ಪುತ್ತೂರು ಸುಳ್ಯ ತಾಲೂಕಿನ ಹಲವೆಡೆ ಗುಡುಗು ಸಹಿತ ಮಳೆ

February 25, 2026
5:38 PM
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾಣಿಯೂರು, ಬೆಳ್ಳಾರೆ, ಪಂಜ ಸೇರಿದಂತೆ ಹಲವೆಡೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಬಿಸಿಲಿನಿಂದ ಬಳಲುತ್ತಿದ್ದ ಜನತೆಗೆ ತಂಪಿನ ಅನುಭವ.

 ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಕಾಣಿಯೂರು, ಪುಣ್ಚತ್ತಾರು, ಬೆಳ್ಳಾರೆ, ಉಪ್ಪಿನಂಗಡಿ, ಪೆರ್ಲಂಪಾಡಿ, ಉಬರಡ್ಕ ಹಾಗೂ ಪಂಜ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆಯೊಂದಿಗೆ ಗಾಳಿ ಮತ್ತು ಗುಡುಗು ಸಹಿತ ಮಳೆ ಸುರಿದಿದೆ.

ಕೆಲವು ಪ್ರದೇಶಗಳಲ್ಲಿ ಮೊದಲಿಗೆ ಬಿರುಸಿನ ಗಾಳಿ ಬೀಸಿದ ನಂತರ ಮಳೆಯಾಗಿದೆ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಕೆಲ ನಿಮಿಷಗಳ ಕಾಲ ಉತ್ತಮ ಪ್ರಮಾಣದಲ್ಲಿ ಸುರಿದರೆ, ಇನ್ನೂ ಕೆಲವು ಕಡೆ ತುಂತುರು ಮಳೆಯಾಗಿ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ಬಿಸಿಲು ಮತ್ತು ಸೆಖೆಯಿಂದ ಬಳಲುತ್ತಿದ್ದ ಜನತೆಗೆ ಈ ಮಳೆ ತಾತ್ಕಾಲಿಕ ತಂಪಿನ ಅನುಭವವನ್ನು ನೀಡಿದೆ. ಮಧ್ಯಾಹ್ನ ವೇಳೆಗೆ ಬಿಸಿಲು ತೀವ್ರವಾಗಿದ್ದರೂ, ಸಂಜೆ ವೇಳೆಗೆ ಮೋಡ ಕವಿದು ಮಳೆ ಸುರಿದ ಪರಿಣಾಮ ತಾಪಮಾನದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಗಾಳಿ ಸಹಿತ ಮಳೆಯ ಪರಿಣಾಮವಾಗಿ ಕೆಲವೆಡೆ ಮರದ ಕೊಂಬೆಗಳು ಬಿದ್ದಿರುವ ಮಾಹಿತಿ ದೊರೆತಿದ್ದು, ಆದರೆ ಯಾವುದೇ ದೊಡ್ಡ ಹಾನಿಯ ವರದಿ ಲಭ್ಯವಾಗಿಲ್ಲ. ಈ ಮಳೆ ಅಡಿಕೆ, ಕಾಳುಮೆಣಸು ಹಾಗೂ ಇತರ ತೋಟಗಾರಿಕಾ ಬೆಳೆಗಳಿಗೆ ಸಂಕಷ್ಟವಾಗಿದೆ.  ಬಿಸಿಲಿನಿಂದ ಒಣಗುತ್ತಿದ್ದ ಮಣ್ಣಿಗೆ ತೇವಾಂಶ ದೊರಕಿದ್ದು, ತೋಟಗಳಿಗೆ ಸ್ವಲ್ಪ ಮಟ್ಟಿನ  ತೇವಾಂಶ ಒದಗಿಸಿದೆ. ಆದರೆ ಅಡಿಕೆ ಬೆಳೆಗಾರರಿಗೆ ಅಡಿಕೆ ಒಣಗಿಸಲು ಕಷ್ಟವಾಗಿದೆ.

ಮುಂದಿನ ದಿನಗಳಲ್ಲಿ ಮತ್ತೆ ಬಿಸಿಲಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೈತರು ತೋಟ ನಿರ್ವಹಣೆ ಮತ್ತು ನೀರಾವರಿ ಕ್ರಮಗಳನ್ನು ಹವಾಮಾನವನ್ನು ಗಮನಿಸಿ ಕೈಗೊಳ್ಳುವುದು ಸೂಕ್ತ ಎಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Thunderstorms accompanied by gusty winds and rainfall were reported in several parts of Puttur taluk in Dakshina Kannada district, including Kaniyooru, Bellare, Punjaththaru, Uppinangady, Perlampady, Ubaradka, and Panja. The rain brought relief from recent heat and helped improve soil moisture, benefiting plantation crops. No major damage has been reported so far.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ರೋಗಕ್ಕೆ “100% ಬಯೋ ಗ್ಯಾರಂಟಿ” ಔಷಧಿ? — ICAR ಸ್ಪಷ್ಟನೆ | ಇನ್ನೂ ಅಧ್ಯಯನವೇ ಆಗಿಲ್ಲ…!
March 17, 2026
7:58 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 17-03-2026 | ಬೇಸಿಗೆಗೆ ಬ್ರೇಕ್ ಕೊಟ್ಟ ಮಳೆ..! ಮಾರ್ಚ್ ಅಂತ್ಯದವರೆಗೂ ರಾಜ್ಯದ ಹಲವೆಡೆ ಗುಡುಗು-ಸಹಿತ ಮಳೆಯ ಅಲರ್ಟ್
March 17, 2026
2:50 PM
by: ಸಾಯಿಶೇಖರ್ ಕರಿಕಳ
ಅತಿಹೆಚ್ಚು ಮಳೆ ಬೀಳುವ ಬೆಟ್ಟಗಳು ಒಣಗುತ್ತಿವೆಯೇ? – ಮೇಘಾಲಯದ ನೀರಿನ ಸಂಕಷ್ಟದ ಎಚ್ಚರಿಕೆ
March 17, 2026
7:14 AM
by: ದ ರೂರಲ್ ಮಿರರ್.ಕಾಂ
ಗಲ್ಫ್ ಯುದ್ಧದ ಪರಿಣಾಮ | ₹11.8 ಬಿಲಿಯನ್ ಭಾರತೀಯ ಕೃಷಿ ರಫ್ತು ಮಾರುಕಟ್ಟೆ ಅಪಾಯದಲ್ಲಿ
March 17, 2026
6:44 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror