ರಬ್ಬರ್ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಅ.26 ರಂದು ತಿರುವನಂತಪುರಂನಲ್ಲಿರುವ ರಬ್ಬರ್ ಸಚಿವಾಲಯದ ಮುಂದೆ ಪ್ರತಿಭಟನಾ ಸಭೆ ರಬ್ಬರ್ ಉತ್ಪಾದಕರ ಸಂಘಗಳ ಒಕ್ಕೂಟವು ಆಯೋಜಿಸಿದೆ.
ರಬ್ಬರ್ ಧಾರಣೆ ಕುಸಿತ ಸೇರಿದಂರೆ ರಬ್ಬರ್ ಆಮದು ತಡೆ ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ರಬ್ಬರ್ ಉತ್ಪಾದಕರ ಸಂಘಗಳ ರಾಷ್ಟ್ರೀಯ ಒಕ್ಕೂಟವು ಪ್ರತಿಭಟನಾ ಸಭೆ ಹಾಗೂ ಮೆರವಣಿಗೆ ನಡೆಸಲು ನಿರ್ಧರಿಸಿವೆ. ರಬ್ಬರ್ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಬ್ಬರ್ ಮಂಡಳಿ ತಕ್ಷಣವೇ ಸ್ಪಂದಿಸಬೇಕು ಎಂದು ಒತ್ತಾಯಿಸಿವೆ.
ಪ್ರತಿಭಟನಾ ಸಭೆಯನ್ನು ಕೇರಳ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶ ಕಾರ್ಯಕ್ರಮ ಉದ್ಘಾಟಿಸುವರು. ಸರ್ಕಾರದ ಮುಖ್ಯ ಸಚೇತಕ ಎನ್.ಜಯರಾಜ್, ಕೇರಳ ಕಾಂಗ್ರೆಸ್ ಮುಖಂಡ ಪಿ.ಸಿ. ಥಾಮಸ್, ಮತ್ತು ರಬ್ಬರ್ ಮಂಡಳಿಯ ಮಾಜಿ ಅಧ್ಯಕ್ಷ ಪಿ.ಸಿ. ಸಿರಿಯಾಕ್ ಮೊದಲಾದವರು ಭಾಗವಹಿಸುವರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel