ಸಮಾಜಮುಖಿ ಚಿಂತನೆಯಲ್ಲಿ ಪುತ್ತಿಲ ಪರಿವಾರ | ಪುತ್ತಿಲ ಪರಿವಾರದ ಸೇವಾ ಸಮರ್ಪಣೆಗೆ ಕ್ಯೂಆರ್ ಕೋಡ್ ಬಿಡುಗಡೆ

September 11, 2023
9:46 PM
ಪುತ್ತಿಲ ಪರಿವಾರದ ಸೇವಾ ಸಮರ್ಪಣೆಗೆ ಸಮಾಜದ ದಾನಿಗಳಿಂದ ಕೊಡುಗೆಗಾಗಿ ಕ್ಯೂರ್ ಕೋಡ್ ಮತ್ತು ಅಕೌಂಟ್ ನಂಬರ್ ಬಿಡುಗಡೆ ಮಾಡಲಾಗಿದೆ.

ಪುತ್ತಿಲ ಪರಿವಾರ ಪ್ರಾರಂಭವಾಗಿ ಶತ ದಿನ ಕಳೆದಿದ್ದು, ಹಲವು ಸೇವಾ ಚಟುವಟಿಕೆಗಳನ್ನು ಪೂರೈಸಿದೆ. ಇದೀಗ ಪುತ್ತಿಲ ಪರಿವಾರದ ಸೇವಾ ಸಮರ್ಪಣೆಗೆ ಸಮಾಜದ ದಾನಿಗಳಿಂದ ಕೊಡುಗೆಗಾಗಿ ಕ್ಯೂಆರ್ ಕೋಡ್ ಮತ್ತು ಅಕೌಂಟ್ ನಂಬರ್ ಬಿಡುಗಡೆ ಮಾಡಲಾಗಿದೆ.

Advertisement
Advertisement
Advertisement

ಪುತ್ತಿಲ ಪರಿವಾರವು ಚುನಾವಣೆಯಲ್ಲಿ ಉಳಿಕೆ ಹಣವನ್ನು ಹಲವು ಆನಾರೋಗ್ಯ ಪೀಡಿತರಿಗೆ, ಮಳೆಗಾಲದಲ್ಲಿ ಹಾನಿಯಾದ ಹಲವು ಮನೆಗಳಿಗೆ ವಿತರಿಸಿದ್ದು, ನಂತರ ಪುತ್ತಿಲ ಪರಿವಾರ ಪ್ರಾರಂಭವಾಗಿ ನೂರು ದಿನಗಳಲ್ಲಿ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ಸೇರಿದವರಿಗೆ, ಅಪಘಾತದಿಂದ ಗಾಯಗೊಂಡವರಿಗೆ, ಗೋಮಾತೆಯ ರಕ್ಷಣೆಗೆ , ವಿದ್ಯಾಭ್ಯಾಸಕ್ಕೆ ಸಹಾಯ ಸಹಿತ ಹಲವು ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಕಾರ್ಯಕರ್ತರಿಗೆ ಕಾನೂನಿನ ನೆರವಿನ ಸಹಾಯವನ್ನು ಪುತ್ತಿಲ ಪರಿವಾರದಿಂದ ಒದಗಿಸಲಿದೆ.

Advertisement

ಪುತ್ತಿಲ ಪರಿವಾರ ನಡೆಸುವ ಸೇವಾ ಸಮರ್ಪಣೆಗಳನ್ನು ಕಂಡು ನೂರಾರು ಜನ ತಮ್ಮಿಂದಾದ ಕೊಡುಗೆಗಳನ್ನು ನೀಡಲು ಮುಂದೆ ಬಂದಿದ್ದಾರೆ.ಆ ಕಾರಣಗಳಿಂದ ಸೇವಾ ಸಮರ್ಪಣೆಗಳಿಗೆ ನಿಮ್ಮ ಕೊಡುಗೆ ಎಂಬ ಯೋಜನೆಯನ್ವಯ ಕ್ಯೂಆರ್ ಕೋಡ್ ಮತ್ತು ಬ್ಯಾಂಕ್ ಖಾತೆ ನಂಬರ್ ಬಿಡುಗಡೆಗೊಳಿಸಲಾಗಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಅಪಘಾತದಿಂದ ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯೋರ್ವರಿಗೆ ವಿದ್ಯಾಭ್ಯಾಸಕ್ಕೆ ಸಹಾಯಕ್ಕಾಗಿ ಲ್ಯಾಪ್‌ಟಾಪ್ ನೀಡಿ ಈ ಯೋಜನೆಗೆ ಚಾಲನೆ ನೀಡಲಾಗಿದೆ.

Advertisement

ಇದರಲ್ಲಿ ಇರುವ ಖಾತೆ ನಂಬರ್ ಅರುಣ್ ಕುಮಾರ್ ಪುತ್ತಿಲ ಹಾಗೂ ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್ ಅವರ ಜಂಟಿ ಖಾತೆಯಾಗಿದ್ಧು, ಇದಕ್ಕೆ ಸಂದಾಯವಾಗುವ ಹಣದ ಸೇವಾ ಸಮರ್ಪಣೆಗೆ ಮಾತ್ರ ಉಪಯೋಗವಾಗಲಿದ್ದು, ಪ್ರತಿ 6 ತಿಂಗಳಿಗೊಮ್ಮೆ ವ್ಯಾವಹಾರಿಕ ಲೆಕ್ಕಾಚಾರ ಬಿಡುಗಡೆಯಾಗಲಿದೆ.

ಇಚ್ಚೆ ಇದ್ದವರು ತಮ್ಮಿಂದಾದ ನೆರವನ್ನು ಪುತ್ತಿಲ ಪರಿವಾರದ ಕ್ಯೂ ಆರ್ ಕೋಡ್ ಅಥವಾ ಖಾತೆ ನಂಬರ್ ಗೆ ಸಂದಾಯ ಮಾಡಬಹುದು ಎಂದು ಪುತ್ತಿಲ ಪರಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror