ಸೌಜನ್ಯ ಪ್ರಕರಣ | ಆ.14 ಪುತ್ತೂರಿನಲ್ಲಿ ‘ನಮ್ಮ ನಡೆ ನ್ಯಾಯದ ಕಡೆ’ ಬೃಹತ್ ಕಾಲ್ನಾಡಿಗೆ ಜಾಥ | ಸೌಜನ್ಯ ಪರ ಹೋರಾಟಕ್ಕಿಳಿದ ಪುತ್ತಿಲ ಪರಿವಾರ |

August 8, 2023
7:25 PM
ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಲು ಸರ್ಕಾರ ಮರುತನಿಖೆ ಕೈಗೊಳ್ಳಬೇಕು ಹಾಗೂ ನೈಜ ಆರೋಪಿಗಳ ಬಂಧನವಾಗಬೇಕೆಂದು ಒತ್ತಾಯಿಸಿ ಆಗಸ್ಟ್ 14 ರಂದು ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ಕಾಲ್ನಾಡಿಗೆ ಜಾಥ ನಡೆಯಲಿದೆ.

11 ವರ್ಷಗಳ ಹಿಂದೆ ಅತ್ಯಾಚಾರ ನಡೆದು ಕೊಲೆಯಾದ ಸಹೋದರಿ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಲು ಸರ್ಕಾರ ಮರುತನಿಖೆ ಕೈಗೊಳ್ಳಬೇಕು ಹಾಗೂ ನೈಜ ಆರೋಪಿಗಳ ಬಂಧನವಾಗಬೇಕೆಂದು ಒತ್ತಾಯಿಸಿ ಆಗಸ್ಟ್ 14 ರಂದು ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ‘ನಮ್ಮ ನಡೆ ನ್ಯಾಯದ ಕಡೆ’ ಬೃಹತ್ ಕಾಲ್ನಾಡಿಗೆ ಜಾಥ ಹಾಗೂ ರಸ್ತೆ ತಡೆ ನಡೆಯಲಿದೆ.

Advertisement
Advertisement
Advertisement
Advertisement

ಮಂಗಳವಾರ ಪುತ್ತಿಲ ಪರಿವಾರ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಆ. 14ರ ಸೋಮವಾರದಂದು ಬೆಳಿಗ್ಗೆ 9.30 ಕ್ಕೆ ದರ್ಬೆ ವೃತ್ತದಿಂದ ಕಾಲ್ನಡಿಗೆ ಜಾಥ ಪುತ್ತೂರು ಬಸ್ ನಿಲ್ದಾಣದವರೆಗೆ ತೆರಳಿ ಅಲ್ಲಿ ರಸ್ತೆ ತಡೆ ಮತ್ತು ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.

Advertisement

ಪೂರ್ವಭಾವಿ ಸಭೆಯಲ್ಲಿ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತಾ , ನಗರ ಅಧ್ಯಕ್ಷರಾದ ಅನಿಲ್ ತೆಂಕಿಲ, ಪ್ರಧಾನ ಕಾರ್ಯದರ್ಶಿ ಉಮೇಶ್ ವೀರಮಂಗಲ, ಪ್ರಮುಖರಾದ ಸುನೀಲ್ ಬೋರ್ಕರ್, ರವಿ ಕುಮಾರ್ ಕೆದಂಬಾಡಿ ಮಠ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಕೃಷ್ಣಪ್ರಸಾದ್ ಶೆಟ್ಟಿ, ಚಂದ್ರಹಾಸ್ ಈಶ್ವರಮಂಗಲ, ಪ್ರೇಮ್ ರಾಜ್ ಆರ್ಲಪದವು ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.

ಸಹೋದರಿ ಸೌಜನ್ಯಳಿಗೆ ನ್ಯಾಯಕ್ಕಾಗಿ 1 ಗಂಟೆ ಬಂದ್ ಮಾಡುವಂತೆ ಮನವಿ: ಪುತ್ತೂರು ಪೇಟೆಯ ವರ್ತಕರು ಸಹೋದರಿ ಸೌಜನ್ಯಳ ಸಾವಿಗೆ ನ್ಯಾಯಕ್ಕಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಅಂದು ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಸ್ವಯಂಪ್ರೇರಿತ ಬಂದ್ ಮಾಡುವಂತೆ ಪುತ್ತಿಲ ಪರಿವಾರ ವತಿಯಿಂದ ಪುತ್ತೂರಿನ ಸಮಸ್ತ ವ್ಯಾಪಾರಸ್ಥರಲ್ಲಿ ಮನವಿ ಮಾಡಲಾಗಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 22.10.2024 | ರಾಜ್ಯದಲ್ಲಿ ಸಾಮಾನ್ಯ ಮಳೆ ಮುಂದುವರಿಕೆ | ಅ.25ರಿಂದ ಮಳೆ ಕಡಿಮೆ ಸಾಧ್ಯತೆ| ಅ.24ರಂದು ಒಡಿಸ್ಸಾ ಪಶ್ಚಿಮ ಬಂಗಾಳ ಕರಾವಳಿಗೆ ಡಾನಾ ಚಂಡಮಾರುತ
October 22, 2024
12:34 PM
by: ಸಾಯಿಶೇಖರ್ ಕರಿಕಳ
ಚಿಕ್ಕಮಗಳೂರಿನಲ್ಲಿ ಭಾರೀ ಮಳೆ | ಪ್ರವಾಸ ಮುಂದೂಡಲು ಜಿಲ್ಲಾಡಳಿತ ಸೂಚನೆ |
October 22, 2024
7:29 AM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಮತ್ತೆ ಮಳೆಯ ಅಬ್ಬರ | ಸಿಲಿಕಾನ್‌ ಸಿಟಿಯ ಎಲ್ಲೆಲ್ಲೂ ನೀರು..! | ಇಂದು ಕೂಡಾ ಮಳೆ ಸಾಧ್ಯತೆ |
October 22, 2024
7:13 AM
by: The Rural Mirror ಸುದ್ದಿಜಾಲ
 ಕೋಲಾರದಲ್ಲಿ ಪಶು ಸಂಜೀವಿನಿ ಯೋಜನೆ ಅನುಷ್ಠಾನ | ಪಶು ಸಖಿಯರಿಗೆ ತರಬೇತಿ |
October 22, 2024
6:42 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror