“ಅಡಿಕೆ ಆಮದು(Arecanut import) ನಿಲ್ಲಿಸದಿದ್ದರೆ ಪ್ರತಿಭಟನೆ(Protest) ಅನಿವಾರ್ಯ” ಎಂಬ ಹೇಳಿಕೆ ಮತ್ತು ಮಾಡಲಿರುವ ಪ್ರತಿಭಟನೆ ಸ್ವಾಗತಾರ್ಹವಾದುದು. ಇದಕ್ಕೆ ಅಡಿಕೆ ಬೆಳೆಯುವ ಜಿಲ್ಲೆಗಳ(District) ಎಲ್ಲ ರಾಜಕೀಯ ಪಕ್ಷಗಳನ್ನೂ(Political Parties) ಒಂದು ಗೂಡಿಸಿಕೊಂಡರೆ ಒಳ್ಳೆಯದು.
ಕಳೆದ ವರ್ಷ ಕೇಂದ್ರ ಸರಕಾರ(Central Govt) ಕ್ಯಾಂಪ್ಕೋ(Campco) ನೀಡಿದ ಒತ್ತಾಯದ ಮೇರೆಗೆ ಆಮದು ನಿಲ್ಲಿಸುವ ಬದಲು, ಆಮದು ದರವನ್ನು ₹.351/ಕೆಜಿ ಗೆ (ಜೊತೆಗೆ ಸಹಜವಾಗಿ ಅನ್ವಯವಾಗುವ ಸುಂಕವನ್ನು) ಏರಿಸಿ, ಸ್ಥಳೀಯ ಅಡಿಕೆ ದರ ಏರುವಂತೆ ಮಾಡಿತ್ತು. ಈಗ ಈ ದರ ಇಳಿ ಇಳಿಕೆ ಆಗಿದೆಯಾ? ಸುಂಕ ಇಳಿಸಲಾಗಿದೆಯಾ? ಅವುಗಳು ಅಷ್ಟೇ ಇದ್ದರೂ, ಸ್ಥಳೀಯ ಅಡಿಕೆ ದರ ಇಳಿಕೆ ಆಗುತ್ತಿದೆಯಾ? ಅಡಿಕೆ ಆಮದು ಹೆಚ್ಚಿಸಿಯೇ ಸ್ಥಳೀಯ ಅಡಿಕೆ ದರ ಇಳಿಸಲಾಗುತ್ತಿದೆಯಾ? ಆಮದು ನಿಲ್ಲಿಸಿದರೆ, ಸ್ಥಳೀಯ ಅಡಿಕೆ ದರ ಕಮ್ಮಿ ಆಗುತ್ತದೆಯಾ? ಕಳ್ಳ ಸಾಗಾಣಿಕೆಯಲ್ಲಿ ಹೊರಗಡೆಯಿಂದ ಅಡಿಕೆ (ಕಳ್ಳ ಆಮದು!!?) ಬರುತ್ತಿದೆಯಾ?
ಕಳೆದ ವರ್ಷ ಏರಿದ್ದ ಅಡಿಕೆ ಆಮದು ದರ ಮತ್ತು ಸುಂಕ ಮತ್ತೆ ಇಳಿಯದೇ ಇದ್ದರೂ, ಸ್ಥಳೀಯ ಅಡಿಕೆ ದರ ಇಳಿಯುತ್ತಿದೆಯಾ? ಕಳೆದ ವರ್ಷ ಆಗಿದ್ದ ಅಡಿಕೆ ಆಮದು ಮತ್ತು ಈ ಸಾಲಿನಲ್ಲಿ ಆಗಿರುವ ಅಡಿಕೆ ಆಮದುಗಳ ಅಂಕಿಸಂಖ್ಯೆ ತರಿಸಿ, ಅಡಿಕೆ ಬೆಳೆಗಾರರ ಗಮನಕ್ಕೆ ಕೊಡಬಹುದಾ? ಆಮದು ಸುಂಕ ಕೆಂಪಡಿಕೆ ದರ ನಿಧಾನವಾಗಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ – ಇದಕ್ಕೆ ಏನು ಕಾರಣ? ಅಡಿಕೆ ಆಮದು ನಿಲ್ಲಿಸುವ ಪ್ರತಿಭಟನೆಗೆ ಈ ಎಲ್ಲ ವಿಚಾರಗಳನ್ನು ಚರ್ಚಿಸುವುದೂ ಒಳ್ಳೆಯದು.
ಅಡಿಕೆ ದರ ಇಳಿಯುತ್ತಿರುವುದಕ್ಕೆ ಸ್ಥಳೀಯ ಅಡಿಕೆ ಬೆಳೆ ವಿಸ್ತೀರ್ಣಗೊಳ್ಳುತ್ತಿರುವುದೂ ಸಾಧ್ಯತೆ ಇರಬಹುದಾ? ಹೌದಾದಲ್ಲಿ ಅಡಿಕೆ ಬೆಳೆಯುವ ಪ್ರದೇಶದ ವಿಸ್ತೀರ್ಣ ತಡೆಗಟ್ಟಲು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಯಾರು ಪ್ರಯತ್ನ ಪಡಬೇಕು? ಎಲ್ಲ ಪಕ್ಷದ ಜನ ಪ್ರತಿನಿಧಿಗಳು ಈ ಬಗ್ಗೆ ಯೋಚನೆ ಮಾಡಬೇಕು. ಅದೂ ಒಂದು ಪ್ರತಿಭಟನೆಯ ಭಾಗವಾಗಲಿ. ಈಗಾಗಲೆ ವಿಸ್ತೀರ್ಣಗೊಂಡ ಅಡಿಕೆ ಬೆಳೆಯುವ ಪ್ರದೇಶವನ್ನು ಸ್ಥಗಿತಗೊಳಿಸುವುದಕ್ಕೆ (ಅಡಿಕೆ ಮರ ಕಡಿದು!!) ಸಾಧ್ಯವಿಲ್ಲ. ಆದರೆ, ಇನ್ನೂ ವಿಸ್ತಾರಗೊಳ್ಳುವಿಕೆಯನ್ನು ನಿಯಂತ್ರಣ ಮಾಡಲು ಸಂಬಂಧಿಸಿದ ಸರಕಾರದ ವಿರುದ್ದದ ಪ್ರತಿಭಟನೆಯಲ್ಲಿ ಅಳವಡಿಸಿಕೊಳ್ಳಬಹುದಾ?
ಇನ್ನು “ಹವಾಮಾನ ಆಧಾರಿತ ಬೆಳೆ ವಿಮೆ ಕೇಂದ್ರದ ಯೋಜನೆಯಾದ್ರೆ ಪಕ್ಕದ ಕೇರಳ, ಮಹಾರಾಷ್ಟçದಲ್ಲಿ ಯಾಕೆ ಸಿಕ್ತಿಲ್ಲ?” ಎಂಬುದು ಬಹುಶಃ ತಪ್ಪು ಮಾಹಿತಿ ಆಗಿದೆ ಅನಿಸುತ್ತೆ. ಅಥವಾ ಭಾಷಣಗಾರರಿಗೆ ಸ್ಕ್ರಿಪ್ಟ್ ಬರೆದುಕೊಟ್ಟ ಅಧಿಕಾರಿಗಳೂ ತಪ್ಪು ಬರೆದುಕೊಟ್ಟ ಸಾಧ್ಯತೆ ಇರಬಹುದಾ? ಮುಂದುವರೆದು:
ಕೇರಳದಲ್ಲೂ ಮಹಾರಾಷ್ಟ್ರದಲ್ಲೂ ಕೂಡ ಹವಾಮಾನ ಆಧಾರಿತ ಬೆಳೆ ವಿಮೆ (Weather-Based Crop Insurance Scheme WBCIS) ಜಾರಿಯಲ್ಲಿವೆ ಎಂದು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸ್ಪಷ್ಟವಾದ ಮಾಹಿತಿಗಳಿವೆ.
ಮತ್ತೆ ಹವಾಮಾನ ಆಧಾರಿತ ಬೆಳೆ ವಿಮೆ ಕುರಿತು ಕೆಲವರು ಹೇಳಿರುವಂತೆ ಸಂಪೂರ್ಣ ಕೇಂದ್ರ ಸರಕಾರದ ವಿಮೆಯೊಂದಿಗೆ ಇನ್ಷ್ಯೂರೆನ್ಸ್ ಇರುವುದಲ್ಲ. ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ರೈತರ ಪ್ರೀಮಿಯಮ್ ಕಟ್ಟುವಿಕೆಯೊಂದಿಗೆ ಇನ್ಷ್ಯೂರೆನ್ಸ್ ವ್ಯವಹಾರ ನೆಡೆಯುತ್ತಿದೆ. ಸರಿಯಾಗಿಯೇ ಹೇಳಿದ್ದಾರೆ. ಈಗ ಕ್ಲೈಮ್ ಬಂದಿರುವ 2022-23ರ ಪರಿಹಾರದ ಇನ್ಷ್ಯೂರೆನ್ಸ್‌ನಲ್ಲಿ, ಒಟ್ಟು ರಿಸ್ಕಿನ ಮೊತ್ತದ 51% ನ್ನು ಪ್ರೀಮಿಯಮ್ ಆಗಿ 2022 ಆಗಷ್ಟ್‌ನಲ್ಲಿ ಕಟ್ಟಲ್ಪಟ್ಟಿತ್ತು!!. ಈ ಪ್ರೀಮಿಯಮ್‌ನ್ನು ಆಗ ಅಂದರೆ ಆಗಷ್ಟ್ 2022 ರಲ್ಲಿದ್ದ ರಾಜ್ಯ ಸರಕಾರ 33.5%, ಅದೇ ಸಮಯದಲ್ಲಿದ್ದ ಕೇಂದ್ರ ಸರಕಾರ 12.5% ಮತ್ತು ಅಡಿಕೆ ಬೆಳೆಗಾರರು 5% ಕಟ್ಟಿದ್ದರು. (ಜಿಲ್ಲಾವಾರು ಈ ಪ್ರಮಾಣದಲ್ಲಿ ಸಣ್ಣ ವ್ಯತ್ಯಾಸ ಇದೆ)
ಅದೇ ರೀತಿ, ಈ ಸಾಲಿನಲ್ಲಿ, ಅಂದರೆ 2023-24ರ ಇನ್ಷ್ಯೂರೆನ್ಸ್ ಪ್ರೀಮಿಯಮ್‌ನ್ನು ಈಗಿನ ರಾಜ್ಯ ಸರಕಾರ, ಈಗಿನ ಕೇಂದ್ರ ಸರಕಾರ ಮತ್ತು ರೈತರು 2023 ಕಟ್ಟಿದ್ದು, ಪ್ರೀಮಿಯಮ್ ಪರ್ಸಂಟೇಜ್ ಮತ್ತು ಟರ್ಮ್ ಶೀಟ್‌ಗಳೂ ಬದಲಾಗಿರುತ್ತವೆ.
ಅಡಿಕೆ ಬೆಳೆಯ ಬೆಲೆ, ಅಡಿಕೆ ಆಮದು, ಅಡಿಕೆ ರೋಗಗಳು, ಅಡಿಕೆ ಬೆಳೆ ವಿಸ್ತರಣೆ, ಅಡಿಕೆ ಬೆಳೆಯ ಇನ್ಷ್ಯೂರೆನ್ಸ್-ಪರಿಹಾರ, ಅಡಿಕೆ ಕಳ್ಳ ಸಾಗಾಣಿಕೆ… ಇತ್ಯಾದಿ ಎಲ್ಲ ಅಡಿಕೆ ಸಂಬಂಧಿತ ಸಮಸ್ಯೆಗಳ ವಿರುದ್ದದ ಹೋರಾಟ-ಪ್ರತಿಭಟನೆಗಳು ಕೇವಲ ಎಲೆಕ್ಷನ್ ಸಮಯದ ರಾಜಕೀಯ ಹೇಳಿಕೆಗಳೋ, ಗಿಮಿಕ್ ತಂತ್ರಗಾರಿಕೆಗಳೋ ಆಗಿ ಉಳಿಯದೆ, ರೈತರಿಗೆ ನಿಜವಾಗಿಯೂ ಅನುಕೂಲವಾಗುವಂತಹ ದಿಟ್ಟ ಹೋರಾಟ-ಪ್ರತಿಭಟನೆಗಳಾಗಲಿ. ಅಂತಹ ಹೋರಾಟ-ಪ್ರತಿಭಟನೆಗಳಿಗೆ ರೈತರು ಯಾವುದೇ ಪಕ್ಷದ ಶಾಲುಗಳಿಲ್ಲದೆ ಭಾಗವಹಿಸುವಂತಾಗಲಿ. ಧನಾತ್ಮಕವಾದ ಫ್ರತಿಫಲ ರೈತರಿಗೆ ಸಿಗಲಿ.
The statement “Protest is inevitable if Arecanut import is not stopped” and the protest to be made is welcome. For this, it is good if all the political parties of the nut growing districts are brought together.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…