ಮನುಷ್ಯನಿಗೆ ಕಣ್ಣು ಮುಖ್ಯವಾದ ಭಾಗ. ಹಿರಿಯರಿಗೆ ವಯಸ್ಸದಂತೆ ಕಣ್ಣು ಮಂಜುವಾಗಿ ಕಾಣುತ್ತದೆ. ಇನ್ನು ಕೆಲವು ಮಕ್ಕಳಿಗೂ ಕಣ್ಣಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಪ್ರೋಟೀನ್ ಭರಿತ ಆಹಾರದಿಂದ. ನಾವು ಉತ್ತಮವಾದ ಆಹಾರದ ಸೇವನೆಯನ್ನು ಮಾಡಿದಾಗ ಕಣ್ಣಿನ ದೃಷ್ಟಿ ಹೆಚ್ಚಾಗಿ ಕಾಣಲು ಸಾಧ್ಯ. ಕಣ್ಣಿನ ಆರೈಕೆಗೆ ಯಾವೆಲ್ಲಾ ಪ್ರೋಟೀನ್ ಭರಿತ ಆಹಾರ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳುವ:
- ಕ್ಯಾರೆಟ್: ನಮಗೆಲ್ಲಾ ಗೊತ್ತೆ ಇದೆ. ಕ್ಯಾರೆಟ್ ಕಣ್ಣಿನ ಆರೈಕೆ ಉತ್ತಮವಾದ ಆಹಾರವೆಂದು. ಹೌದು!ಇದರಲ್ಲಿ ವಿಟಮಿನ್ ಎ ಇದೆ. ಹಾಗೂ ಒಮೆಗಾ-೩ ಅಂಶವು ಒಳಗೊಂಡದೆ.
- ಎಲೆಗಳ ಸೊಪ್ಪು ತರಕಾರಿಗಳು: ಸೊಪ್ಪು ತರಕಾರಿಗಳು ಹೆಚ್ಚು ಸೇವಿಸುವುದರಿಂದ ಲುಟೀನ್ ಮತ್ತು ಜೀಯಾಕ್ಸಾಂಥಿನ್ ಹೆಚ್ಚು ಪ್ರಮಾಣದಲ್ಲಿ ಇರುವುದರಿಂದ ಕಣ್ಣಿನ ಆರೈಕೆ ಉತ್ತಮ.
- ಹಣ್ಣುಗಳ ಸೇವನೆ: ಹಣ್ಣುಗಳಲ್ಲಿ ಕಿತ್ತಳೆ, ನಿಂಬೆ ಮತ್ತು ದ್ರಾಕ್ಷಿ ಹಣ್ಣುಗಳು ತುಂಬಾ ಉತ್ತಮ. ಇದರಲ್ಲಿ ವಿಟಮನ್ ಸಿ, ಇದು ಕಣ್ಣುನ ರಕ್ತನಾಳಗಳನ್ನು ಬಲಪಡಿಸುತ್ತದೆ ಮತ್ತು ಕಣ್ಣಿನ ಪೊರೆಯನ್ನು ತಡೆಯಲು ಸಹಾಯ ಮಾಡುತ್ತದೆ.
- ಮೊಟ್ಟೆ ಮತ್ತು ಮೀನು ಸೇವನೆ: ಮೊಟ್ಟೆಯಲ್ಲಿ ಲುಟೀನ್, ಜಿಯಾಕ್ಸಾಂಥಿನ್ ಮತ್ತು ಸತುವಿನಿಂದ ಕೂಡಿದೆ ಮೀನುಗಳಲ್ಲಿ ಸಾಲ್ಮನ್ ಮತ್ತು ಟ್ಯೂನ್ ಮೀನುಗಳು ಒಮೆಗಾ- ಕೊಬ್ಬಿನಾಲಗಳಿಂದ ಸಮೃದ್ಧವಾಗಿವೆ.ಮೀನು ಕಣ್ಣಿನ ಶುಷ್ಕತೆಯನ್ನು ತಡೆಯುತ್ತದೆ ಮತ್ತು ರೆಟಿನಾವನ್ನು ಬಲಪಡಿಸಿದರೆ, ಮೊಟ್ಟೆಯಿಂದ ಮ್ಯಾಕ್ಯುಲರ್ ಡಿಜೆನರೇಶನ್ ಆಪಾಯವನ್ನು ಕಡಿಮೆ ಮಾಡುತ್ತದೆ.
- ಟ್ರೈಪ್ರೂಟ್ಸ್: ಬಾದಾಮಿ, ಸೂರ್ಯಕಾಂತಿ ಬೀಜಗಳು ಇತ್ಯಾದಿ ಸೇವನೆಯಿಂದ ಕಣ್ಣಿನ ಸೇವನೆ ಉತ್ತಮ.
- ಕಾಳುಗಳು ಮತ್ತು ದ್ವಿದಳ ಸೇವನೆ: ರಾಜ್ಮಾ, ಕಪ್ಪು ಕಡಲೆ ಇತ್ಯಾದಿಗಳಲ್ಲಿ ಸತುವು ಮತ್ತು ಬಯೋಪ್ಲೇವನಾಯ್ಡ್ಗಳಿರುತ್ತದೆ. ಇವು ರಾತ್ರಿಯ ಕುರುಡುತನವನ್ನು ತಡೆಯುತ್ತದೆ. ಇನ್ನು ಕಾಳುಗಳನ್ನು ಮೊಳಕೆ ಭರಿಸಿ ತಿನ್ನುವುದರಿಂದ ದೇಹಕ್ಕೂ ಕಣ್ಣಿಗೂ ತುಂಬನೇ ಒಳ್ಳೆಯದು.
ಈ ಎಲ್ಲಾ ಆಹಾರವನ್ನು ಕಣ್ಣಿನ ರಕ್ಷಣೆಗೆಂದುಒಂದೆ ಸಮನೆ ತಿನ್ನುವುದು ಒಳ್ಳೆಯದಲ್ಲ. ಬದಲಾಗಿದೆ ವಾರದಲ್ಲಿ ಒಮ್ಮೆ ಸೇವನೆ ಮಾಡುವುದು ಉತ್ತಮ. ಕ್ಯಾರೇಟ್ ಜ್ಯೂಸ್, ಮೊಳಕೆ ಕಾಳುಗಳು, ಹಣ್ಣುಗಳ ಜ್ಯೂಸ್ ಇತ್ಯಾದಿ ತರದಲ್ಲಿ ತಿನ್ನುವುದು ಉತ್ತಮ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

