ಚುನಾವಣಾ ಕಣ | ಪುತ್ತೂರಿನಲ್ಲಿ ಏಕೆ ಅಷ್ಟೊಂದು ಚರ್ಚೆ? | ಪಕ್ಷೇತರ ಅಭ್ಯರ್ಥಿ ಅರುಣ್‌ ಪುತ್ತಿಲ ಪರ ಏಕೆ ಅಷ್ಟೊಂದು ಜನ ?

April 23, 2023
11:58 AM

ಕರಾವಳಿ ಜಿಲ್ಲೆಯಲ್ಲಿ ಈಗ ಅತ್ಯಂತ ಕುತೂಹಲ ಮೂಡಿಸಿದ ಹಾಗೂ ಚರ್ಚೆಯಾಗುತ್ತಿರುವ ಕ್ಷೇತ್ರ ಪುತ್ತೂರು. ಇಲ್ಲಿ ಪಕ್ಷೇತರ ಅಭ್ಯರ್ಥಿ, ಹಿಂದುತ್ವವನ್ನೇ ಮುಂದಿರಿಸಿ ಚುನಾವಣಾ ಕಣದಲ್ಲಿರುವ ಅರುಣ್‌ ಕುಮಾರ್‌ ಪುತ್ತಿಲ ಪರ ಏಕೆ ಅಷ್ಟೊಂದು ಜನ ? ಪಕ್ಷೇತರ ಅಭ್ಯರ್ಥಿಗೆ ಪುತ್ತೂರಿನಂತಹ ನೆಲದಲ್ಲಿ ಹೇಗೆ ಬೆಂಬಲ ವ್ಯಕ್ತವಾಯಿತು..? ಇದು ಆಸಕ್ತಿ ಹಾಗೂ ಕುತೂಹಲದ ಸಂಗತಿ. ಈ ಬಗ್ಗೆ ಎರಡು ದಿನಗಳ ಕಾಲ ಸರ್ವೆ ನಡೆಸಿದಾಗ, ಹಿಂದುತ್ವದ ಪರವಾಗಿರುವ ಯುವಕರ ಜೊತೆ ಮಾತನಾಡಿದಾಗ ಸಿಕ್ಕ ಸಂಗತಿ ಇಷ್ಟು….!

ಪುತ್ತೂರು ಕ್ಷೇತ್ರವು ಹಿಂದುತ್ವದ ಕಾರಣದಿಂದಲೇ ಗಮನ ಸೆಳೆದ ಕ್ಷೇತ್ರ. ಹಿಂದೆ ಕಾಂಗ್ರೆಸ್‌ ಪಕ್ಷದ ಶಾಸಕರಾಗಿದ್ದ ವಿನಯಕುಮಾರ್‌ ಸೊರಕೆ ಅವರು ಅವಧಿ ನಂತರ ಪುತ್ತೂರಿನಲ್ಲಿ ಒಮ್ಮೆ ಮಾತ್ರಾ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಕಂಡಿದ್ದರು. ಬಿಜೆಪಿಯಿಂದ ಸ್ವಾಭಿಮಾನಿಯಾಗಿ ಸ್ಫರ್ಧಿಸಿ, ಆ ಬಳಿಕ ಕಾಂಗ್ರೆಸ್‌ ನಿಂದ ಸ್ಫರ್ಧಿಸಿದ ಶಕುಂತಳಾ ಶೆಟ್ಟಿ ಗೆಲುವು ಕಂಡದ್ದು ಬಿಟ್ಟರೆ ಕಳೆದ ಸುಮಾರು 30 ವರ್ಷಗಳಿಂದ ಬಿಜೆಪಿಯೇ ಹಿಡಿತ ಸಾಧಿಸಿದೆ. ಆದರೆ ಈ ಬಾರಿ ಏಕೆ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಪರವಾಗಿ ಬೆಂಬಲ ಇದೆ… ? . ಹಿಂದುತ್ವದ ಕಾರ್ಯಕರ್ತರು ಅನೇಕರು ಅರುಣ್‌ ಕುಮಾರ್‌ ಪುತ್ತಿಲ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕಾರಣ ಒಂದೇ ಅದು ಹಿಂದುತ್ವ. ಇಷ್ಟೂ ವರ್ಷಗಳಿಂದ ಅದೇ ಆಧಾರದಲ್ಲಿಯೇ ಈ ಕ್ಷೇತ್ರ ಬೆಳೆದಿದೆ. ಆದರೆ ಕಳೆದ 10 ವರ್ಷಗಳಿಂದ ಬಿಜೆಪಿಯ ಮನಸ್ಥಿತಿಯೇ ಈ ಬದಲಾವಣೆಗೆ ಕಾರಣ ಎನ್ನುವುದು  ತಿಳಿದುಬಂದಿದೆ.

ಬಿಜೆಪಿಯು ಆರ್‌ ಎಸ್‌ ಎಸ್‌ ಹಿನ್ನೆಲೆಯ ಪಕ್ಷ. ಅಲ್ಲಿ ವ್ಯಕ್ತಿ ಪೂಜೆ ಇಲ್ಲ, ಜಾತಿ, ಧರ್ಮಕ್ಕೆ ಸೊಪ್ಪು ಇಲ್ಲ. ಹಿಂದುತ್ವವೇ ಅದರ ಜೀವಾಳ. ಇದೇ ಆಧಾರದಲ್ಲಿ ಪಕ್ಷ ಬೆಳೆದಿದೆ. ಆದರೆ 2008 ರ ನಂತರ ಪುತ್ತೂರಿನಲ್ಲಿ ಜಾತಿ ಆಟಗಳು ಆರಂಭವಾಗಿದೆ. ಅಂದಿನಿಂದ ಜಾತಿ ಆಟಗಳು ನಡೆಯಲು ಆರಂಭವಾಗಿತ್ತು , ಸದ್ದಿಲ್ಲದೆಯೇ. ನಾಯಕರು ಈ ಆಟ ಆಡಿದರು. ಆದರೆ ಕಾರ್ಯಕರ್ತರಿಗೆ ಈ ಆಟಗಳು ತಿಳಿಯಲಿಲ್ಲ. ಎಲ್ಲವೂ ಹಿಂದುತ್ವ ಎನ್ನುವ ಆಧಾರದಲ್ಲಿಯೇ ಕೆಲಸ ಮಾಡಿದರು. ಶಕುಂತಳಾ ಶೆಟ್ಟಿ ಬಿಜೆಪಿಯಿಂದ ಬಂಡಾಯ ನಿಂತಾಗ ಪ್ರಮುಖರು ಜಾತಿ ಆಧಾರದಲ್ಲಿ ಲೆಕ್ಕ ಹಾಕಿದರು.  ಆ ಮೂಲಕವೇ ಕೆಲಸ ಆರಂಭವಾಯಿತು. ಬಿಜೆಪಿಯಲ್ಲಿ ಯಾವಾಗ ಜಾತಿ ಆಧಾರದಲ್ಲಿ ನಾಯಕರ ಕೆಲಸಗಳು ಆರಂಭವಾದವೋ ಅಂದಿನಿಂದ ಕಾರ್ಯಕರ್ತರಿಗೆ , ಹಿಂದುತ್ವದ ಕೆಲಸದ ಮಾಡುವ ಯುವಕರಿಗೆ ಈ ಸಂಗತಿಗಳು ಅರಿವಾಗಲಿಲ್ಲ, ರಾಜಕೀಯದ ಹಿಂದಿನ ಆಟಗಳು ತಿಳಿಯಲಿಲ್ಲ. ಕೆಲಸ ಮಾಡುತ್ತಲೇ ಹೋದರು. ಆದರೆ ಬಿಜೆಪಿ ಟಿಕೆಟ್‌ ಸಂದರ್ಭ ನಮ್ಮ ನಾಯಕರ ಹೆಸರು ಸೂಚಿಸಿದರೂ ಅದು ಬದಲಾಯಿತು. ಆಗ ಪಕ್ಷ ಹೇಳಿದೆ, ಸಂಘದ ಹಿರಿಯರು ಹೇಳಿದ್ದಾರೆ , ಒಪ್ಪಿ ಕೆಲಸ ಮಾಡಿ ಎಂದು ಸೂಚನೆ ಬಂದಾಕ್ಷಣ ಸದ್ದಿಲ್ಲದೆ ಎಲ್ಲರೂ ಕೆಲಸ ಮಾಡುತ್ತಿದ್ದರು. 2018  ರ ಚುನಾವಣೆಯಲ್ಲಿ ಕಾರ್ಯತಕರ್ತರಿಗೂ ಈ ಬಗ್ಗೆ ಸ್ಪಷ್ಟವಾದ ಅರಿವು ಕಂಡುಬಂದಿತು. ಅದಕ್ಕಿಂತಲೂ ಹಿಂದೆ ತಾಪಂ, ಜಿಪಂ ಚುನಾವಣೆ ಸಮಯದಲ್ಲಿ ಕಾರ್ಯಕರ್ತರು ಗಮನಿಸುತ್ತಿದ್ದರು, ಅಲ್ಲಿಯ ಅಧ್ಯಕ್ಷತೆ, ಉಪಾಧ್ಯಕ್ಷತೆ , ಸೀಟುಗಳು ಹಾಗೂ ಅದರ ಹಿಂದಿನ ಜಾತಿ ಲೆಕ್ಕಾಚಾರಗಳೂ ಬಿಜೆಪಿಯಲ್ಲೂ ಇವೆ ಎಂಬುದು ಸ್ಪಷ್ಟವಾಗಿತ್ತು. ಹಾಗಾಗಿ 2018 ರಲ್ಲಿಯೇ ಪುತ್ತೂರಿನಲ್ಲಿ ಹಿಂದುತ್ವದ ನಾಯಕ, ಸರ್ವಸಮ್ಮತ ನಾಯಕ ಅರುಣ್‌ ಕುಮಾರ್‌ ಪುತ್ತಿಲ ಹೆಸರು ಕೇಳಿಬಂದಿತ್ತು. ಆಗಲೂ ಅರುಣ್‌ ಕುಮಾರ್‌ ಅವರನ್ನು ಸಮಾಧಾನ ಪಡಿಸಿ ಜೊತೆಯಾಗಿ ಕೆಲಸ ಮಾಡಲು ಹೇಳಿದ ಹಿನ್ನೆಲೆಯಲ್ಲಿ ಅವರು ಸ್ಫರ್ಧೆ ಮಾಡಿರಲಿಲ್ಲ. ಆ ಬಳಿಕ 5 ವರ್ಷಗಳ ಕಾಲವೂ ಸಂಘಟನೆಯ ದೃಷ್ಟಿಯಿಂದಲೂ ಅರುಣ್‌ ಕುಮಾರ್‌ ಬದಿಗೆ ಸರಿಸಿದ್ದರೂ, ಕಾರ್ಯಕರ್ತರ ಜೊತೆ ಇದ್ದರು. ಸರ್ವ ಸಮ್ಮತ ವ್ಯಕ್ತಿಯಾಗಿದ್ದರು. ಹೀಗಾಗಿ ಈ ಬಾರಿ ಜಾತಿ, ಧರ್ಮಕ್ಕಿಂತಲೂ ಹಿಂದುತ್ವದ ಪರವಾಗಿಯೇ ಇರುವ ನಾಯಕನ ಆಯ್ಕೆ ಆಗಬೇಕು ಎಂದು ಪುತ್ತೂರಿಗೆ ಪುತ್ತಿಲ ಅಭಿಯಾನ ಆರಂಭವಾಗಿತ್ತು. ಆಗಲೂ ನಿರ್ಲಕ್ಷ್ಯ ಮಾಡಿದ್ದ ಬಿಜೆಪಿ ನಿಲುವು ಇಂದು ವ್ಯಾಪಕವಾಗಿ ಬೆಳೆದಿದೆ. ಸರಿ ಮಾಡಬೇಕಾದವರೆಲ್ಲರೂ ತಪ್ಪುಗಳ ಪರವೇ ವಾದ ಮಾಡುತ್ತಿದ್ದಾರೆ…!. ನಾಯಕರುಗಳಿಗೆ, ಪಕ್ಷಗಳಿಗೆ ಬೇಕಾದ ಜಾತಿ, ಧರ್ಮಗಳ ಓಲೈಕೆ ಕಾರ್ಯಕರ್ತರುಗಳಿಗೆ ಬೇಕಾಗಿರಲಿಲ್ಲ. ಹೀಗಾಗಿಯೇ ಇಂದು ಹಿಂದುವಾಗಿಯೇ ಇಲ್ಲಿ ಎಲ್ಲಾ ಯುವಕರು ಒಂದಾಗಿದ್ದಾರೆ.

