ರೈತರಿಂದ ನೇರವಾಗಿ ರಾಗಿ, ಜೋಳ, ಭತ್ತ ಖರೀದಿಸಿ ಪಡಿತರ ವಿತರಣೆ ನಡೆಸಲು ಆಹಾರ ಇಲಾಖೆ ತೀರ್ಮಾನ

December 5, 2024
7:02 AM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ರಾಗಿ ಖರೀದಿ ಮಾಡಲು ಖರೀದಿ ನೋಂದಣಿ ಕೇಂದ್ರ ತೆರೆಯಲಾಗಿದೆ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಕೇಂದ್ರಕ್ಕೆ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಗಿ, ಜೋಳ ಭತ್ತ ಖರೀದಿ ಕೇಂದ್ರಗಳನ್ನು ತೆರೆದು, ಧಾನ್ಯ ಸಂಗ್ರಹಣೆ ಮಾಡಿ ಪಡಿತರ ಮೂಲಕ ಹಂಚಲಾಗುವುದು ಎಂದು ಹೇಳಿದ್ದಾರೆ. ಕರ್ನಾಟಕ  ಆಹಾರ  ಮತ್ತು ನಾಗರಿಕ ಸರಬರಾಜು  ನಿಗಮ  ನಿಯಮಿತ,  ಕರ್ನಾಟಕ  ಕೃಷಿ  ಮಾರಾಟ ಮಂಡಳಿ ಮತ್ತು  ಕರ್ನಾಟಕ  ರಾಜ್ಯ  ಸಹಕಾರ  ಮಾರಾಟ  ಮಹಾ  ಮಂಡಳಿ  ಈ  ಮೂರು  ನಿಗಮಗಳಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿ   ಸಾರ್ವಜನಿಕ  ವಿತರಣೆ  ಮೂಲಕ  ಹಂಚಿಕೆ  ಮಾಡುತ್ತಿರುವ ಪಡಿತರ ಚೀಟಿಗಳಿಗೆ ಅಗತ್ಯವಿರುವ  4.30 ಕೋಟಿ  ಮೆಟ್ರಿಕ್   ಟನ್ ರಾಗಿ, 2.24 ಕೋಟಿ  ಟನ್ ಭತ್ತ ಹಾಗೂ 1  ಲಕ್ಷ ಮೆಟ್ರಿಕ್ ಟನ್ ಜೋಳವನ್ನು ರೈತರಿಂದ ಖರೀದಿಸಲು ಸಚಿವ ಸಂಪುಟ ಉಪಸಮಿತಿ ಅನುಮೋದನೆ ನೀಡಿದೆ.   ಎಫ್.ಎ.ಕ್ಯೂ ಮಾನದಂಡಗಳಂತೆ ಉತ್ತಮ ಗುಣಮಟ್ಟದ ಧಾನ್ಯಗಳನ್ನು ಖರೀದಿಸಲಾಗುತ್ತಿದೆ ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಆನೆ ದಾಳಿಗೆ ಮೂರು ವರ್ಷದಲ್ಲಿ 129 ರೈತರು ಬಲಿ | ವಿಧಾನಪರಿಷತ್‌ನಲ್ಲಿ ಮಾಹಿತಿ ನೀಡಿದ ಅರಣ್ಯ ಇಲಾಖೆ
August 11, 2025
9:01 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-08-2025 | ಇಂದು ಸಾಮಾನ್ಯ ಮಳೆ | ಆ-12 ರಿಂದ ಆ-20 ರವರಗೆ ರಾಜ್ಯದ ವಿವಿದೆಡೆ ಮಳೆ |
August 11, 2025
1:47 PM
by: ಸಾಯಿಶೇಖರ್ ಕರಿಕಳ
ವೈಜ್ಞಾನಿಕ ಶಿಫಾರಸ್ಸಿನಂತೆ ರಸಗೊಬ್ಬರದ ಬಳಕೆ ಸೂಕ್ತ – ರೈತರಿಗೆ ಸಲಹೆ
August 11, 2025
8:43 AM
by: The Rural Mirror ಸುದ್ದಿಜಾಲ
ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ವ್ಯಾಪಕ ಮಳೆ | ಬೆಂಗಳೂರಿಗೆ ಎಲ್ಲೋ ಅಲರ್ಟ್
August 11, 2025
7:27 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group