ಬಿಜೆಪಿ ಸರ್ಕಾರ ಮಾಡಿದ ದೇವಾಲಯ ನಾಶದ ಕೃತ್ಯವನ್ನು ಅಧಿಕಾರಿಗಳ ತಲೆಗೆ ಕಟ್ಟಿ ಡ್ಯಾಮೇಜ್‌ ಕಂಟ್ರೋಲ್‌ ಯತ್ನ ಬೇಡ | ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಅಮಳ ರಾಮಚಂದ್ರ |

September 17, 2021
9:10 PM

ಬಿಜೆಪಿ ಸರಕಾರ ಮಾಡಿದ ದೇವಾಲಯ ನಾಶದ ಕೃತ್ಯವನ್ನು ಅಧಿಕಾರಿಗಳ ತಲೆಗೆ ಕಟ್ಟಿ ತಾವೇ ಬೆಂಬಲಿಸಿ ಜನರ ಭಾವನೆಗಳ ಜೊತೆ ಆಟವಾಡುತ್ತಿದೆ. ಈಗ ಪ್ರತಿಭಟನೆಯ ನಾಟಕವನ್ನೂ ಅವರದೇ ಅಂಗ ಸಂಸ್ಥೆಗಳ ಮೂಲಕ ಮಾಡುತ್ತಿವೆ. ಜನರ ಮುಂದೆ ಇಂತಹ ನಾಟಕ ಏಕೆ ಎಂದು  ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಹೇಳಿದ್ದಾರೆ. (ವಿಡಿಯೋ ಇಲ್ಲಿದೆ)

ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ  ಮಾತನಾಡಿದ ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ , ಆರಾಧನಾ ಸ್ಥಳವನ್ನು ನಾಶ ಮಾಡಿರುವ ಬಗ್ಗೆ ಖಂಡಿಸಿದ್ದಾರೆ. ಜನರ ಆರಾಧನಾ ಸ್ಥಳಗಳನ್ನು ನಾಶಮಾಡಿ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ತನ್ನ ದೇವಾಲಯಗಳನ್ನು ನಾಶಪಡಿಸುವ ನೀತಿಯನ್ನು ತಕ್ಷಣ ಕೈಬಿಟ್ಟು, ಮಾತುಕತೆಗಳ ಮೂಲಕ ಸುಪ್ರೀಂಕೋರ್ಟಿನ ಆದೇಶಕ್ಕೂ ಧಕ್ಕೆ ಬಾರದ ರೀತಿಯಲ್ಲಿ, ಪೂಜಾ ಸ್ಥಳಗಳ ಅಸ್ತಿತ್ವಕ್ಕೂ ಧಕ್ಕೆ ಬರದ ರೀತಿಯಲ್ಲಿ ಮಾತುಕತೆಗಳ ಮೂಲಕ ಈ ಪ್ರಕರಣವನ್ನು ಮುಗಿಸಬೇಕೆಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು ಹೇಳಿದ್ದಾರೆ.

ಇದೀಗ ಬಿಜೆಪಿಯ ಮಾತೃ ಸಂಸ್ಥೆಯಾದ ಸಂಘ ಪರಿವಾರದ ಪರಿವಾರ ಸಂಘಟನೆಗಳು ಈ ವಿಚಾರವನ್ನು ಹಿಡಿದುಕೊಂಡು ದೇವಾಲಯವನ್ನು ನೆಲಸಮಗೊಳಿಸಿ ದ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ನಡೆಸುತ್ತಿದ್ದಾರೆ. ಇವೆಲ್ಲವೂ ಬಿಜೆಪಿ ಸರಕಾರ ಮಾಡಿದ ದೇವಾಲಯ ನಾಶದ ಕೃತ್ಯವನ್ನು ಅಧಿಕಾರಿಗಳ ತಲೆಗೆ ಕಟ್ಟಿ ತಾವೇ ಬೆಂಬಲಿಸಿ ಅಧಿಕಾರಕ್ಕೆ ತಂದ ಸರಕಾರದ ಹಿತವನ್ನು ಕಾಯುವ ಪ್ರಯತ್ನವಾಗಿದೆ. ಬಿಜೆಪಿ ಮತ್ತು ಸಂಘ ಪರಿವಾರ ಒಂದೇ ಮಾತೃಸಂಸ್ಥೆಯ ಬೇರೆಬೇರೆ ಭಾಗಗಳಾಗಿದ್ದು ಇವರು ಒಬ್ಬರು ಮಗುವಿಗೆ ಚಿವುಟುವ ಮತ್ತೊಬ್ಬರು ತೊಟ್ಟಿಲು ತೂಗುವ ನೀತಿಯನ್ನು ಅನುಸರಿಸಿಕೊಂಡು ಪರಸ್ಪರರ ಹಿತಕಾಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ದೇವಾಲಯವನ್ನು ಕೆಡವಿದ ನಂತರ ಕರ್ನಾಟಕದ ಬಿಜೆಪಿ ನೇತೃತ್ವದ ಸರಕಾರದ ಹಿಂದುತ್ವದ ಇಮೇಜಿಗೆ ಧಕ್ಕೆ ಆದುದರಿಂದ ಆಗಿಹೋದ ಡ್ಯಾಮೇಜ್ ಕಂಟ್ರೋಲ್ ಪ್ರಯತ್ನವಾಗಿ ಈಗ ವಿವಿಧ ಪ್ರಯತ್ನ ನಡೆಸುತ್ತಿದ್ದಾರೆ. ರಾಜ್ಯ ಸರಕಾರವನ್ನು ರಕ್ಷಿಸುವ ಪ್ರಯತ್ನದ ಭಾಗವಾಗಿ ದೇವಾಲಯವನ್ನು ಕೆಡವಿದ ಕೃತ್ಯವನ್ನು ಅಧಿಕಾರಿಗಳು ತಲೆಗೆ ಕಟ್ಟುವ ಪ್ರಯತ್ನವನ್ನು ಮಾಡಿದ್ದಾರೆ. ಅಧಿಕಾರಿಗಳು ಅಂದರೆ ಯಾರು? ಅಧಿಕಾರಿಗಳು ಸರಕಾರದ ಭಾಗವಾಗಿದ್ದಾರೆ. ದೇವಾಲಯವನ್ನು ಕೆಡವಿ ದಾರಿ ಕಾರಿಗಳಿಗೆ ಹೊರ ಮೇಲಾಧಿಕಾರಿಗಳು ಆದೇಶವನ್ನು ನೀಡಿರುತ್ತಾರೆ, ಮೇಲಾಧಿಕಾರಿಗಳಿಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶಿಸಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ಎಂದರೆ ಸರಕಾರದ ಭಾಗವಾಗಿದ್ದಾರೆ. ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಹಿಂದಿನ ಕರ್ನಾಟಕದ ಮುಖ್ಯಮಂತ್ರಿಗಳು  1.2. 2021 ರಂದು ದೇವಾಲಯವನ್ನು ಕೆಡಹುವಂತೆ ಆದೇಶಿಸಿದ್ದರ ಪರಿಣಾಮವಾಗಿ ನಂಜನಗೂಡಿನ ದೇವಾಲಯವನ್ನು ನೆಲಸಮಗೊಳಿಸಲಾಯಿತು.

ತಮ್ಮ ಅಧಿಕಾರದ ಎರಡು ಅವಧಿಗಳಲ್ಲಿಯು ಗುಜರಾತ್ ಮಾಡೆಲ್ ಆಡಳಿತವನ್ನು ನೀಡುವುದಾಗಿ ಹೇಳಿಕೊಂಡಿದ್ದ ಬಿಜೆಪಿ ಈಗ ಗುಜರಾತ್ ಮಾದರಿಯನ್ನು ಅನುಸರಿಸಿ ದೇವಾಲಯವನ್ನು ಕೆಡಹುವ ಆದೇಶವನ್ನು ನೀಡುತ್ತಿದೆ.   ಅಭಿವೃದ್ಧಿ ಕಾಮಗಾರಿಯ ಹೆಸರಿನಲ್ಲಿ ಧಾರ್ಮಿಕ ಕೇಂದ್ರಗಳನ್ನು ಹೊಡೆದುಹಾಕುವ ಪ್ರಕ್ರಿಯೆ ಮೊತ್ತಮೊದಲ ಆರಂಭವಾದದ್ದೇ ಗುಜರಾತಿನಲ್ಲಿ. ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು 2008ನೇ ಇಸವಿಯಲ್ಲಿ ಗುಜರಾತಿನಲ್ಲಿ 80ಕ್ಕೂ ಅಧಿಕ ದೇವಾಲಯಗಳನ್ನು ನೆಲಸಮಗೊಳಿಸಿ ದ್ದರು. ಆ ಸಂದರ್ಭದಲ್ಲಿ ದೇವಾಲಯಗಳನ್ನು ನೆಲಸಮ ಗಳಿಸುವುದರ ವಿರುದ್ಧ ವಿಶ್ವ ಹಿಂದೂ ಪರಿಷತ್ತಿನ ಅಂತರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್‌  ನೇತೃತ್ವದಲ್ಲಿ ಅನೇಕ ಆಂದೋಲನಗಳು ನಡೆದಿದ್ದವು. ಈ ಸಂದರ್ಭದಲ್ಲಿ ಅಶೋಕ್ ಸಿಂಘಾಲ್ ಅವರು ಮೋದಿ ಅವರ ಆಡಳಿತವನ್ನು ಗಮನಿಸಿದರೆ ಇತಿಹಾಸದಲ್ಲಿ ಭಾರತದ ದೇವಾಲಯಗಳ ಮೇಲೆ ಘಜನಿ ಮಹಮ್ಮದ್ ನಡೆಸಿದ ದಾಳಿಗಳು ನೆನಪಿಗೆ ಬರುತ್ತಿವೆ ಎಂದು ಹೇಳಿದ್ದರು. ಗುಜರಾತ್ ರಾಜ್ಯದಲ್ಲಿ ಮಂದಿರ್ ಬಚಾವೋ ಆಂದೋಲನ್ ಎಂಬ ಹೆಸರಿನ ಆಂದೋಲನಗಳು ಆರಂಭವಾಗಿದ್ದವು ಎಂದು ನೆನಪಿಸಿದರು. ಈಗ ರಾಜ್ಯದಲ್ಲಿ ದೇವಸ್ಥಾನ ಕೆಡವಲು ಬಂದಿರುವ  ಸುಪ್ರೀಂ ಕೋರ್ಟಿನ ಆದೇಶ ಹೊರಬೀಳಲೂ ಅದೇ ಗುಜರಾತ್‌ ಆದೇಶವೇ ಕಾರಣವಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ  ಕಾಂಗ್ರೆಸ್‌ ಮುಖಂಡ ಮಹಮ್ಮದ್‌ ಆಲಿ, ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಪವನ್‌ ಡಿಜಿ ಹಾಗೂ ಮನಮೋಹನ್‌ ರೈ  ಉಪಸ್ಥಿತರಿದ್ದರು.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಶೇಂಗಾ ಪಲ್ಯ
March 15, 2025
7:00 AM
by: ದಿವ್ಯ ಮಹೇಶ್
ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |
March 14, 2025
11:36 PM
by: ದ ರೂರಲ್ ಮಿರರ್.ಕಾಂ
ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ
March 14, 2025
11:03 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ
March 14, 2025
10:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror