮತ್ತು ಐಸಿಎಆರ್-ಐಐಎಚ್ಆರ್ ಬೆಂಗಳೂರಿನ ಪ್ರಯತ್ನಗಳನ್ನು  ಸಚಿವರು ಶ್ಲಾಘಿಸಿದರು.

ಈ ಸಂದರ್ಭ  ಡಾ. ದೇವೇಶ್ ಚತುರ್ವೇದಿ,  ಡಾ. ವಿಬಿ ಪಟೇಲ್,  ಪ್ರಿಯ ರಂಜನ್ ಮತ್ತು ಬೆಂಗಳೂರಿನ ಐಐಎಚ್‌ಆರ್ ಪ್ರಧಾನ ವಿಜ್ಞಾನಿ ಡಾ. ಜಿ ಕರುಣಾಕರನ್ ಇದ್ದರು.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ
January 9, 2026
10:26 PM
by: ದ ರೂರಲ್ ಮಿರರ್.ಕಾಂ
ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ
January 9, 2026
10:16 PM
by: ದ ರೂರಲ್ ಮಿರರ್.ಕಾಂ
ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?
January 9, 2026
10:08 PM
by: ದ ರೂರಲ್ ಮಿರರ್.ಕಾಂ
ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ
January 9, 2026
9:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror