Opinion

ದೀರ್ಘಕಾಲಿಕ ಚರ್ಮಕಾಯಿಲೆ ಸೋರಿಯಾಸಿಸ್ ನಿಂದ ಬಳಲುತ್ತಿದ್ದೀರಾ..? | ಈ ಕಾಯಿಲೆಗಿದೆ ಆಯುರ್ವೇದದಲ್ಲಿ ಚಿಕಿತ್ಸೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸೋರಿಯಾಸಿಸ್ #Psoriasis ದೀರ್ಘಕಾಲಿಕವಾಗಿ ಕಾಡುವ ಚರ್ಮ ರೋಗಗಳಲ್ಲಿ ಒಂದು ಕಾಯಿಲೆಯಾಗಿದೆ. ಈ ರೋಗವು ಚರ್ಮವನ್ನು ವಿರೂಪಗೊಳಿಸಿ, ರೋಗಿ ಮಾನಸಿಕ ಖಿನ್ನತೆಗೆ ಒಳಗಾಗಿಸುವುದು. ಸೋರಿಯಾಸಿಸ್ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಕಾರಣ ತಿಳಿದು ಬಂದಿಲ್ಲ. ಆದರೂ ಹಲವಾರು ಕಾರಣಗಳಿಂದ ರೋಗದ ಲಕ್ಷಣವು ಉಲ್ಬಣಿಸುಸುತ್ತದೆ.

ಸೋರಿಯಾಸಿಸ್ ರೋಗದಲ್ಲಿ ಹಲವು ಪ್ರಕಾರಗಳಿದ್ದು, ದೇಹದ ಯಾವುದೇ ಭಾಗದಲ್ಲಿ ಎಲ್ಲಾ ವಯಸ್ಸಿನಲ್ಲೂ ಕಾಣಿಸಿಕೊಳ್ಳಬಹುದು.  ಸಾಮಾನ್ಯವಾಗಿ ತಲೆಬುರುಡೆಯ ಮೇಲೆ ಬೆನ್ನು ಹೊಟ್ಟೆಯ ಮೇಲೆ ಹಾಗೂ ಮೊಣಕೈ ಮೊಣಕಾಲುಗಳಲ್ಲಿ ಈ ಚರ್ಮ ವ್ಯಾಧಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.  ಈ ರೋಗದಲ್ಲಿ ಚರ್ಮಕಣಗಳ ಉತ್ಪತ್ತಿಯ ವೇಗವು ಹೆಚ್ಚಾಗಿ ಚರ್ಮವು ಕೆಂಪಾಗಿ ಒಣಗಿದಂತಾಗಿ ಅತಿಯಾದ ತುರಿಕೆಯೊಂದಿಗೆ ಚರ್ಮದ ಮೇಲ್ಭಾಗದಲ್ಲಿ ಹೊಟ್ಟಿನಂತ ಪದರ ಉಂಟಾಗುತ್ತದೆ. ಸಣ್ಣದೊಂದು ಗುಳ್ಳೆ ಅಥವಾ ಗಾಯದ ಹಾಗೆ ಪ್ರಾರಂಭವಾಗಿ ಕ್ರಮೇಣ ತನ್ನ ಗಾತ್ರವನ್ನು ವಿಸ್ತಾರ ಗೊಳಿಸುತ್ತಾ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಕೆಲವೊಮ್ಮೆ ಅತಿಯಾಗಿ ಕೆರೆದುಕೊಂಡಾಗ ರಕ್ತ ಬರುವ ಸಾಧ್ಯತೆ ಇದೆ. ಚಿಕಿತ್ಸೆ ಪಡೆಯದೇ ಇದ್ದಲ್ಲಿ ಬಹಳ ಸಮಯದ ನಂತರ ಉಗುರುಗಳನ್ನು ಹಾಗೂ ಮೂಳೆಯ ಸಂಧಿಗಳನ್ನು ಹಾನಿ ಮಾಡಿ ಸೋರಿಯಾಟಿಕ್ ಆರ್ಥ್ರೈಟಿಸ್ ಸಂಭವಿಸಬಹುದು.ಕೆಲವು ಔಷಧಿಗಳ ಸೇವನೆಯಿಂದ ಹಾಗೂ ಶ್ವಾಸಕೋಶದಲ್ಲಿ ಸೊಂಕಿನಿಂದ ಸೋರಿಯಾಸಿಸ್ ರೋಗ ಉಲ್ಬಣಗೊಳ್ಳುವುದು.

ಅನುವಂಶಿಕ ಅಥವಾ ಜೆನೆಟಿಕ್ಅಂಶ ಸಾಧ್ಯತೆ ಈ ರೋಗದಲ್ಲಿ ಕಡಿಮೆಯಾದರೂ ತಂದೆ ಅಥವಾ ಅಥವಾ ತಾಯಿ ಒಬ್ಬರಲ್ಲಿ ಸೋರಿಯಾಸಿಸ್ ರೋಗಿಯಾಗಿದ್ದರೆ ಶೇಕಡ 15% ಮತ್ತು ಇಬ್ಬರು ಸೋರಿಯಾಸಿಸ್ ಸ್ಪೀಡಿತರಾಗಿದ್ದಲ್ಲಿ ಶೇಕಡ 50% ರೋಗವು ಮಕ್ಕಳಿಗೆ ಬರುವ ಸಾಧ್ಯತೆಗಳಿವೆ.

ಈ ರೋಗದಲ್ಲಿ ಆಹಾರ ಪದ್ಧತಿ ಹಾಗೂ ಸೇವಿಸುವ ಕ್ರಮವು ಮಹತ್ವ ಪಾತ್ರವನ್ನು ವಹಿಸುತ್ತದೆ. ಅತಿಯಾದ ಮಾಂಸಾಹಾರ ಸೇವನೆ,ಜಿಡ್ಡಿನ ಪದಾರ್ಥ,ನಂಜಿನ ಪದಾರ್ಥಗಳಾದ ಬದನೆಕಾಯಿ, ಮೂಲಂಗಿ, ಮೀನು, ಮೊಟ್ಟೆ, ಮಾಂಸ, ಹುರುಳಿಕಾಳುಗಳು, ಕಫ ವೃದ್ಧಿಸುವ ಪದಾರ್ಥಗಳಾದ ಮೊಸರು ಉದ್ದು ವಿರುದ್ಧ ಆಹಾರ. ಉದಾಹರಣೆಗೆ ಮೊಸರಿನೊಟ್ಟಿಗೆ ಅಥವಾ ಹಾಲಿನೊಟ್ಟಿಗೆ ಮೀನಿನ ಸೇವನೆ, ಅತಿಯಾದ ಬಿಸಿ ಅನ್ನದ ಜೊತೆಗೆ ಐಸ್ ಕ್ರೀಮ್ ಸೇವನೆ. ಮಾನಸಿಕ ಒತ್ತಡ ,ಧೂಮಪಾನ ಮದ್ಯಪಾನ, ಈ ಎಲ್ಲಾ ಕಾರಣಗಳಿಂದ ದೇಹದಲ್ಲಿ ಕಫ ಮತ್ತು ವಾತ ದೋಷದ ವೃದ್ಧಿಯಾಗಿ ದೇಹದಲ್ಲಿ ಅಸಮತೋಲನ ಉಂಟಾಗಿ ಸರ್ವಧಾತುಗಳಲ್ಲಿ ಕಲ್ಮಶಗಳು ಶೇಖರಣೆಗೊಂಡು ಸೋರಿಯಾಸಿಸ್ ರೋಗವನ್ನು ಉತ್ಪತ್ತಿ ಮಾಡುತ್ತದೆ.

