ಮುಳಿಯ ಗಾನರಥ | ಫೆ.5 : ಬೆಳ್ಳಾರೆಯಲ್ಲಿ ಐದನೇ ಆಡಿಷನ್ ರೌಂಡ್ | ಕರೋಕೆ ಹಾಡುಗಳ ಗಾಯನ ಸ್ಫರ್ಧೆಯ ಆಡಿಷನ್ |

February 3, 2022
8:38 PM

ಪುತ್ತೂರು ಮುಳಿಯ ಪ್ರಸ್ತುತ ಪಡಿಸುವ ಮುಳಿಯ ಗಾನರಥ ದ ಐದನೇ ಆಡಿಷನ್ ರೌಂಡ್ ಫೆ.5 ಶನಿವಾರ ಸಂಜೆ 4.30 ಕ್ಕೆ ಬೆಳ್ಳಾರೆಯ  ಅಮ್ಮು ರೈ ದೇವಿ ಹೈಟ್ಸ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಫೆ.5 ರಂದು ಆಡಿಷನ್ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement
Advertisement

ಕನ್ನಡ, ಹಿಂದಿ, ತುಳು ಹಾಗೂ ಮಲಯಾಳಂ 4 ಭಾಷೆಯ ಹಾಡುಗಳಿಗೆ ಅವಕಾಶವನ್ನು ನೀಡಲಾಗಿದ್ದು, 14 ರಿಂದ 21 ವರ್ಷದ ವಯೋಮಿತಿಯವರು ಹಾಗೂ ಸಾರ್ವಜನಿಕ ವಿಭಾಗದಲ್ಲಿ 21 ವರ್ಷ ಮೇಲ್ಪಟ್ಟವರು ಕರೋಕೆ ಹಾಡುಗಳ ಗಾಯನ ಸ್ಫರ್ಧೆ ಆಡಿಷನ್ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಆಡಿಷನ್ ನೋಂದಾವಣೆಗಾಗಿ 9743175916 ಗೆ ಕರೆ ಮಾಡಬಹುದಾಗಿದೆ. ಈ ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್‍ನ ಫೇಸ್‍ಬುಕ್ ಮುಖಾಂತರವೂ ವೀಕ್ಷಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸ್ಪರ್ಧಾ ನಿಬಂಧನೆಗಳು ಹೀಗಿದೆ :

1.ವಯೋಮಿತಿ ಆಧಾರಕ್ಕಾಗಿ ಆಧಾರ್ ಕಾರ್ಡ್ ಚೆರಾಕ್ಸ್ ಪ್ರತಿ ಕಡ್ಡಾಯ
2.ಪ್ರೇಕ್ಷಕರಿಗೆ ಕಾರ್ಯಕ್ರಮವನ್ನು ವೀಕ್ಷಿಸಲು ಆನ್‌ಲೈನ್‌ನಲ್ಲಿ ವ್ಯವಸ್ಥೆ ಮಾಡಲಾಗುವುದು.
3.ಕರೋಕೆ ಗಾಯನದಲ್ಲಿ ಹಾಡುವಾ ಎಲ್ಲಿಯೂ ಕರೋಕೆ ತಪ್ಪು ಮಾಡದೇ ಹಾಡುವುದು.
4.ಕರೋಕೆ ಗಾಯನ ಹಾಡುವವರು ಕರೋಕೆ ಇರುವ ಶೃತಿಯಲ್ಲಿ ಹಾಡಬೇಕು.
5.ಕರೋಕೆ ಗಾಯನದಲ್ಲಿ ತಾಳಬದ್ದವಾಗಿ ಹಾಡಬೇಕು, ಸಾಹಿತ್ಯ ತಪ್ಪಾಗಿ ಇರಬಾರದು.
6.ಗೀತೆಯನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಬೇಕು.
7.ಚಿಕ್ಕಮಕ್ಕಳೊಂದಿಗೆ ಪೋಷಕರು ಹಾಜರಿರತಕ್ಕದ್ದು.
8.ವಯೋಮಿತಿ 12 ವಯಸ್ಸಿನಿಂದ 21 ವಯಸ್ಸಿನವರೆಗೆ ಹಾಗೂ ಮೇಲ್ಪಟ್ಟ ವಯಸ್ಸಿನವರನ್ನು ಸಾರ್ವಜನಿಕ ವಿಭಾಗವೆಂದು 2 ವಿಭಾಗ ಮಾಡಲಾಗುವುದು.
9.ಅಡಿಷನ್‌ನಲ್ಲ 50 ಸ್ಫರ್ಧಿಗಳು ಮೇಲ್ಪಟ್ಟು ಇದ್ದಲ್ಲಿ ಹಾಡಿನ ಪಲ್ಲವಿ ಹಾಗೂ ಪ್ರಥಮ ಚರಣ ಮಾತ್ರ ಹಾಡಲು ಅವಕಾಶ ಇರುತ್ತದೆ.
10.ಆಡಿಷನ್ ಭಾಗವಹಿಸಿದ ಪ್ರತಿಯೊಬ್ಬ ಸ್ಫರ್ಧಿಗೂ ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು.
11.ಆಡಿಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಫರ್ಧಿಗಳಲ್ಲಿ ಆಯ್ಕೆಯಾದವರಿಗೆ ಸೆಮಿ ಫಿನಾಲೆ ಸುತ್ತಿನಲ್ಲಿ ಸ್ಪರ್ಧಿಸಲು ಅವಕಾಶ.
12.ಗ್ರಾಂಡ್ ಫಿನಾಲೆಯ ವಿಜೇತರನ್ನು ಪುತ್ತೂರು ಮುಳಿಯ ಗಾನ ಕೋಗಿಲೆ ಎಂಬ ಬಿರುದು ನೀಡಿ ಪುರಸ್ಕರಿಸರಿಸಲಾಗುವುದು.
13.ನುರಿತ ಹಿನ್ನಲೆ ಸಂಗೀತ ತೀರ್ಪುಗಾರರು ಹಾಗೂ ಸಂಸ್ಥೆಯ ತೀರ್ಮಾನವೇ ಅಂತಿಮ.
14.ಕೋವಿಡ್ ನಿಯಮವನ್ನು ಪಾಲಿಸುವಲ್ಲಿ ಎಲ್ಲರೂ ಸಹಕರಿಸತಕ್ಕದ್ದು.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ
July 26, 2025
10:25 PM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ
July 26, 2025
10:13 PM
by: The Rural Mirror ಸುದ್ದಿಜಾಲ
ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ
July 26, 2025
10:05 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ
July 26, 2025
9:12 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group