ಕೃಷಿ ಕ್ಷೇತ್ರದಲ್ಲಿ ಹಲವಾರು ವಿಶೇಷ ತಳಿಗಳು ಇವೆ. ಇವುಗಳ ರಕ್ಷಣೆಯ ಅಗತ್ಯ ಇದ್ದು, ಈ ಮೂಲಕ ರೈತರ ಆದಾಯವನ್ನು ಹೆಚ್ಚು ಮಾಡುವ ಅವಕಾಶಗಳು ಇವೆ. ಇದಕ್ಕಾಗಿ ರೈತರೊಂದಿಗೆ ಹಲಸು, ನೇರಳೆ ಹಾಗೂ ಹುಣಸೆ ಹಣ್ಣು ಸೇರಿದಂತೆ ಇತರ ವಿಶೇಷ ತಳಿಗಳ ಬಗ್ಗೆ ಈಚೆಗೆ ತುಮಕೂರಿನಲ್ಲಿ ಸಂವಾದ ನಡೆಯಿತು.
ಭಾರತೀಯ ಸಸ್ಯ ಪ್ರಬೇಧಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಮುಖ್ಯಸ್ಥ ಡಾ.ತ್ರಿಲೋಚನ್ ಮಹಾಪಾತ್ರ ಅವರು ತುಮಕೂರಿನ ಹಿರೇಹಳ್ಳಿಯ ಕೇಂದ್ರೀಯ ತೋಟಗಾರಿಕೆ ಪ್ರಾಯೋಗಿಕ ಕೇಂದ್ರದಲ್ಲಿ ವಿಜ್ಞಾನಿಗಳು ಹಾಗೂ ತಳಿ ಸಂರಕ್ಷಿತ ರೈತರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ವಿಶೇಷ ಸಂರಕ್ಷಿತ ತಳಿಗಳಿಗೆ ಪ್ರೋತ್ಸಾಹ ಅಗತ್ಯವಾಗಿದೆ. ಇಂದು ಹಲಸು, ನೇರಳೆ, ಹುಣಸೆ ಇತ್ಯಾದಿ ಸಂರಕ್ಷಿತ ತಳಿಗಳ ರೈತರೊಂದಿಗೆ ಚರ್ಚೆ ನಡೆಸಲಾಯಿತು. ತಳಿ ಸಂರಕ್ಷಣೆಗೆ ವಿಶೇಷ ಗಮನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ತುಷಾರ್ ಕಾಂತಿ ಬೆಹರಾ ಮಾತನಾಡಿ, ಸಂರಕ್ಷಿತ ತಳಿಗಳ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಕೇಂದ್ರ ಸರ್ಕಾರದ ಆಶಯ ಈಡೇರುತ್ತಿದೆ ಎಂದು ತಿಳಿಸಿದರು.
ಸಿದ್ದು ಹಲಸು ತಳಿಯ ಮಾಲೀಕ ಪರಮೇಶ್ ಸಿದ್ದು ತಮ್ಮ ಅನುಭವ ಹಂಚಿಕೊಳ್ಳುತ್ತಾ, ತಳಿಯ ಸಂರಕ್ಷಣೆಯ ಜೊತೆಗೆ ಆದಾಯವೂ ಹೆಚ್ಚಾಗಿದೆ, ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಪ್ರೋತ್ಸಾಹವೂ ಇದೆ ಎಂದು ತಿಳಿಸಿದರು.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…