ಅರುಣ್‌ ಕುಮಾರ್‌ ಪುತ್ತಿಲ ಅವರ ಪ್ರಚಾರ ಸಭೆ

ಕಳೆದ ಎರಡು ಅವಧಿಯಿಂದ  ಪುತ್ತೂರಿನಲ್ಲಿ ಕಾಂಗ್ರೆಸ್ ಕೂಡಾ ಪಕ್ಷಾಂತರ ಮಾಡಿರುವ ಅಭ್ಯರ್ಥಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿಕೊಂಡು ಬಂದಿದೆ. ಕಳೆದ ಬಾರಿ ಶಕುಂತಳಾ ಶೆಟ್ಟಿ ಸ್ಪರ್ಧೆ ಮಾಡಿದ್ದರೆ ಈ ಬಾರಿ ಅಶೋಕ್‌ ಕುಮಾರ್‌ ರೈ ಅವರಿಗೆ ಕಾಂಗ್ರೆಸ್‌ ಟಿಕೆಟ್ ನೀಡಿದೆ. ಇವರೂ ಕೂಡಾ ಬಿಜೆಪಿಯಲ್ಲಿದ್ದು ಕಾಂಗ್ರೆಸ್‌ ಬಂದವರು. ಹೀಗಾಗಿ ಕಾಂಗ್ರೆಸ್‌ ಮೂಲ ವ್ಯಕ್ತಿಗಳಿಗೆ, ಅನೇಕ ವರ್ಷಗಳಿಂದ ಕಾಂಗ್ರೆಸ್‌ಗಾಗಿ ಕೆಲಸ ಮಾಡುವವರಿಗೂ ಇಲ್ಲಿ ಇದ್ದ ಅಸಮಾಧಾನಗಳು ಈಚಗೆ  ಬಹಿರಂಗವಾಗಿತ್ತು. ಹೀಗಾಗಿ ಕಾಂಗ್ರೆಸ್‌ ಒಳಗೂ ಎಲ್ಲವೂ ಸರಿ ಇಲ್ಲ.

Advertisement

ಅನೇಕ ವರ್ಷಗಳಿಂದ ದ ಕ ಜಿಲ್ಲೆಯಲ್ಲಿ ಕಾಂಗ್ರೆಸ್‌ ಆಡಳಿತ ಮಾಡುತ್ತಿತ್ತು, ಕಾಂಗ್ರೆಸ್‌ ಶಾಸಕರೇ ಗೆಲ್ಲುತ್ತಿದ್ದರು. ಆದರೆ ಕರಾವಳಿಯಲ್ಲಿ ಹಿಂದುತ್ವದ ಆಧಾರದಲ್ಲಿ ಬಿಜೆಪಿ ಬೆಳೆದ ಬಳಿಕ ಹಿಂದುತ್ವವೇ ಮುಖ್ಯವಾಯಿತು. ಕಾಂಗ್ರೆಸ್‌ ಧರ್ಮ, ಜಾತಿ ಓಲೈಕೆ ಮಾಡುತ್ತಿದೆ ಎನ್ನುವುದೇ ಕಾಂಗ್ರೆಸ್‌ ವಿರೋಧಕ್ಕೆ ಅಂದಿನಿಂದಲೂ ಕಾರಣವಾಯಿತು. ಆದರೆ ಹಿಂದುತ್ವದ ಮೂಲಕ ಕರಾವಳಿ ಜಿಲ್ಲೆಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕೂಡಾ ಧರ್ಮದ ಒಲೈಕೆ, ಜಾತಿ ರಾಜಕಾರಣಕ್ಕೆ ಮಣೆ ಹಾಕುತ್ತಿರುವುದನ್ನು ಅದೇ ಹಿಂದುತ್ವದ ಪರವಾಗಿರುವ ಕಾರ್ಯಕರ್ತರು ವಿರೋಧಿಸಲು ಆರಂಭಿಸಿದರು. ಈ ನಡುವೆಯೇ ಕೆಲವು ಹಿಂದೂ ನಾಯಕರನ್ನು ಬದಿಗೆ ಸರಿಸಿದ ಬಿಜೆಪಿಯ ನಿಲುವನ್ನು ಖಂಡಿಸಲು ಆರಂಭಿಸಿದರು ಹಿಂದೂ ಕಾರ್ಯಕರ್ತರು. ಎಲ್ಲದಕ್ಕೂ ಸಮರ್ಥನೆಗಳು ಇವೆ. ಆದರೆ ಕಾರ್ಯಕರ್ತರು ಈ ಸಮರ್ಥನೆಗಳನ್ನು ಈಗ ನಂಬುತ್ತಿಲ್ಲ. ಇದೀಗ ಪುತ್ತೂರು ಇದರ ವೇದಿಕೆಯಯಾಗಿದೆ. ಹಿಂದುತ್ವವೇ ಮುನ್ನೆಲೆಯಲ್ಲಿ ಇರಬೇಕು , ಈ ಕಾರಣದಿಂದಲೇ ಇಂದು ಅರುಣ್‌ ಕುಮಾರ್‌ ಪುತ್ತಿಲ ಪರವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಜನ ಸೇರುತ್ತಿದ್ದಾರೆ ಎನ್ನುವುದು  ಗ್ರೌಂಡ್‌ ರಿಪೋರ್ಟ್.‌

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ವಿಶ್ಲೇಷಣೆ

ಸಮಾಜದ ಚರ್ಚೆಯ ಪ್ರತಿಬಿಂಬ

ಇದನ್ನೂ ಓದಿ

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!
December 17, 2025
7:54 AM
by: ದ ರೂರಲ್ ಮಿರರ್.ಕಾಂ
ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..
December 17, 2025
7:17 AM
by: ರೂರಲ್‌ ಮಿರರ್ ಸುದ್ದಿಜಾಲ
ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ
December 17, 2025
7:06 AM
by: ರೂರಲ್‌ ಮಿರರ್ ಸುದ್ದಿಜಾಲ
2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು
December 17, 2025
7:02 AM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror