ಪುತ್ತೂರು ಬಾಲವನ ಉನ್ನತ ಕಲಾ ಕೇಂದ್ರವಾಗಿಸಲು ಒತ್ತಾಯ | ರಂಗಾಯಣದ ಐದನೇ ಘಟಕ ಬಾಲವನದಲ್ಲಾಗಲಿ |

August 28, 2021
12:18 PM

ಪುತ್ತೂರು: ನಾಡಿನ ಹೆಸರಾಂತ ಪ್ರದೇಶ ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನವು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಬೇಕು, ಪುತ್ತೂರಿನ ಕಲಾವಿದರನ್ನು ಗುರುತಿಸಿ ,ಅವರಿಗೆ ಉತ್ತಮ ಅವಕಾಶಗಳನ್ನು ಕೊಡುವಲ್ಲಿ ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಹಾಗೆ ಈ ತಾಣವನ್ನು ಉನ್ನತ ಕಲಾ ಕೇಂದ್ರವಾಗಿ ಮಾಡಬೇಕು ಮಾತ್ರವಲ್ಲ ಕರ್ನಾಟಕ ರಂಗಾಯಣದ ಐದನೇ ಘಟಕವನ್ನು ಪುತ್ತೂರಿನ ಬಾಲವನದಲ್ಲಾಗಬೇಕು ಎಂದು ವಿವೇಕಾನಂದ ಪದವಿ ಕಾಲೇಜು ಪುತ್ತೂರು, ಕರ್ನಾಟಕ ಸಂಘ ಪುತ್ತೂರು, ವಿದ್ಯಾರಶ್ಮಿ ವಿದ್ಯಾಸಂಸ್ಥೆ ಸವಣೂರು  , ಕಾಡು ಬಳಗ ಪುತ್ತೂರು, ಗಾನಸಿರಿ ಕಲಾ ಕೇಂದ್ರ ಪುತ್ತೂರು, ವರ್ಣಕುಟೀರ ಕಲಾ ಸಂಸ್ಥೆ ಪುತ್ತೂರು, ರಂಗ ದೀಪ ತಂಡ ಪುತ್ತೂರು ಇವರ ತಂಡ ಶಾಸಕ ಸಂಜೀವ ಮಟಂದೂರು ಅವರಿಗೆ ಮನವಿ ಸಲ್ಲಿಸಿದ್ದಾರೆ.

Advertisement
Advertisement
Advertisement

ಬಾಲವನದಲ್ಲಿ ರಂಗಾಸಕ್ತರಲ್ಲಿ ರಂಗ ಚಟುವಟಿಕೆಗಳನ್ನು ತರಬೇತಿ ಮಾಡವ ಸಲುವಾಗಿ ,ಸ್ಥಳೀಯ ಕಲಾವಿದರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕೆಂದು ಹಾಗೂ ಕರ್ನಾಟಕ ರಂಗಾಯಣದ ಐದನೇ ಘಟಕವನ್ನು ಪುತ್ತೂರಿನ ಬಾಲವನಕ್ಕೆ ತರಿಸಬೇಕು,ಉತ್ತಮ ಕಲಾವಿದರನ್ನು ಪುತ್ತೂರಿನಿಂದ ರೂಪಿಸಲು ಅವಕಾಶಗಳನ್ನು ಮಾಡಿಕೊಡಬೇಕು ಎಂಬುದು ಎಲ್ಲರ ಬೇಡಿಕೆಯಾಗಿದೆ ಎಂದು  ಈ ತಂಡ ಒತ್ತಾಯಿಸಿದೆ.

Advertisement

ಈ ಸಂಧರ್ಭದಲ್ಲಿ ನಗರ ವಂಡಲ ಬಿ. ಜೆ. ಪಿ ಅಧ್ಯಕ್ಷ ರಾದ ಪಿ. ಜಿ. ಜಗನ್ನಿವಾಸ್ ರಾವ್ ,ರಾಘವೇಂದ್ರ ಎ ಎಂ, ನ್ಯಾಯವಾದಿ ಶಶಿಧರ್ ಬಿ ಎನ್, ಕಿರಣ್ ಕುಮಾರ್ ಗಾನಸಿರಿ, ಪ್ರವೀಣ್ ವರ್ಣಕುಟೀರ, ವೀಣಾ ತಂತ್ರಿ, ಯಶೋದ , ಹಾಗೂ ವಸಂತ ಲಕ್ಷ್ಮಿ ಮೊದಲಾದವರಿದ್ದರು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |
January 19, 2025
7:03 AM
by: The Rural Mirror ಸುದ್ದಿಜಾಲ
ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror