ಭಾರತದಲ್ಲಿ ಸಮುದ್ರ ಜಲಕೃಷಿ ಚಟುವಟಿಕೆ ಉತ್ತೇಜನ | ಸಮುದ್ರ ಮೀನಿನ ಕೃಷಿಯಲ್ಲಿ ಹೊಸ ಸಾಧನೆ ಮಾಡಿದ ಸಿಎಂಎಫ್​ಆರ್​ಐ

April 24, 2024
9:33 PM

ಆಹಾರಗಳಲ್ಲಿ(Food) ಮೀನು(Fish) ಕೂಡ ಪ್ರಮುಖ ಭಾಗ ವಹಿಸುತ್ತದೆ. ಮಾಂಸಾಹಾರಿಗಳಲ್ಲಿ(Non veg) ಸಮುದ್ರಾಹಾರ(Sea-food) ಬಯಸಿ ತಿನ್ನುವವರು ಬಹುಪಾಲು ಮಂದಿ. ಮತ್ಸ್ಯೋದ್ಯಮ(Fishery) ಬೃಹತ್‌ ಉದ್ಯಮವಾಗಿ ಬೆಳೆದಿದೆ. ಆರ್ಥಿಕವಾಗಿ(Economy) ವಹಳ ದೊಡ್ಡದಾಗಿ ಬೆಳೆದಿದೆ. ಸಮುದ್ರಾಹಾರ ಬೇಡಿಕೆ ಹೆಚ್ಚಿಸುವ ಜೊತೆಗೆ ಭಾರತದ(India) ಸಮುದ್ರ ಜಲಕೃಷಿ ಚಟುವಟಿಕೆ ಉತ್ತೇಜಿಸುವ ಉದ್ದೇಶದಿಂದ ಕೇರಳದ(Kerala) ಐಸಿಎಆರ್(ICER)​- ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (CMFRI) ಹೊಸ ಸಾಧನೆ ಮಾಡಿದೆ. ಬೀಜ ಉತ್ಪಾದನೆ ತಂತ್ರಜ್ಞಾನದ ಅಭಿವೃದ್ಧಿ ಮೂಲಕ ಗೋಲ್ಡನ್​​ ಟ್ರೆವಲ್ಲಿ ಎಂಬ ಮೀನಿನ ಉತ್ಪಾದನೆಯನ್ನು ಯಶಸ್ವಿಯಾಗಿ ಸಿಎಂಎಫ್​ಆರ್​​ಐ ಮಾಡಿದೆ. ಈ ಅಭಿವೃದ್ಧಿಯು ಸಮುದ್ರಾಹಾರದ ಉತ್ಪಾದನೆ ಮತ್ತು ದೇಶದಲ್ಲಿ ಲಭ್ಯವಿರುವ ತಳಿಗಳ ಅಭಿವೃದ್ಧಿಗೆ ಕಾರಣವಾಗಲಿದೆ.

Advertisement

ವಿಶಾಖಪಟ್ಟಣಂನ ಪ್ರಾದೇಶಿಕ ಕೇಂದ್ರ ಸಿಎಂಎಫ್​ಆರ್​ಐ ವಿಜ್ಞಾನಿಗಳು ಐದು ವರ್ಷಗಳ ಅಧ್ಯಯನದ ಬಳಿಕ ಈ ಮೀನಿನ ರಕ್ತನಾಳದ ಅಭಿವೃದ್ಧಿ, ಸಂತಾನೋತ್ಪತಿ ಸಾಮರ್ಥ್ಯ ಮತ್ತು ಮೀನಿನ ಲಾರ್ವಾ ಸಾಕಾಣಿಯಲ್ಲಿ ಯಶಸ್ವಿ ಸಾಧನೆ ಮಾಡಿದ್ದಾರೆ. ಗೋಲ್ಡನ್​ ಟ್ರೆವಲ್ಲೆ ಅಥವಾ ಗೋಲ್ಡನ್​ ಕಿಂಗ್​ ಫಿಶರ್​ ತಳಿಯ ಮೀನುಗಳು ಸಮುದ್ರ ಜಲ ಕೃಷಿಗೆ ಸೂಕ್ತವಾಗಿದೆ. ಕಾರಣ ಇದು ಬೆಳವಣಿಗೆ ದರ ಮತ್ತು ಉತ್ತಮ ಮಾಂಸದ ಗುಣಮಟ್ಟ ಮತ್ತು ಸೇವನೆ ಹಾಗೂ ಅಲಂಕಾರ ಉದ್ದೇಶದಿಂದ ಇದಕ್ಕೆ ಬೇಡಿಕೆ ಹೆಚ್ಚಿದೆ. ಈ ಮೀನು ಕೆಜಿಗೆ 400 ರಿಂದ 500 ರೂ. ಮೌಲ್ಯವನ್ನು ಹೊಂದಿದೆ.

ಈ ಕುರಿತು ಮಾತನಾಡಿರುವ ಸಿಎಂಎಫ್​ಆರ್​ಐನ ನಿರ್ದೇಶಕ ಗೋಪಾಲ್​ಕೃಷ್ಣನ್​​, ಭಾರತದ ಸಮುದ್ರ ಕೃಷಿಯಲ್ಲಿ ಇದೊಂದು ಗಮನಾರ್ಹ ಮೈಲಿಗಲ್ಲು ಎಂದಿದ್ದಾರೆ. ಅಪೇಕ್ಷಿತ ಗುಣಮಟ್ಟದ ಕಾರಣದಿಂದ ಸಮುದ್ರ ಕೃಷಿಗೆ ಈ ಗೋಲ್ಡನ್​ ಟ್ರೆವಲ್ಲೆ ಉತ್ತಮ ಮೀನಾಗಿದೆ. ಮೀನುಗಾರಿಕೆಯಲ್ಲಿ ಇದರ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿತ್ತು. ಇದೀಗ ಹೊಸ ತಂತ್ರಜ್ಞಾನದ ಮೂಲಕ ಇದರ ಸಂತಾನೋತ್ಪತ್ತಿ ಸಾಮರ್ಥ್ಯದ ಹೆಚ್ಚಳದ ಯಶಸ್ಸು, ಗಮನಾರ್ಹವಾಗಿ ಅದ್ಭುತವಾಗಿದೆ. ಇದು ಸುಸ್ಥಿರ ಮೀನು ಕೃಷಿ ಮೂಲಕ ಸಮುದ್ರದಲ್ಲಿನ ಜಲ ಕೃಷಿಗೆ ಅವಕಾಶವನ್ನು ನೀಡಲಿದೆ.

ಭಾರತದಲ್ಲಿ ಬಂಡೆಗಲ್ಲಿನ ನೀರಿನ ಪ್ರದೇಶದಲ್ಲಿ ಈ ಮೀನುಗಳನ್ನು ಕಾಣಬಹುದಾಗಿದೆ. ತಮಿಳುನಾಡು, ಪುದುಚೇರಿ, ಕೇರಳ, ಕರ್ನಾಟಕ ಮತ್ತು ಗುಜರಾತ್​ನಲ್ಲಿ ಇವು ಹೆಚ್ಚು ಕಂಡುಬರುತ್ತವೆ. ಇವು ಸಿಲ್ವರ್​ ಗ್ರೇ ಬಣ್ಣದ ಜೊತೆ ಹಳದಿ ಬಣ್ಣದ ಮೀನುಗಳಾಗಿವೆ. ನೋಡಲು ಆಕರ್ಷಣಿಯವಾಗಿರುವ ಹಿನ್ನೆಲೆ ಅಕ್ವೇರಿಯಂನಲ್ಲೂ ಸಹ ಇವುಗಳನ್ನು ಇಡುತ್ತಾರೆ. ಈ ತಳಿಗಳ ಅಲಂಕಾರಿಕ ಒಂದು ಮೀನಿನ ಬೆಲೆ 150 ರಿಂದ 250 ರೂ. ಇದೆ. 2019ರಲ್ಲಿ ಈ ಮೀನಿನ ಬೀಜದ ಉತ್ಪಾದನೆ ಪ್ರಯತ್ನವನ್ನು ವಿಶಾಖಪಟ್ಟಣಂ ಪ್ರಾದೇಶಿಕ ಕೇಂದ್ರದಲ್ಲಿ ನಡೆಸಲಾಗಿತ್ತು.

  • ಅಂತರ್ಜಾಲ ಮಾಹಿತಿ

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮನೆಯೊಳಗೆ ನುಗ್ಗಿದ ಚಿರತೆ | ಸತತ 5 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ |
April 4, 2025
4:45 PM
by: The Rural Mirror ಸುದ್ದಿಜಾಲ
ರಸ್ತೆ ಸರಕು ಸಾಗಾಣೆಯಲ್ಲೂ ತೀವ್ರ ಏರಿಕೆ  |  ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ
April 4, 2025
2:24 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04-04-2025 | ಇಂದು ಕೆಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಎ.7 ರಿಂದ ಮಳೆ ಕಡಿಮೆಯಾಗುವ ಲಕ್ಷಣ |
April 4, 2025
1:10 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ನಾಡಿನಲ್ಲಿ ಉಪಬೆಳೆಯಾಗಿ ತರಕಾರಿ ಕೃಷಿ ಮಾಡಿದ ಯುವಕ
April 4, 2025
8:00 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror

Join Our Group