ಮನೆಯ ಅಂಗಳದಲ್ಲಿದ್ದ ಮರವೊಂದು ಆಕಸ್ಮಿಕವಾಗಿ ಬೇರು ಸಹಿತ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ತಲೆಗೆ ಗಾಯಗೊಂಡು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಪುದುವೆಟ್ಟು ಗ್ರಾಮದ ಸಾಮೆದಕಲಪು ವರಸಾರಿ ಮನೆ ನಿವಾಸಿ ಆದಂ ಸಾಹೇಬ್(61ವ) ಮೃತ ದುರ್ದೈವಿ.
ಮಧ್ಯಾಹ್ನ ಆದಂ ಸಾಹೇಬ್ ಮನೆಯ ಅಂಗಳದಲ್ಲಿ ನಿಂತುಕೊಂಡಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಂಗಳದ ಬದಿಯಲ್ಲಿದ್ದ ಮರ ಬೇರು ಸಮೇತ ಅವರ ಮೇಲೆ ಉರುಳಿ ಬಿದ್ದಿತ್ತೆನ್ನಲಾಗಿದೆ. ಮರ ಬಿದ್ದ ಪರಿಣಾಮ ಅವರ ತಲೆಗೆ ಗಂಭೀರ ಏಟು ತಗಲಿದ್ದು, ಕೂಡಲೇ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟರು. ಧರ್ಮಸ್ಥಳ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel