ಬಿಜೆಪಿ ನಾಯಕರ ಬ್ಯಾನರ್‌ಗೆ ಚಪ್ಪಲಿ ಹಾರ | ಕಾರ್ಯಕರ್ತರಿಗೆ “ಶಿಕ್ಷೆ” ನೀಡಿದ ಬಿಜೆಪಿ…! |

May 17, 2023
12:07 PM

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಡಿವಿ ಸದಾನಂದ ಗೌಡ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾಕಿ, ಶ್ರದ್ಧಾಂಜಲಿ ಬ್ಯಾನರ್ ಹಾಕಿದ ಪ್ರಕರಣದಲ್ಲಿ ಒಟ್ಟು 9 ಮಂದಿ ವಿಚಾರಣೆ ನಡೆಸಿದ್ದು 7 ಮಂದಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಬಹುತೇಕ ಮಂದಿ ಬಿಜೆಪಿ ಕಾರ್ಯಕರ್ತರೇ ಆಗಿದ್ದರು. ಇದೀಗ ಇವರಲ್ಲಿ ಕೆಲವರನ್ನು ಪೊಲೀಸರು ಬೆಂಡೆತ್ತಿದ್ದಾರೆ. ಚುನಾವಣೆ ಮೊದಲೂ ಬಿಜೆಪಿ ಕಾರ್ಯಕರ್ತರಿಗೆ ಶಿಕ್ಷೆ, ಈಗಲೂ “ಶಿಕ್ಷೆ”ಯಾಗಿದೆ…!.

Advertisement

ಪುತ್ತೂರು ತಾಲೂಕಿನ ನರಿಮೊಗರು ನಿವಾಸಿಗಳಾದ ವಿಶ್ವನಾಥ ಮತ್ತು ಮಾಧವ ಎಂಬವರನ್ನು ಸೋಮವಾರ ಬಂಧಿಸಿದ್ದು. ಮತ್ತೆ ಉಳಿದ  ಅವಿನಾಶ್ , ಶಿವರಾಮ್, ಚೈತ್ರೇಶ್, ಈಶ್ವರ್, ನಿಶಾಂತ್, ದೀಕ್ಷಿತ್, ಗುರುಪ್ರಸಾದ್ ಎಂಬವರನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ಹೆಚ್ಚಿನವರು ಬಿಜೆಪಿ ಕಾರ್ಯಕರ್ತರಾಗಿದ್ದು  ಬಿಜೆಪಿ ಪರವಾಗಿಯೇ ಚುನಾವಣೆಗೆ ದುಡಿದಿದ್ದರು. ಇವರಲ್ಲಿ ಮೂರು ಮಂದಿ ಅರುಣ್ ಪುತ್ತಿಲ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರು.

ಬಿಜೆಪಿ ಸೋಲಿಗೆ  ಡಿವಿ ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲ್ ಕಾರಣ ಎಂದು ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಕೋರಿದ ಅಳವಡಿಸಿದ್ದರು. ಬ್ಯಾನರ್ ಫೋಟೋ ವೈರಲ್ ಆಗಿ ಬಿಜೆಪಿ ನಾಯಕರಿಗೆ ಇರಿಸು ಮುರಿಸು ಆಗುತ್ತಲೇ ಪೊಲೀಸರಿಗೆ ಒತ್ತಡ ಬಂದಿತ್ತು. ಆರೋಪಿಗಳನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಿ ಎಂದು ಸ್ಥಳೀಯರು ಪೊಲೀಸರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಬಂಧಿಸಿ ಕೆಲವೇ ಹೊತ್ತಲ್ಲಿ ಯದ್ವಾತದ್ವ ಹಲ್ಲೆ ನಡೆಸಿದ್ದಾರೆ. ಇದೀಗ ಮಾನವ ಹಕ್ಕುಗಳವರೆಗೂ ಈ ಪ್ರಕರಣ ಹೋಗುವ ಸಾಧ್ಯತೆ ಇದೆ.

ಘಟನೆ ತಿಳಿದ  ಅರುಣ್ ಪುತ್ತಿಲ  ಠಾಣೆಗೆ ತೆರಳಿ ಎಲ್ಲರನ್ನೂ ಬಿಡುಗಡೆ ಮಾಡಿಸಿದ್ದಾರೆ. ಆರೋಪಿಗಳಿಂದ ಮುಚ್ಚಳಿಕೆ ಬರೆಸಿ, ಪೊಲೀಸರು ಕಳಿಸಿ ಕೊಟ್ಟಿದ್ದರು.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಸ್ಥಳೀಯ ಚುನಾವಣೆಗಳಲ್ಲಿ ಇವಿಎಂಗೆ ಬ್ರೇಕ್ | ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಸಚಿವ ಸಂಪುಟ ಹಸಿರು ನಿಶಾನೆ
February 11, 2026
7:04 AM
by: ಮಿರರ್‌ ಡೆಸ್ಕ್
ಸುಳ್ಯದಲ್ಲಿ 265 ಅರ್ಹ ರೈತರಿಗೆ ಕೃಷಿ ಸವಲತ್ತುಗಳ ವಿತರಣೆ
January 20, 2026
6:24 AM
by: ದ ರೂರಲ್ ಮಿರರ್.ಕಾಂ
ಸದ್ಯದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ | ದಾವಣಗೆರೆಯಲ್ಲಿ ರಾಜ್ಯ ಚುನಾವಣಾ ಆಯುಕ್ತರಿಂದ ಸಿದ್ಧತೆ ಪರಿಶೀಲನೆ
November 20, 2025
7:08 AM
by: ದ ರೂರಲ್ ಮಿರರ್.ಕಾಂ
ಮುಂಗಾರಿನಲ್ಲಿ ಕೃಷಿ ಹಾನಿಗೊಳಗಾದ ರೈತರಿಗೆ ಪರಿಹಾರ | ರಾಜ್ಯಕ್ಕೆ, 384 ಕೋಟಿ ಕೇಂದ್ರ ಸರ್ಕಾರ NDRF ನಿಧಿ ಬಿಡುಗಡೆ
October 23, 2025
5:07 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror