ರಾಯಚೂರು ರೈತನ ವಿಭಿನ್ನ ಅಭಿಮಾನ | ಭತ್ತದ ಬೆಳೆಯಲ್ಲೇ ಮೂಡಿಬಂದ ಪುನೀತ್ ರಾಜ್‌ಕುಮಾರ್

October 13, 2023
11:41 PM

ರಾಯಚೂರು ಜಿಲ್ಲೆಯ ರೈತರೊಬ್ಬರು ಪುನೀತ್ ರಾಜಕುಮಾರ್ ಅಭಿಮಾನವನ್ನು ವಿಭಿನ್ನ ರೀತಿಯಲ್ಲಿ ಮೆರೆದಿದ್ದಾರೆ. ತಮ್ಮ ಗದ್ದೆಯಲ್ಲಿ ಭತ್ತದ ಬೆಲೆಯಲ್ಲಿ ಅಪ್ಪು ಚಿತ್ರ ನಿರ್ಮಿಸುವ ಮೂಲಕ ಅಭಿಮಾನವನ್ನು ಎತ್ತಿ ತೋರಿಸಿದ್ದಾರೆ. ಈ ರೀತಿಯ ಚಿತ್ರ ಬಿಡಿಸುವ ಮೂಲಕ ಅಪ್ಪುವಿನ ಮೇಲಿನ ಪ್ರೀತಿ ಅಭಿಮಾನವನ್ನು ವಿಶೇಷ ರೀತಿಯಲ್ಲಿ ತೋರ್ಪಡಿಸಿದ್ದಾರೆ.

ಅಪ್ಪುವಿನ ಅಭಿಮಾನಿಗಳು ಅವರ ಮೇಲಿನ ಅಭಿಮಾನವನ್ನು ಯಾವಾಗಲೂ ವಿಭಿನ್ನ ರೀತಿಯಲ್ಲಿ ತೋರ್ಪಡಿಸುತ್ತಲೇ ಇರುತ್ತಾರೆ. ಆದರೆ ಈ ರೈತನ ಅಭಿಮಾನವು ವಿಭಿನ್ನ ರೀತಿಯಲ್ಲಿ ಜನರ ಗಮನ ಸೆಳೆದಿದೆ.

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಡೊಣ್ಣಿ ಕ್ಯಾಂಪ್ ನ ರೈತ ಸತ್ಯನಾರಾಯಣ ಎಂಬುವವರು ತಮ್ಮ ಭತ್ತದ ಬೆಳೆಯಲ್ಲೇ ಪುನೀತ್ ರಾಜ್​ಕುಮಾರ್ ಭಾವಚಿತ್ರ ಮೂಡಿಸುವ ಮೂಲಕ 2ನೇ ವರ್ಷ ಪುಣ್ಯಸ್ಮರಣೆಗೆ ವಿಭಿನ್ನವಾಗಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಅಪ್ಪುವಿನ ಭಾವಚಿತ್ರಕ್ಕೆ ತಕ್ಕಂತೆ ಭತ್ತ ಬೆಳೆದಿರುವ ವಿಡಿಯೋ ವೈರಲ್ ಆಗಿದೆ. ಸತ್ಯನಾರಾಯಣರಿಗೆ ಅಂಗವೈಕಲ್ಯತೆ ಇದ್ದು, ಇಂಥ ಕಾರ್ಯ ಮಾಡಿರುವುದಕ್ಕೆ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯವನ್ನು ಬರಗಾಲ ಆವರಿಸಿದೆ. ಪ್ರಸ್ತುತ ದಿನಗಳಲ್ಲಿ ವ್ಯವಸಾಯಕ್ಕೆ ಬೇಕಾಗುವಷ್ಟು ನೀರು ರೈತನಿಗೆ ದೊರಕುತ್ತಿಲ್ಲ. ಆದರೆ, ಸತ್ಯನಾರಾಯಣ ಟ್ಯಾಂಕರ್ ಅಥವಾ ಬೋರ್‌ವೆಲ್​ ಮೂಲಕ ಗದ್ದೆಗೆ ನೀರು ಹಾಯಿಸಲು ಅಂದಾಜು 3 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆಂತೆ. 90 ದಿನದಲ್ಲಿ ಬೆಳೆಯುವ ಭತ್ತದಲ್ಲಿ ಅಪ್ಪುವಿನ ಚಿತ್ರ ಸುಂದರವಾಗಿ ರೂಪುಗೊಂಡಿದೆ. ಕರ್ನಾಟಕ ರತ್ನ ಎನ್ನುವ ಪ್ರತಿ ಅಕ್ಷರವನ್ನು 40 ಅಡಿಯೊಳಗೆ ಬಿಡಿಸಿದ್ದಾರೆ.ಸತ್ಯನಾರಾಯಣ ಅವರು ಜಪಾನ್ ತಂತ್ರಜ್ಞಾನ ಪದ್ದತಿಯಲ್ಲಿ ವಿವಿಧ ತಳಿಯ ಭತ್ತ ಬೆಳೆಯುತ್ತಿದ್ದಾರೆ. ಕರ್ನಾಟಕ ಪಕ್ಕದ ತೆಲಂಗಾಣ, ದೂರದ ಗುಜರಾತ್ ರಾಜ್ಯಗಳಿಂದ ಕಾವೇರಿ, ಗೋಲ್ಡನ್ ರೋಸ್, ಕಾಲ ಭಟ್ಟಿ ಎಂಬ ಹೆಸರಿನ 100 ಕೆ.ಜಿ ಭತ್ತದ ಬೀಜದ ತಳಿಗಳನ್ನು ಇವರು ನೆಟ್ಟಿದ್ದಾರೆ. ಸಾವಯವ ಪದ್ಧತಿ ರೂಢಿಸಿಕೊಂಡಿದ್ದಾರೆ.

”ಚಿಕ್ಕಂದಿನಿಂದಲೂ ನಾನು ಪುನೀತ್​ ರಾಜ್​ಕುಮಾರ್​​ ಅವರ ಅಪ್ಪಟ ಅಭಿಮಾನಿ. ಅವರ ಮೇಲಿರುವ ಅಭಿಮಾನದಿಂದ ವಿಭಿನ್ನವಾಗಿ ನಮನ ಸಲ್ಲಿಸುವ ಆಸೆ ಮೂಡಿತ್ತು. ಆಗ ತಲೆಯಲ್ಲಿ ಹೊಳೆದಿದ್ದೇ ಈ ವಿಚಾರ. ನನ್ನ ಬಳಿ ಆರು ಎಕರೆ ಜಮೀನಿದ್ದು ಎರಡು ಎಕರೆ ಜಮೀನಿನಲ್ಲಿ ಭತ್ತ ಬೆಳೆದು ಪುನೀತ್​ ರಾಜ್​ಕುಮಾರ್ ಅವರ ಭಾವಚಿತ್ರವನ್ನು ಮೂಡಿಸುವ ಕೆಲಸ ಮಾಡಿದ್ದೇನೆ. ಇದು ಮೂರು ತಿಂಗಳ ಬೆಳೆಯಾಗಿದ್ದು, ಮಳೆ ಮತ್ತು ನೀರು ಇಲ್ಲದ್ದರಿಂದ ಬೆಳೆ ಬೆಳೆಯಲು ಆರಂಭದಲ್ಲಿ ಬಹಳ ಕಷ್ಟವಾಗಿತ್ತು. ಬಾಡಿಗೆ ಟ್ಯಾಂಕರ್​ನಿಂದ ನೀರು ಹಾಕಿ ಅವರ ಈ ಭಾವಚಿತ್ರ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆವು. ಇದಕ್ಕೆ ಸುಮಾರು 3 ಲಕ್ಷ ರೂಪಾಯಿಗೂ ಹೆಚ್ಚು ಖರ್ಚಾಗಿದೆ. ಬಹಳ ಕಷ್ಟವಾಗುತ್ತಿತ್ತು. ಆದರೂ, ಅವರ ಮೇಲಿರುವ ಅಭಿಮಾನದಿಂದ ಇಷ್ಟಪಟ್ಟು ಭತ್ತದಲ್ಲಿ ಅವರ ಭಾವಚಿತ್ರವನ್ನು ಮೂಡಿಸುವಮ ಮೂಲಕ ನಮನ ಸಲ್ಲಿಸಿರುವೆ. ಅಶ್ವೀನಿ ಪುನೀತ್​ ರಾಜ್​ಕುಮಾರ್ ಅವರು ಕೂಡ ನೋಡಿ ಖುಷಿಪಟ್ಟರು” ಎಂದು ರೈತ ಸತ್ಯನಾರಾಯಣ ಅವರು ಖುಷಿಯನ್ನು ವ್ಯಕ್ತಪಡಿಸಿಕೊಂಡರು .

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ
March 14, 2025
6:57 AM
by: The Rural Mirror ಸುದ್ದಿಜಾಲ
ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ
March 14, 2025
6:54 AM
by: The Rural Mirror ಸುದ್ದಿಜಾಲ
ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |
March 14, 2025
6:51 AM
by: The Rural Mirror ಸುದ್ದಿಜಾಲ
ಬೆಳ್ಳಿ ಧರಿಸುವುದು ಎಲ್ಲಾ ರಾಶಿಯವರಿಗೆ ಉತ್ತಮವೇ…? | ಯಾವೆಲ್ಲಾ ರಾಶಿಗಳಿಗಳಿಗೆ ಹಾನಿ..?
March 14, 2025
6:37 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror