ಚುನಾವಣಾ ಪೂರ್ವದಲ್ಲಿ ಬಿಜೆಪಿ ಟಿಕೆಟ್ ವಿಚಾರದಲ್ಲಿ ಹಗರಿಬೊಮ್ಮನಹಳ್ಳಿಯ ಕ್ಷೇತ್ರದ ರಾಷ್ಟ್ರೀಯ ಪಕ್ಷದ ಟಿಕೇಟ್ ವಿಷಯದಲ್ಲಿ ನಾಯಕರ ನಡುವೆ ಚುನಾವಣ ಪೂರ್ವ ವ್ಯವಹಾರವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಇದರಲ್ಲಿ ಪುತ್ತಿಲ ಪರಿವಾರದಲ್ಲಿ ಕೆಲಸ ಮಾಡಿರುವ ವ್ಯಕ್ತಿಯ ಹೆಸರು ಉಲ್ಲೇಖವಾಗಿರುವುದರಿಂದ ವೈಯಕ್ತಿಕ ವ್ಯವಹಾರಕ್ಕೂ ಪುತ್ತಿಲ ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಒತ್ತಾಯದಂತೆ ಪಕ್ಷೇತರರಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರು ಸ್ಪರ್ಧಿಸಿದರು.ಚುನಾವಣೆಯ ಸಂದರ್ಭ ಕೇವಲ 20 ದಿನದಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ತಾಲೂಕು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ದುಡಿದಿರುವವರಲ್ಲಿ ನೇರಳಕಟ್ಟೆಯ ರಾಜಶೇಖರ್ ಕೋಟ್ಯಾನ್ ಕೂಡ ಒಬ್ಬರು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಜಶೇಖರ್ ಕೋಟ್ಯಾನ್ ವಿರುದ್ಧ ಕೆಲವು ಆರೋಪಗಳು ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ವಿಷಯ ಕರ್ನಾಟಕದ ಹಗರಿಬೊಮ್ಮನಹಳ್ಳಿಯ ಕ್ಷೇತ್ರದ ರಾಷ್ಟ್ರೀಯ ಪಕ್ಷದ ಟಿಕೇಟ್ ವಿಷಯದಲ್ಲಿ ನಾಯಕರ ನಡುವೆ ಚುನಾವಣ ಪೂರ್ವ ವ್ಯವಹಾರವಾಗಿದ್ದು, ಆ ಆರೋಪದಲ್ಲಿ ಪುತ್ತಿಲ ಪರಿವಾರದ ಹೆಸರು ಪ್ರಸ್ತಾಪವಾಗಿರುವುದರಿಂದ ಈ ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಬಂದ ದೂರಿನ ಪ್ರತಿಯಲ್ಲಿಯೂ ಪುತ್ತಿಲ ಪರಿವಾರದ ಬಗ್ಗೆ ಉಲ್ಲೇಖವಿಲ್ಲ. ಅವರ ವೈಯಕ್ತಿಕ ವ್ಯವಹಾರಕ್ಕೂ ಪುತ್ತಿಲ ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪುತ್ತಿಲ ಪರಿವಾರ ಸ್ಪಷ್ಟನೆ ನೀಡಿದೆ.
ಚುನಾವಣಾ ಪೂರ್ವದಲ್ಲಿ ನಡೆದಿರುವ ಈ ಘಟನೆಯ ಬಗ್ಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ, ಹೀಗಿದ್ದರೂ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದು ಸರಿಯಲ್ಲ ಎಂದು ಬೆಂಗಳೂರಿನ ಉದ್ಯಮಿ ಸ್ಪಷ್ಟನೆ ನೀಡಿದ್ದಾರೆ.
ಈ ನಡುವೆ ರಾಜಶೇಖರ ಕೋಟ್ಯಾನ್ ಅವರು ಕೂಡಾ ಪೊಲೀಸ್ ಠಾಣೆಗೆ ದೂರು ನೀಡಿ, ತೇಜೋವಧೆ ಮಾಡಲಾಗುತ್ತಿದೆ, ಯಾವುದೇ ದೂರು ದಾಖಲಾಗಿದ್ದರೂ ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸುಳ್ಯ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ…
ರಾಜ್ಯದ ವಿವಿಧೆಡೆ ಇಂದು ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ರಾಜಧಾನಿ ಬೆಂಗಳೂರಿನಲ್ಲಿ ಮಳೆ…
ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚಿದ ತಾಪಮಾನ ಹಿನ್ನೆಲೆಯಲ್ಲಿ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ…
ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.ಎಪ್ರಿಲ್ 4ರಿಂದ ವ್ಯಾಪ್ತಿ ಹಾಗೂ ಪ್ರಮಾಣ…
ಮಹಿಳೆಯ ಸುರಕ್ಷಾ ವಲಯವೆಂದರೆ ಅದು ಅಡುಗೆ ಕೋಣೆ. ಈ ಅಡುಗೆ ಕೋಣೆಯೇ ಎಲ್ಲವೂ.…
ಮನೆಯ ಒಡತಿ ಎನ್ನುವ "ಅಮ್ಮ" ದಿನವೂ ಏನು ಮಾಡುತ್ತಾರೆ..? ಅವಳ ಪಾತ್ರ ಏನು…