ಚಿಕಿತ್ಸೆ: ದೀರ್ಘಕಾಲಿಕವಾಗಿ ಮತ್ತೆ ಮತ್ತೆ ಕಾಡುವ ಈ ರೋಗಕ್ಕೆ ದೀರ್ಘಕಾಲ ಚಿಕಿತ್ಸೆ ಅಗತ್ಯ.ರೋಗದ ಪ್ರಾರಂಭದ ಅವಸ್ಥೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ. ಆಯುರ್ವೇದದಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲದೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಿದ್ದು ವಿಶೇಷವಾಗಿ ದೇಹವನ್ನು ಶುದ್ಧೀಕರಿಸುವ ಪಂಚಕರ್ಮ ಚಿಕಿತ್ಸೆಯನ್ನು ಮಾಡುವುದರಿಂದ ಈ ರೋಗವನ್ನು ನಿಯಂತ್ರಿಸಬಹುದು. ಇದರಿಂದ ದೇಹದಲ್ಲಿರುವ ಕಲ್ಮಶಗಳನ್ನು ಹೊರ ಹಾಕುವುದರ ಮೂಲಕ ರೋಗದ ಪುನರುತ್ಪತ್ತಿಯನ್ನು ತಡೆಯಬಹುದು. ರೋಗದ ಸ್ಥಿತಿ ಹಾಗೂ ಲಕ್ಷಣಗಳಿಗೆ ಅನುಸಾರವಾಗಿ ಇತರ ಬಾಹ್ಯ ಚಿಕಿತ್ಸೆಗಳಾದ ತಕ್ರದಾರ, ಗಿಡಮೂಲಿಕೆಗಳ ಲೇಪನ, ಘ್ರತಪಾನ,( ಔಷಧಗಳಿಂದ ಸಂಸ್ಕಾರಿತ ತುಪ್ಪದ ಸೇವನೆ) ಕಷಾಯ ಪರಿಸೇಕ,ತೈಲಾoಭ್ಯಗ, ವಿರೇಚನ ಮೊದಲಾದ ಉತ್ತಮ ಚಿಕಿತ್ಸಾ ವಿಧಾನಗಳಿವೆ. ಪಥ್ಯಾಹಾರ ಸೇವನೆಯಿಂದ ರೋಗದ ಪುನರುತ್ಪತ್ತಿಯನ್ನು ತಡೆಗಟ್ಟಬಹುದು.

Advertisement

*ಸೋರಿಯಾಸಿಸ್ ನಲ್ಲಿ ಪಥ್ಯಾಹಾರ
*ಶುದ್ಧವಾದ ನೀರು ಎಳನೀರು ಮಜ್ಜಿಗೆ ಗಂಜಿ ಸೇವನೆ ಉತ್ತಮ
* ಸೌತೆಕಾಯಿ ಬೂದುಗುಂಬಳಕಾಯಿ ಹಾಗಲಕಾಯಿ ಪಡುವಲ ಕಾಯಿ ಸೋರೆಕಾಯಿ ಹೀರೆಕಾಯಿ ಒಂದೆಲಗ ಇವುಗಳನ್ನು ಉಪಯೋಗಿಸಬಹುದು
* ಹೆಸರು ಕಾಳು ಹೆಸರುಬೇಳೆ ಗೋಧಿ ಕೆಂಪು ಅಕ್ಕಿ ಹಳೆ ಅಕ್ಕಿ ಸೇವನೆ ಉತ್ತಮ
* ಅರಶಿನ ನೆಲ್ಲಿಕಾಯಿ ಕಲ್ಲಂಗಡಿ ಪಪ್ಪಾಯ ಹಣ್ಣುಗಳ ಸೇವನೆ
* ನಿತ್ಯ ತೈಲಾಭ್ಯಾಂಜನ ನಿತ್ಯ ಸ್ನಾನ ಸಮಯಕ್ಕೆ ಸರಿಯಾಗಿ ಹಿತಮಿತ ಆಹಾರ ಸೇವನೆ
* ಉತ್ತಮ ವ್ಯಾಯಾಮ ಯೋಗಾಸನ ಪ್ರಾಣಯಾಮ ಇವಳನ್ನು ದಿನನಿತ್ಯ ಅಳವಡಿಸುವುದರಿಂದ ಸೋರಿಯಾಸಿಸ್ ತಡೆಗಟ್ಟಬಹುದು
*ಸೋರಿಯಾಸಿಸ್ ನಲ್ಲಿ ಅಪಥ್ಯ * ಹುಳಿ, ಸಿಹಿ ಪದಾರ್ಥ,ಉಪ್ಪಿನ ಪದಾರ್ಥಗಳನು ಹೆಚ್ಚು ಸೇವಿಸಬಾರದು.ಬದನೆಕಾಯಿ ಮೂಲಂಗಿ ಬೆಂಡೆಕಾಯಿ ಅಣಬೆ ಮೀನು ಮೊಟ್ಟೆ ಮಾಂಸ ಉದ್ದು ಹುರುಳಿಕಾಳು ಪನ್ನೀರು ಮೊಸರು ಸೋರಿಯಾಸಿಸ್ ರೋಗಿಗಳು ಸೇವಿಸಬಾರದು
* ಹಗಲಿನಲ್ಲಿ ನಿದ್ರೆ ಮಾಡಬಾರದು
* ಸುಲಭ ಜೀರ್ಣವಲ್ಲದ ಆಹಾರವನ್ನು ಸೇವಿಸಬಾರದು ಹಾಗೂ ಆಹಾರ ಜೀರ್ಣವಾಗುವ ಮೊದಲೇ ಪುನಃ ಆಹಾರ ಸೇವನೆ ಮಾಡುವುದು. ಬಿಸಿಲಿನಲ್ಲಿ ಆಯಾಸಗೊಂಡ ತಕ್ಷಣ ತುಂಬಾ ತಣ್ಣನೆಯ ನೀರಿನ ಸೇವನೆ ತಂಪು ಪಾನೀಯಗಳ ಸೇವನೆ ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದಲ್ಲ
ಬಾಳೆಹಣ್ಣು ಮಾವಿನ ಹಣ್ಣು ಹಲಸಿನ ಹಣ್ಣು ಸೀತಾಫಲ ಕಿತ್ತಳೆ ಇವು ಸಹ ಸೋರಿಯಾಸಿಸ್ ರೋಗಿಗಳಿಗೆ ಅಪಥ್ಯ.
ಸೋರಿಯಾಸಿಸ್ ರೋಗವನ್ನು ತಡೆಗಟ್ಟಲು ಆರಂಭದಲ್ಲೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಉತ್ತಮ.

Info : Dr.Jyothi K, Ayurvedic, Mangaluru

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಾಜ್ಯದ ಕರಾವಳಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಉತ್ತರ ಒಳನಾಡಿನಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿತ್ತು. ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯವಾಗಿತ್ತು. ಕೋಲಾರ,…

18 hours ago

ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೂಚನೆ

ಗ್ರೇಟರ್ ಬೆಂಗಳೂರು  ವ್ಯಾಪ್ತಿಯ ಐದು ನಗರ ಪಾಲಿಕೆಗಳ ಅಧಿಕಾರಿಗಳೊಂದಿಗೆ ಮುಖ್ಯ ಆಯುಕ್ತ ಮಹೇಶ್ವರ್…

18 hours ago

ಮಳೆ ಹಾನಿ ಬೆಳೆನಷ್ಟ ಪರಿಹಾರ ಹೆಚ್ಚಿಸುವವಂತೆ ರೈತರ ನಿಯೋಗದಿಂದ ಮುಖ್ಯಮಂತ್ರಿಗಳಿಗೆ ಒತ್ತಾಯ

ಮಳೆ ಹಾನಿ ಬೆಳೆನಷ್ಟ ಪರಿಹಾರ ಹೆಚ್ಚಿಸುವ ಕುರಿತಂತೆ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತ…

18 hours ago

ಹವಾಮಾನ ವರದಿ | 18-09-2025 | ಮುಂಗಾರು ದುರ್ಬಲ – ಅಲ್ಲಲ್ಲಿ ಗುಡುಗು ಮಳೆ | ಸೆ.19 ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸೂಚನೆ

ಮುಂಗಾರು ದುರ್ಬಲಗೊಂಡಿದ್ದರಿಂದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಬಂಗಾಳಕೊಲ್ಲಿಯ ಕಡೆಯಿಂದ ಬೀಸುತ್ತಿರುವ…

1 day ago

ಅಡಿಕೆ ಕೊಳೆರೋಗ | ಇಲಾಖೆಗಳ ಮಾಹಿತಿ ತಲುಪಿದ ಕೃಷಿಕರ ಸಂಖ್ಯೆ ನೋಡಿದರೇ ಅಚ್ಚರಿ…!

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಹಯೋಗದಲ್ಲಿ ದ ರೂರಲ್‌ ಮಿರರ್.ಕಾಂ ನಡೆಸಿದ…

1 day ago

ಬಾಂಗ್ಲಾದೇಶದಲ್ಲಿ ತೀವ್ರಗೊಂಡ ಡೆಂಗ್ಯೂ ಜ್ವರ – 156 ಕ್ಕೂ ಹೆಚ್ಚು ಮಂದಿ ಡೆಂಗ್ಯೂ ಜ್ವರಕ್ಕೆ ಬಲಿ

ಬಾಂಗ್ಲಾದೇಶದಲ್ಲಿ  ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡಿದೆ. ದೇಶಾದ್ಯಂತ ಆಸ್ಪತ್ರೆಗಳಲ್ಲಿ ಡೆಂಗ್ಯೂ ಜ್ವರದ  ರೋಗಿಗಳ…

1 day ago