ಸಮಾಜಮುಖಿ ಕಾರ್ಯಗಳಲ್ಲಿ ಪುತ್ತಿಲ ಪರಿವಾರ ಮತ್ತಷ್ಟು ಸಕ್ರಿಯವಾಗಿದೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಪುತ್ತಿಲ ಪರಿವಾರ ತೊಡಗಿಸಿಕೊಂಡಿದೆ. ಅಶಕ್ತರಿಗೆ ನೆರವಾಗುವ ಮೂಲಕ ಮಾನವೀಯ ಸೇವಾ ಕಾರ್ಯದಲ್ಲಿದೆ. ಇದೀಗ ಸುಳ್ಯದಲ್ಲಿ ಕೂಲಿ ಕೆಲಸಕ್ಕೆ ಹೋಗುವ ಮಹಿಳೆಯೋರ್ವರು ಪ್ಲಾಸ್ಟಿಕ್ ಹೊದಿಕೆಯ ಮನೆಯಲ್ಲಿ ತನ್ನ ಮೂವರು ಮಕ್ಕಳ ಜೊತೆ ವಾಸಿಸುತಿದ್ದಾರೆ. ಇದಕ್ಕಾಗು ಶಾಶ್ವತ ಮನೆ ನಿರ್ಮಾಣ ಯೋಜನೆಯ ಗುರಿಯನ್ನು ಪುತ್ತಿಲ ಪರಿವಾರ ಇರಿಸಿಕೊಂಡಿದೆ.
ಸುಳ್ಯ ನಗರದ ಶಾಂತಿನಗರದಲ್ಲಿ ಕೂಲಿ ಕೆಲಸಕ್ಕೆ ಹೋಗುವ ಮಹಿಳೆಯೋರ್ವರು ಪ್ಲಾಸ್ಟಿಕ್ ಹೊದಿಕೆಯ ಮನೆಯಲ್ಲಿ ತನ್ನ ಮೂವರು ಮಕ್ಕಳ ಜೊತೆ ವಾಸಿಸುತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಅರುಣ್ ಕುಮಾರ್ ಪುತ್ತಿಲ ಹಾಗೂ ಪುತ್ತಿಲ ಪರಿವಾರದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಇವರ ಸಮಸ್ಯೆ ಬಗ್ಗೆ ಮಾತುಕತೆ ನಡೆಸಿ ಸುಳ್ಯ ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್ ಜೊತೆ ಮಾತನಾಡಿದರು. ಮನೆಗೆ ಸಂಬಂಧಿಸಿದ ದಾಖಲೆ ಪತ್ರಗಳ ಸಮಸ್ಯೆ ಇತ್ಯರ್ಥ ಆದ ತಕ್ಷಣ ಇಲಾಖೆಯ ಸಹಾಯದಿಂದ ಪುತ್ತಿಲ ಪರಿವಾರದ ನೇತೃತ್ವದಲ್ಲಿ ಮನೆ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಈ ಸಂದರ್ಭ ಅರುಣ್ ಕುಮಾರ್ ಪುತ್ತಿಲ ,ಸುಧಾಕರ್ ಬಾಟೋಳಿಮೂಲೆ ಅಲೆಟ್ಟಿ, ದಿನೇಶ್ ಅಡ್ಕಾರ್ ಸಹಿತ ಹಲವು ಪ್ರಮುಖರು ಇದ್ದರು.
ಇದೇ ವೇಳೆ ಪುತ್ತಿಲ ಪರಿವಾರದ ಸದಸ್ಯ ಮುಂಡೂರು ಗ್ರಾಮದ ಪುತ್ತಿಲ ನಿವಾಸಿಯಾಗಿರುವ ಸತೀಶ ಅವರಿಗೆ ಅನಾರೋಗ್ಯದ ನಿಮಿತ್ತ ಪುತ್ತಿಲ ಪರಿವಾರದ ಸೇವಾ ಸಮರ್ಪಣೆಯ ಭಾಗವಾಗಿ ಸಂಗ್ರಹಿಸಲಾದ ಸಹಾಯಧನವನ್ನು ಮಂಗಳವಾರ ವಿತರಣೆ ಮಾಡಲಾಗಿದೆ. ಪುತ್ತಿಲ ಪರಿವಾರದ ಸದಸ್ಯರು ಮನೆಗೆ ಭೇಟಿ ಮಾಡಿ ಸಹಾಯಧನವನ್ನು ಸತೀಶ್ ರವರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ, ಸುದೀರ್ ಶೆಟ್ಟಿ ನೇಸರ, ಅನಿಲ್ ಕುಮಾರ್ ಕನ್ನಾರ್ನೂಜಿ, ಬಾಲಚಂದ್ರ ಸೊರಕೆ, ಅಶೋಕ್ ನಾಯ್ಕ್ ಪುತ್ತಿಲ, ಪ್ರಸಾದ್ ಪುತ್ತಿಲ, ಧನಂಜಯ ಕಲ್ಲಮ, ಜನಾರ್ಧನ ಎ, ಮೋನಪ್ಪ ಗೌಡ, ಹರೀಶ್ ನಾಯ್ಕ್ ಪುತ್ತಿಲ, ಪುರಂದರ ಗೌಡ ಮತ್ತಿತರರು ಉಪಸ್ಥಿತರಿದ್ದರು