ಸುಳ್ಯ-ಕೊಡಿಯಾಲಬೈಲ್-ದುಗ್ಗಲಡ್ಕ ರಸ್ತೆ ಅಭಿವೃದ್ಧಿಗಾಗಿ ಏಕೆ ಹೋರಾಟ ? ಮಾ.14ರಂದು ಸುಳ್ಯದಲ್ಲಿ ಮೌನ ಧರಣಿ | ಪ್ರತಿಭಟನಾ ಸೂಚಕವಾಗಿ ನಿಧಿ ಸಂಗ್ರಹ |

March 13, 2023
2:02 PM

ಗ್ರಾಮೀಣ ಜನರು ತಮ್ಮ ಊರಿನ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡಬೇಕಾದ ಸಂದರ್ಭ ಬಂದಿದೆ. ದೇಶವು ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿರುವ ವೇಳೆ ಗ್ರಾಮೀಣ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿರುವುದು  ಹಾಗೂ ನಡೆಸಬೇಕಾಗಿ ಬಂದಿರುವುದು  ಇನ್ನಷ್ಟು ಅಭಿವೃದ್ಧಿಯ ಸೂಚಕವಾಗಿದೆ. ಇದೀಗ ಇದೇ ಮಾದರಿಯ ಹೋರಾಟವೊಂದು ಸುಳ್ಯದಲ್ಲಿ  ರೂಪುಗೊಂಡಿದೆ. ಸುಳ್ಯ – ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ಅಭಿವೃದ್ಧಿಗಾಗಿ ಕಳೆದ ಕೆಲವು ಸಮಯಗಳಿಂದ ಆರಂಭಗೊಂಡ ಹೋರಾಟ ಇದೀಗ ತೀವ್ರಗೊಂಡಿದೆ.

Advertisement
Advertisement

ಮಾ.14 ರಂದು ಸುಳ್ಯ ನಗರ ಪಂಚಾಯತ್ ಎದುರಿನಲ್ಲಿ ನಿಧಿ ಸಂಗ್ರಹ ಅಭಿಯಾನ ನಡೆಸುವ ಮೂಲಕ ಪ್ರತಿಭಟನೆ ನಡೆಸಲು ರಸ್ತೆ ಅಭಿವೃದ್ಧಿಗೆ ಹೋರಾಟ ನಡೆಸುತ್ತಿರುವ ಆ ಭಾಗದ ನಾಗರಿಕರು ನಿರ್ಧರಿಸಿದ್ದಾರೆ. ಆರಂಭದಲ್ಲಿ ಭಿಕ್ಷಾಟನೆ ಮೂಲಕ ಹೋರಾಟ ನಡೆಸಿ ಸಾಂಕೇತಿಕವಾಗಿ ರಸ್ತೆ ದುರಸ್ತಿ ನಡೆಸಲು ನಿರ್ಧರಿಸಿದ್ದರು, ಇದೀಗ ನಿಧಿ ಸಂಗ್ರಹದ ಮೂಲಕ ಹೋರಾಟಕ್ಕೆ ಚಾಲನೆ ನೀಡಿ ಆ ಬಳಿಕವೂ ಅಭಿವೃದ್ಧಿಯ ಯಾವ ಹೆಜ್ಜೆಗಳೂ ಕಾಣಿಸದೇ ಇದ್ದರೆ ಸಾಂಕೇತಿಕವಾಗಿ ರಸ್ತೆ ದುರಸ್ತಿ ಮಾಡುವ ಮೂಲಕ ಇನ್ನೊಂದು ಹೋರಾಟ ನಡೆಸಲು ಸಜ್ಜಾಗಿದ್ದಾರೆ ಇಲ್ಲಿನ ಫಲಾನುಭವಿಗಳು.

Advertisement

ರಸ್ತೆ ದುರಸ್ತಿ ಬೇಡಿಕೆಗೆ ಸಂಬಂಧಿಸಿ ಕಮಿಲಡ್ಕದಲ್ಲಿ ನಡೆದ ಸಭೆಯಲ್ಲಿ ಹೋರಾಟ ತೀವ್ರಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಸುಳ್ಯ -ಕೊಡಿಯಾಲಬೈಲ್ -ದುಗ್ಗಲಡ್ಕ ಏಳು ಕಿಲೋಮೀಟರ್ ಉದ್ದವಿರುವ ಮತ್ತು ಬೆಳೆಯುತ್ತಿರುವ ಸುಳ್ಯಕ್ಕೆ ಅತ್ಯಂತ ಅವಶ್ಯಕವಾದ ರಸ್ತೆ. ಈ ರಸ್ತೆಯ ಅಭಿವೃದ್ಧಿಗೆ 25 ವರ್ಷಗಳಿಂದ ಬೇಡಿಕೆ ಇದೆ. ಆದರೆ ಜನಪ್ರತಿನಿಧಿಗಳು, ಸರಕಾರ ನೀಡಿದ ಭರವಸೆಗಳು ಸುಳ್ಳಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಪ್ರಮುಖರು ಹೇಳಿದ್ದಾರೆ. ಕಳೆದ ಬಾರಿ ಭರವಸೆ ನೀಡಿ ಫೆಬ್ರವರಿ ಅಂತ್ಯದೊಳಗೆ ರಸ್ತೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದರು , ಆದರೆ ಯಾವುದೇ ಪ್ರಗತಿ ಆಗಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದರು.ಕೇವಲ ಅನುದಾನದ ಭರವಸೆ ನೀಡುತ್ತಾರೆ, ಆದರೆ ಕಾಮಗಾರಿ ನಡೆಯುವುದಿಲ್ಲ, ಕಳೆದ ಹಲವು ಸಮಯಗಳಿಂದಲೂ ಹಾಗೂ ಈಗಲೂ ಅದೇ ಮಾದರಿ ಆಗುತ್ತಿದೆ ಎಂದು ಸಭೆಯಲ್ಲಿ ಜನರು ಹೇಳಿದರು.

Advertisement

ಸಭೆಯಲ್ಲಿ ಬಾಲಕೃಷ್ಣ ನಾಯರ್ ನೀರಬಿದಿರೆ, ಸುರೇಶ್ಚಂದ್ರ ಕಮಿಲ, ಕುಶ ನೀರಬಿದಿರೆ, ಡಾ. ಗಣೇಶ್ ಶರ್ಮ. ಶಂಭಯ್ಯ ಪಾರೆ, ಸೀತಾನಂದ ಬೇರ್ಪಡ್ಕ,ಗಿರೀಶ ಪಾಲಡ್ಕ, ಮನೋಜ್ ಪಾನತ್ತಿಲ, ಲೋಹಿತ್ ಮಾಣಿಬೆಟ್ಟು, ಇಬ್ರಾಹಿಂ ನೀರಬಿದಿರೆ, ಮೋಹನ್ ಬೇರ್ಪಡ್ಕ, ರವಿಚಂದ್ರ ಈಶ್ವರಡ್ಕ, ಡಾ.ಅಶೋಕ್ ಭಟ್, ಶಿವರಾಮ ಎಂ.ಪಿ. ಮತ್ತಿತರರು ಇದ್ದರು.

ರಸ್ತೆ ಅಭಿವೃದ್ಧಿಗೆ ಅನುದಾನ
ಜಟ್ಟಿಪಳ್ಳ ಕೊಡಿಯಾಲಬೈಲ್ ದುಗಲಡ್ಕ ರಸ್ತೆಯ ಅಭಿವೃದ್ಧಿಗೆ ಈಗಾಗಲೇ 50 ಲಕ್ಷ ರೂಗಳ ಕಾಮಗಾರಿ ನಡೆದಿದ್ದು ವಿವಿಧ ಮೂಲಗಳಿಂದ ಇನ್ನೂ 65 ಲಕ್ಷ ರೂಗಳ ಕಾಮಗಾರಿಗಳಿಗೆ ಮಂಜೂರಾಗಿದ್ದು ಶೀಘ್ರದಲ್ಲಿಯೇ ಈ ಕಾಮಗಾರಿಯು ಆರಂಭಗೊಳ್ಳಲಿದೆ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ. ಮಳೆ ಹಾನಿ ದುರಸ್ತಿ ಯೋಜನೆಯಲ್ಲಿ 25 ಲಕ್ಷ ರೂ, ಲೋಕೋಪಯೋಗಿ ಇಲಾಖೆಯಿಂದ 25 ಲಕ್ಷ ರೂ ಮಂಜುರಾಗಿದ್ದು ಈ ಎರಡು ಕಾಮಗಾರಿಗಳು ಶೀಘ್ರವೇ ಆರಂಭಗೊಳ್ಳಲಿದೆ. ಇದಲ್ಲದೆ ಸರಕಾರಿ ಕಾಲೇಜಿನಿಂದ ಮುಖ್ಯರಸ್ತೆಯ ತನಕ 15 ಲಕ್ಷ ರೂಗಳ ಅಂದಾಜು ವೆಚ್ಚದಲ್ಲಿ ಹಾನಿಯಾದ ರಸ್ತೆಗೆ ನಗರ ಪಂಚಾಯತಿ ವತಿಯಿಂದ ಮರುಡಾಮರೀಕರಣ ನಡೆಸಲಾಗುವುದು. ನಾಯಕರು ಕೊಟ್ಟ ಭರವಸೆಯಂತೆ ಈ ರಸ್ತೆಗೆ ಈ ಮೊದಲು 50 ಲಕ್ಷ ರು ಹಾಗೂ ಇದೀಗ 65 ಲಕ್ಷ ರೂ, ಒಟ್ಟು 1.15 ಕೋಟಿ ರೂಗಳ ಕಾಮಗಾರಿಯು ಈ ವರ್ಷ ನಡೆಯುತ್ತಿದೆ. ಸಂಪೂರ್ಣ ಎಂಟು ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿ ಮಾಡುವವರೇ ನಾವು ಬದ್ಧರಾಗಿದ್ದು ವಿವಿಧ ರೀತಿಯಲ್ಲಿ ಅನುದಾನಕ್ಕೆ ಪ್ರಯತ್ನಿಸಲಾಗುತ್ತಿದೆ. ಹಾಗಾಗಿ ಈ ಭಾಗದ ಜನತೆ ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದಲ್ಲಿ ಏರಿದ ತಾಪಮಾನ : ಅತ್ತ ತಾಂಜಾನಿಯಾದಲ್ಲಿ ಭಾರೀ ಮಳೆ, ಪ್ರವಾಹ : 155 ಮಂದಿ ಸಾವು
April 28, 2024
4:55 PM
by: The Rural Mirror ಸುದ್ದಿಜಾಲ
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು : ದೂರ ಸಾಗಿದ ಮಳೆ : ಬಿಸಿ ಗಾಳಿಯ ಮುನ್ಸೂಚನೆ
April 28, 2024
4:40 PM
by: The Rural Mirror ಸುದ್ದಿಜಾಲ
ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |
April 28, 2024
4:01 PM
by: ಮಹೇಶ್ ಪುಚ್ಚಪ್ಪಾಡಿ
ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |
April 28, 2024
2:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror