ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಡಿವಿ ಸದಾನಂದ ಗೌಡ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾಕಿ, ಶ್ರದ್ಧಾಂಜಲಿ ಬ್ಯಾನರ್ ಹಾಕಿದ ಪ್ರಕರಣದಲ್ಲಿ ಒಟ್ಟು 9 ಮಂದಿ ವಿಚಾರಣೆ ನಡೆಸಿದ್ದು 7 ಮಂದಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಬಹುತೇಕ ಮಂದಿ ಬಿಜೆಪಿ ಕಾರ್ಯಕರ್ತರೇ ಆಗಿದ್ದರು. ಇದೀಗ ಇವರಲ್ಲಿ ಕೆಲವರನ್ನು ಪೊಲೀಸರು ಬೆಂಡೆತ್ತಿದ್ದಾರೆ. ಚುನಾವಣೆ ಮೊದಲೂ ಬಿಜೆಪಿ ಕಾರ್ಯಕರ್ತರಿಗೆ ಶಿಕ್ಷೆ, ಈಗಲೂ “ಶಿಕ್ಷೆ”ಯಾಗಿದೆ…!.
ಪುತ್ತೂರು ತಾಲೂಕಿನ ನರಿಮೊಗರು ನಿವಾಸಿಗಳಾದ ವಿಶ್ವನಾಥ ಮತ್ತು ಮಾಧವ ಎಂಬವರನ್ನು ಸೋಮವಾರ ಬಂಧಿಸಿದ್ದು. ಮತ್ತೆ ಉಳಿದ ಅವಿನಾಶ್ , ಶಿವರಾಮ್, ಚೈತ್ರೇಶ್, ಈಶ್ವರ್, ನಿಶಾಂತ್, ದೀಕ್ಷಿತ್, ಗುರುಪ್ರಸಾದ್ ಎಂಬವರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಹೆಚ್ಚಿನವರು ಬಿಜೆಪಿ ಕಾರ್ಯಕರ್ತರಾಗಿದ್ದು ಬಿಜೆಪಿ ಪರವಾಗಿಯೇ ಚುನಾವಣೆಗೆ ದುಡಿದಿದ್ದರು. ಇವರಲ್ಲಿ ಮೂರು ಮಂದಿ ಅರುಣ್ ಪುತ್ತಿಲ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರು.
ಬಿಜೆಪಿ ಸೋಲಿಗೆ ಡಿವಿ ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲ್ ಕಾರಣ ಎಂದು ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಕೋರಿದ ಅಳವಡಿಸಿದ್ದರು. ಬ್ಯಾನರ್ ಫೋಟೋ ವೈರಲ್ ಆಗಿ ಬಿಜೆಪಿ ನಾಯಕರಿಗೆ ಇರಿಸು ಮುರಿಸು ಆಗುತ್ತಲೇ ಪೊಲೀಸರಿಗೆ ಒತ್ತಡ ಬಂದಿತ್ತು. ಆರೋಪಿಗಳನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಿ ಎಂದು ಸ್ಥಳೀಯರು ಪೊಲೀಸರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಬಂಧಿಸಿ ಕೆಲವೇ ಹೊತ್ತಲ್ಲಿ ಯದ್ವಾತದ್ವ ಹಲ್ಲೆ ನಡೆಸಿದ್ದಾರೆ. ಇದೀಗ ಮಾನವ ಹಕ್ಕುಗಳವರೆಗೂ ಈ ಪ್ರಕರಣ ಹೋಗುವ ಸಾಧ್ಯತೆ ಇದೆ.
ಘಟನೆ ತಿಳಿದ ಅರುಣ್ ಪುತ್ತಿಲ ಠಾಣೆಗೆ ತೆರಳಿ ಎಲ್ಲರನ್ನೂ ಬಿಡುಗಡೆ ಮಾಡಿಸಿದ್ದಾರೆ. ಆರೋಪಿಗಳಿಂದ ಮುಚ್ಚಳಿಕೆ ಬರೆಸಿ, ಪೊಲೀಸರು ಕಳಿಸಿ ಕೊಟ್ಟಿದ್ದರು.
ಈಗಿನಂತೆ ಎಪ್ರಿಲ್ 7 ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ.
ಕಲಬುರಗಿ ಹೈಕೋರ್ಟ್ ಪೀಠವು ನಾರಾಯಣಪುರ ಜಲಾಶಯದಿಂದ ಕಾಲುವೆಗೆ ನೀರು ಹರಿಸುವಂತೆ ಆದೇಶ ನೀಡಿದರೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಸಿರು ಹೊದಿಕೆಯನ್ನು ಹೆಚ್ಚಿಸುವ ಸಲುವಾಗಿ ಅರಣ್ಯ ಇಲಾಖೆಯು ಹಬ್ಬದ…
ಎಳೆಯ ಹಲಸಿನ ಕಾಯಿ ಪಕೋಡ(Tender Jack Fruit)ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ…