ಚುನಾವಣೆಗಳಲ್ಲಿ ಕಪ್ಪು ಹಣ ನಿಗ್ರಹವೇ ಚುನಾವಣಾ ಬಾಂಡ್ ಉದ್ದೇಶ | ಚುನಾವಣಾ ಬಾಂಡ್ ಸಮರ್ಥಿಸಿಕೊಂಡ ಪ್ರಧಾನಿ ಮೋದಿ

April 16, 2024
12:38 PM

ಲೋಕ ಸಭಾ ಚುನಾವಣೆ(Lok sabha Election) ದಿನಾಂಕ ಪ್ರಕಟಕ್ಕೆ ಕಾಯುತ್ತಿದ್ದಂತೆ ವಿರೋಧ ಪಕ್ಷಗಳಿಗೆ ಅಸ್ತ್ರವಾಗಿ ಸಿಕ್ಕಿದ್ದು ಚುನಾವಣಾ ಬಾಂಡ್(Election bond).‌ ಚುನಾವಣಾ ಬಾಂಡ್‌ ಮಾಹಿತಿ ಹೊರ ಬೀಳುತ್ತಿದ್ದಂತೆ ದೇಶವೇ ಬೆಚ್ಚಿ ಬೀಳಿತ್ತು. ಎಲ್ಲಾ ಪಕ್ಷಗಳು ಅನಾಮಧೇಯ ಹಾಗೂ ಕೆಲ ವಿದೇಶಿ ಕಂಪೆನಿಗಳ ಹೆಸರಿನಲ್ಲೂ ಬಾಂಡ್‌ ಖರೀದಿ ನಡೆದಿದೆ. ಒಬ್ಬರ ಮೇಲೋಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದರೆ, ದೇಶದ ಪ್ರಧಾನಿ ಮೋದಿ ತುಟಿ ಬಿಚ್ಚಲಿಲ್ಲ. ಇದೀಗ  ಚುನಾವಣೆಗಳಲ್ಲಿ ಕಪ್ಪು ಹಣ(Black money) ನಿಗ್ರಹವೇ ಚುನಾವಣಾ ಬಾಂಡ್ ಉದ್ದೇಶವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಖಾಸಗಿ ಸುದ್ದಿ ಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡುತ್ತಾ ಚುನಾವಣಾ ಬಾಂಡ್ (Electoral Bond) ಮಾಡಿರುವುದನ್ನು ಸಮರ್ಥಿಸಿಕೊಂಡರು. ವಿಪಕ್ಷಗಳು ಚುನಾವಣೆಯಲ್ಲಿ ಸೋಲುತ್ತವೆ. ಅದನ್ನು ಮರೆಮಾಚಲು ಇವಿಎಂ (EVM) ಮೇಲೆ ಅನುಮಾನ ವ್ಯಕ್ತಪಡಿಸುತ್ತವೆ ಅಂತ ಕಿಡಿಕಾರಿದರು.

Advertisement
Advertisement
Advertisement
Advertisement

ಚುನಾವಣಾ ಬಾಂಡ್ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳು ಸುಳ್ಳನ್ನು ಹಬ್ಬಿಸುತ್ತಿವೆ ಎಂದು ಆರೋಪಿಸಿದ ಅವರು, ಈ ವಿಷಯದಲ್ಲಿ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತವಾದಾಗ ಎಲ್ಲರೂ ಪಶ್ಚಾತ್ತಾಪ ಪಡುತ್ತಾರೆ ಎಂದು ಹೇಳಿದರು. ಚುನಾವಣೆಯಲ್ಲಿ ಹಣ ಖರ್ಚಾಗುತ್ತದೆ. ಕಪ್ಪು ಹಣ (Black Money) ಚುನಾವಣೆಯಲ್ಲಿ ದೊಡ್ಡ ಶಕ್ತಿಯಾಗಿದೆ. ಈ ಕಪ್ಪು ಹಣದಿಂದ ಚುನಾವಣೆ ಮುಕ್ತ ಮಾಡಬಹುದು ಎಂದು ಯೋಚಿಸಿದ್ದೆ. ಆಗ ಚುನಾವಣಾ ಬಾಂಡ್ ಚಿಂತನೆ ಬಂತು. ನಗದು ಹಣದ ವ್ಯವಹಾರಕ್ಕೆ ಅವಕಾಶ ನೀಡಬಾರದು ಎಂದು ಬಾಂಡ್ ವ್ಯವಸ್ಥೆ ಜಾರಿ ಮಾಡಲಾಯಿತು. ಮಾಹಿತಿ ಬಹಿರಂಗಗೊಳಿಸದಿರಲು ಹಲವು ಕಾರಣಗಳಿದೆ. ಯಾರು ಯಾರಿಗೆ ಹಣ ನೀಡಿದರು ಎಂದು ಗೊತ್ತಾದ್ರೆ ರಾಜಕೀಯ ಪಕ್ಷಗಳು ಸಮಸ್ಯೆ ಮಾಡಬಹುದು. ಅಥವಾ ಜನರು ಹಣ ಕೊಡಲು ಮುಂದೆ ಬಾರದಿರಬಹುದು. ಬಾಂಡ್ ನಿಂದ ಹಣ ಎಲ್ಲಿಂದ ಬಂತು ಲೆಕ್ಕ ಸಿಗುತ್ತದೆ ಎಂದರು.

Advertisement

3, 000 ಕಂಪನಿ ಬಾಂಡ್ ನೀಡಿದೆ. ಅದರಲ್ಲಿ 26 ಕಂಪನಿಗಳ ವಿರುದ್ಧ ಇಡಿ ತನಿಖೆ ನಡೆಯುತ್ತಿದೆ. ಈ 26 ಕಂಪನಿಗಳಲ್ಲಿ 16 ಕಂಪನಿಗಳು ದಾಳಿ ಸಮಯದಲ್ಲಿ ಬಾಂಡ್ ಖರೀದಿಸಿವೆ. ಈ ಬಾಂಡ್ ನಲ್ಲಿ 37% ಹಣ ಬಿಜೆಪಿಗೆ ಬಂದಿದೆ, 63% ರಷ್ಟು ಹಣ ವಿರೋಧ ಪಕ್ಷಗಳಿಗೆ ಹೋಗಿದೆ. ಆದರೆ ಆರೋಪ ನಮ್ಮ ಮೇಲೆ ಮಾಡಲಾಗುತ್ತಿದೆ ಎಂದು ಮೋದಿ ಹೇಳಿದರು.

  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |
February 24, 2025
10:54 PM
by: The Rural Mirror ಸುದ್ದಿಜಾಲ
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಅಭಿಯಾನ | ರಾಜ್ಯಸಭಾ ಸಂಸದೆ ಸುಧಾಮೂರ್ತಿ ಸೇರಿದಂತೆ 10 ಮಂದಿ ನಾಮನಿರ್ದೇಶನ
February 24, 2025
10:16 PM
by: The Rural Mirror ಸುದ್ದಿಜಾಲ
ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ
February 24, 2025
12:14 PM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ
February 24, 2025
12:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror