ಗೋವು ಉಳಿಯಬೇಕು, ಆದರೆ ನಮ್ಮ ಮನೆಯಲ್ಲಿ ಅಲ್ಲ.. ಪಕ್ಕದ ಮನೆಯಲ್ಲಿ…!, ಈಗ ಅದೂ ಅಲ್ಲ, ರಸ್ತೆ ಬದಿಯಲ್ಲಿ ಎಂಬ ಹಾಗೆ ಆಗಿದೆ ಕಾಲ. ರಸ್ತೆ ಬದಿಗಳಲ್ಲಿ ಹೋರಿಗಳು ಬಂದು ಇಳಿಯುತ್ತವೆ, ಸಮೀಪದ ಮನೆಗಳಿಗೆ, ತೋಟಗಳಿಗೂ ಈಗ ಸಂಕಷ್ಟ. ವಾಹನ ಸವಾರರಿಗೂ ಕಷ್ಟ ಕಷ್ಟ..!. ಈಚೆಗೆ ಸುಳ್ಯದ ಎಲಿಮಲೆ ಬಳಿಯಲ್ಲಿ ಕೆರೆಗೆ ಹೋರಿ ಬಿದ್ದು ಸಂಕಷ್ಟ ಅನುಭವಿಸಿದೆ.
ಸುಳ್ಯದ ಹಲವು ಕಡೆಗಳಲ್ಲಿ ಹೋರಿ ಕರುಗಳಲ್ಲಿ ರಸ್ತೆ ಬದಿ, ಕಾಡಿನ ಬದಿಗಳಲ್ಲಿ , ಪೇಟೆ ಬದಿಗಳಲ್ಲಿ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈಚೆಗೆ ಎಲಿಮಲೆ ಬಳಿಯ ಚಳ್ಳ ಗೋವಿಂದ ಭಟ್ ಅವರ ತೋಟದ ಕೆರೆಯಲ್ಲಿ ಹೋರಿ ಕರುವೊಂದು ಕೆರೆಗೆ ಬಿದ್ದಿತ್ತು. ನಂತರ ಸ್ಥಳೀಯರ ಸಹಕಾರದಿಂದ ಮೇಲಕ್ಕೆತ್ತಲಾಯಿತು.ಕೆಲವು ಸಮಯದ ಹಿಂದೆ ರಸ್ತೆ ಬದಿಯಲ್ಲಿದ್ದ ಹೋರಿಯೊಂದು ಗುತ್ತಿಗಾರು ಬಳಿಯ ವಳಲಂಬೆಯಲ್ಲಿ ಬ್ಯಾರೆಲ್ ಒಳಗೆ ತಲೆಹಾಕಿ ಒದ್ದಾಟ ನಡೆಸಿತ್ತು. ಬಳಿಕ ಅಟೋ ಚಾಲಕರು ತೆರವುಗೊಳಿಸಲು ಹರಸಾಹಸ ಪಟ್ಟಿದ್ದರು. ಕೆಲವು ಸಮಯದ ಹಿಂದೆ ಉಬರಡ್ಕದ ಬಳಿಯೂ ಹೊಳೆಯಲ್ಲಿ ಹೋರಿ ಕರು ಕೆಸರಿನಲ್ಲಿ ಹೋತು ಹೋಗಿ ಪರದಾಟ ನಡೆಸಿತ್ತು.
ಹೀಗೆ ಕೆಲವು ಹೋರಿ ಕರುಗಳನ್ನು ಅಲ್ಲಲ್ಲಿ ಕೆಲವೊಂದು ಅನಾಮಧೇಯರು ಬಿಟ್ಟು ಹೋಗುತ್ತಿದ್ದಾರೆ. ಈ ಹೋರಿಗಳು ಸಂಧಿಗಳಲ್ಲಿ ನುಗ್ಗಿ, ತರಕಾರಿ ಹಾಗೂ ಕೃಷಿ ಕಾರ್ಯಗಳಿಗೆ ಹಾನಿ ಮಾಡುತ್ತಿದೆ. ರಸ್ತೆ ಬದಿ ವಾಹನಗಳಿಗೂ ಅಡ್ಡ ಬಂದ ದ್ವಿಚಕ್ರ ಸವಾರರಿಗೂ ಸಂಕಷ್ಟವಾಗಿದೆ. ಹೋರಿ ಸಾಕಲಾಗದೇ ರಸ್ತೆಯಲ್ಲಿ ಬಿಡುವವರ ಕಾಟ ಹೆಚ್ಚಾಗಿದೆ.
ಇದಕ್ಕಾಗಿ ಆಯಾ ಗ್ರಾಮ ಪಂಚಾಯತ್ ಆ ಭಾಗದ ಗೋಮಾಳವನ್ನು ಗುರುತಿಸಿ ಗೋಪಾಲಕರ ಅನುಕೂಲಕ್ಕೆ ಅನುವು ಮಾಡಿ ಕೊಡಬೇಕಾಗಿದೆ. ಕೆಲವು ಕಡೆ ಲಭ್ಯವಿರುವ 50 ಎಕರೆಯಷ್ಟು ಗೋಮಾಳ ಯಾರಿಗೂ ಉಪಕಾರಕ್ಕೆ ಇಲ್ಲದಂತಾಗಿದೆ. ರಸ್ತೆ ಬದಿ ಇರುವ ಗೋವುಗಳನ್ನು ಇಂತಹ ಗೋಮಳಗಳಲ್ಲಿ ಬಿಡಬಹುದಾಗಿದೆ. ಇದಕ್ಕಾಗಿ ಗೋಮಳಗಳ ರಕ್ಷಣೆ ಹಾಗೂ ರಸ್ತೆ ಬದಿ ಹೋರಿಗಳನ್ನು ಬಿಡುವವರ ಸಂಖ್ಯೆಯೂ ಕಡಿಮೆ ಆಗಬೇಕಿದೆ.