ಆಹಾರಗಳಲ್ಲಿ(Food) ಮೀನು(Fish) ಕೂಡ ಪ್ರಮುಖ ಭಾಗ ವಹಿಸುತ್ತದೆ. ಮಾಂಸಾಹಾರಿಗಳಲ್ಲಿ(Non veg) ಸಮುದ್ರಾಹಾರ(Sea-food) ಬಯಸಿ ತಿನ್ನುವವರು ಬಹುಪಾಲು ಮಂದಿ. ಮತ್ಸ್ಯೋದ್ಯಮ(Fishery) ಬೃಹತ್ ಉದ್ಯಮವಾಗಿ ಬೆಳೆದಿದೆ. ಆರ್ಥಿಕವಾಗಿ(Economy) ವಹಳ ದೊಡ್ಡದಾಗಿ ಬೆಳೆದಿದೆ. ಸಮುದ್ರಾಹಾರ ಬೇಡಿಕೆ ಹೆಚ್ಚಿಸುವ ಜೊತೆಗೆ ಭಾರತದ(India) ಸಮುದ್ರ ಜಲಕೃಷಿ ಚಟುವಟಿಕೆ ಉತ್ತೇಜಿಸುವ ಉದ್ದೇಶದಿಂದ ಕೇರಳದ(Kerala) ಐಸಿಎಆರ್(ICER)- ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (CMFRI) ಹೊಸ ಸಾಧನೆ ಮಾಡಿದೆ. ಬೀಜ ಉತ್ಪಾದನೆ ತಂತ್ರಜ್ಞಾನದ ಅಭಿವೃದ್ಧಿ ಮೂಲಕ ಗೋಲ್ಡನ್ ಟ್ರೆವಲ್ಲಿ ಎಂಬ ಮೀನಿನ ಉತ್ಪಾದನೆಯನ್ನು ಯಶಸ್ವಿಯಾಗಿ ಸಿಎಂಎಫ್ಆರ್ಐ ಮಾಡಿದೆ. ಈ ಅಭಿವೃದ್ಧಿಯು ಸಮುದ್ರಾಹಾರದ ಉತ್ಪಾದನೆ ಮತ್ತು ದೇಶದಲ್ಲಿ ಲಭ್ಯವಿರುವ ತಳಿಗಳ ಅಭಿವೃದ್ಧಿಗೆ ಕಾರಣವಾಗಲಿದೆ.
ವಿಶಾಖಪಟ್ಟಣಂನ ಪ್ರಾದೇಶಿಕ ಕೇಂದ್ರ ಸಿಎಂಎಫ್ಆರ್ಐ ವಿಜ್ಞಾನಿಗಳು ಐದು ವರ್ಷಗಳ ಅಧ್ಯಯನದ ಬಳಿಕ ಈ ಮೀನಿನ ರಕ್ತನಾಳದ ಅಭಿವೃದ್ಧಿ, ಸಂತಾನೋತ್ಪತಿ ಸಾಮರ್ಥ್ಯ ಮತ್ತು ಮೀನಿನ ಲಾರ್ವಾ ಸಾಕಾಣಿಯಲ್ಲಿ ಯಶಸ್ವಿ ಸಾಧನೆ ಮಾಡಿದ್ದಾರೆ. ಗೋಲ್ಡನ್ ಟ್ರೆವಲ್ಲೆ ಅಥವಾ ಗೋಲ್ಡನ್ ಕಿಂಗ್ ಫಿಶರ್ ತಳಿಯ ಮೀನುಗಳು ಸಮುದ್ರ ಜಲ ಕೃಷಿಗೆ ಸೂಕ್ತವಾಗಿದೆ. ಕಾರಣ ಇದು ಬೆಳವಣಿಗೆ ದರ ಮತ್ತು ಉತ್ತಮ ಮಾಂಸದ ಗುಣಮಟ್ಟ ಮತ್ತು ಸೇವನೆ ಹಾಗೂ ಅಲಂಕಾರ ಉದ್ದೇಶದಿಂದ ಇದಕ್ಕೆ ಬೇಡಿಕೆ ಹೆಚ್ಚಿದೆ. ಈ ಮೀನು ಕೆಜಿಗೆ 400 ರಿಂದ 500 ರೂ. ಮೌಲ್ಯವನ್ನು ಹೊಂದಿದೆ.
ಈ ಕುರಿತು ಮಾತನಾಡಿರುವ ಸಿಎಂಎಫ್ಆರ್ಐನ ನಿರ್ದೇಶಕ ಗೋಪಾಲ್ಕೃಷ್ಣನ್, ಭಾರತದ ಸಮುದ್ರ ಕೃಷಿಯಲ್ಲಿ ಇದೊಂದು ಗಮನಾರ್ಹ ಮೈಲಿಗಲ್ಲು ಎಂದಿದ್ದಾರೆ. ಅಪೇಕ್ಷಿತ ಗುಣಮಟ್ಟದ ಕಾರಣದಿಂದ ಸಮುದ್ರ ಕೃಷಿಗೆ ಈ ಗೋಲ್ಡನ್ ಟ್ರೆವಲ್ಲೆ ಉತ್ತಮ ಮೀನಾಗಿದೆ. ಮೀನುಗಾರಿಕೆಯಲ್ಲಿ ಇದರ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿತ್ತು. ಇದೀಗ ಹೊಸ ತಂತ್ರಜ್ಞಾನದ ಮೂಲಕ ಇದರ ಸಂತಾನೋತ್ಪತ್ತಿ ಸಾಮರ್ಥ್ಯದ ಹೆಚ್ಚಳದ ಯಶಸ್ಸು, ಗಮನಾರ್ಹವಾಗಿ ಅದ್ಭುತವಾಗಿದೆ. ಇದು ಸುಸ್ಥಿರ ಮೀನು ಕೃಷಿ ಮೂಲಕ ಸಮುದ್ರದಲ್ಲಿನ ಜಲ ಕೃಷಿಗೆ ಅವಕಾಶವನ್ನು ನೀಡಲಿದೆ.
ಭಾರತದಲ್ಲಿ ಬಂಡೆಗಲ್ಲಿನ ನೀರಿನ ಪ್ರದೇಶದಲ್ಲಿ ಈ ಮೀನುಗಳನ್ನು ಕಾಣಬಹುದಾಗಿದೆ. ತಮಿಳುನಾಡು, ಪುದುಚೇರಿ, ಕೇರಳ, ಕರ್ನಾಟಕ ಮತ್ತು ಗುಜರಾತ್ನಲ್ಲಿ ಇವು ಹೆಚ್ಚು ಕಂಡುಬರುತ್ತವೆ. ಇವು ಸಿಲ್ವರ್ ಗ್ರೇ ಬಣ್ಣದ ಜೊತೆ ಹಳದಿ ಬಣ್ಣದ ಮೀನುಗಳಾಗಿವೆ. ನೋಡಲು ಆಕರ್ಷಣಿಯವಾಗಿರುವ ಹಿನ್ನೆಲೆ ಅಕ್ವೇರಿಯಂನಲ್ಲೂ ಸಹ ಇವುಗಳನ್ನು ಇಡುತ್ತಾರೆ. ಈ ತಳಿಗಳ ಅಲಂಕಾರಿಕ ಒಂದು ಮೀನಿನ ಬೆಲೆ 150 ರಿಂದ 250 ರೂ. ಇದೆ. 2019ರಲ್ಲಿ ಈ ಮೀನಿನ ಬೀಜದ ಉತ್ಪಾದನೆ ಪ್ರಯತ್ನವನ್ನು ವಿಶಾಖಪಟ್ಟಣಂ ಪ್ರಾದೇಶಿಕ ಕೇಂದ್ರದಲ್ಲಿ ನಡೆಸಲಾಗಿತ್ತು.
ಅಲ್ಲಲ್ಲಿ ಗುಡುಗು ಸಹಿತ ಸಂಜೆ, ರಾತ್ರಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಮುಂದಿನ…
ಪರಿಸರ ಪ್ರೇಮಿಗಳಿಗೆ, ನಗರದಲ್ಲಿ ಹೂವು, ಸಣ್ಣ ಸಣ್ಣ ಗಿಡ ಬೆಳೆಸುವವರಿಗೆ ಹೂಕುಂಡವಾಗಿ ಅಡಿಕೆಯ…
2026 ಜೂನ್ ವೇಳೆಗೆ ಎತ್ತಿನಹೊಳೆ ನೀರು ತುಮಕೂರು ತಲುಪಲಿದೆ ಎಂದು ಗೃಹ ಸಚಿವ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಒಂದೆರೆಡು ಕಡೆ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ,…
ಹಾವೇರಿ ಜಿಲ್ಲೆಯಲ್ಲಿರುವ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳಿಗೆ 21 ಬಾಡಿಗೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490