ಪುತ್ತೂರು ವಿಧಾನ ಸಭಾ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಹೈವೋಲ್ಟೇಜ್ ಕ್ಷೇತ್ರವಾಗಿದೆ.ನಾಮಪತ್ರ ಹಿಂತೆಗೆಯುವ ಸಮಯ ಕಳೆದಿದೆ. ಈಗ ತ್ರಿಕೋನ ಸ್ಪರ್ಧೆಯಲ್ಲಿರುವ ಕ್ಷೇತ್ರದಲ್ಲಿ ಗೆಲುವಿನ ಬಗ್ಗೆ ಚರ್ಚೆಯಾಗುತ್ತಿದೆ. ಪುತ್ತೂರಿಗೆ ಪುತ್ತಿಲ ಮತ್ತೊಮ್ಮೆ ಟ್ರೆಂಡ್ ಆಗಿದೆ. ಬ್ಯಾಟ್ ಚಿಹ್ನೆಯ ಮೂಲಕ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಪುತ್ತೂರಿಗೆ ಪುತ್ತಿಲ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಸದ್ದು ಮಾಡುತ್ತಿದ್ದಾರೆ.
ಅರುಣ್ ಕುಮಾರ್ ಪುತ್ತಿಲ ಅವರು ಹಿಂದುತ್ವದ ಆಧಾರದಲ್ಲಿಯೇ ಕಣದಲ್ಲಿದ್ದಾರೆ. ಯಾರ ವಿರುದ್ಧ ಸ್ಫರ್ಧೆ ಎನ್ನುವುದಕ್ಕಿಂತಲೂ ಹಿಂದುತ್ವದ ಪರವಾದ ಸ್ಫರ್ಧೆ ಇದು, ನಾಮಪತ್ರ ಹಿಂತೆಗೆದು ಮತ್ತೆ ಕಾರ್ಯಕರ್ತರ ಭಾವನೆಗೆ ನಾನೂ ನೋವು ನೀಡಲಾರೆ ಎಂದು ಸ್ಪಷ್ಟಪಡಿಸಿದ್ದರು. ಎಂದು ಅರುಣ್ ಕುಮಾರ್ ಪುತ್ತಿಲ ಸ್ಫಷ್ಟಪಡಿಸಿದ್ದಾರೆ. ಈ ನಡುವೆಯೇ ಕಣದಲ್ಲಿ ಸಾಕಷ್ಟು ಪ್ರಚಾರ ನಡೆಯುತ್ತಿದೆ. ಪ್ರಚಾರದಲ್ಲಿ ಪುತ್ತಿಲ ಅವರ ಅಭಿಮಾನಿಗಳು, ಹಿಂದೂ ಕಾರ್ಯಕರ್ತರು ಮುಂದಿದ್ದಾರೆ. ಪುತ್ತಿಲ ಬೆಂಬಲಿತರು ಪುತ್ತಿಲ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ. ಹಲವು ಯುವಕರ ಮೊಬೈಲ್ ಹಿಂದೆ, ವಾಹನಗಳಲ್ಲಿ, ಎಲ್ಲೆಂದರಲ್ಲಿ ಅರುಣ್ ಪುತ್ತಿಲ ಸ್ಟಿಕ್ಕರ್ ಶುರುವಾಗಿದೆ. ಹಿಂದುತ್ವದ ಗೆಲವು ಆಗಲೇಬೇಕು ಎಂಬ ಸದ್ದಿಲ್ಲದ ಅಭಿಯಾನ ಆರಂಭವಾಗಿದೆ. ಅನೇಕ ಫೋಟೊಗಳು, ಅಭಿಯಾನಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.
ಈ ಎಲ್ಲದರ ನಡುವೆಯೇ ಪ್ರಚಾರ, ಅಪಪ್ರಚಾರಗಳೂ ಕಣದಲ್ಲಿ ಜೋರಾಗಿದೆ ಅಭಿವೃದ್ಧಿ ಬಗ್ಗೆ ಚರ್ಚೆ ಕಡಿಮೆಯಾಗಿದೆ. ಅರುಣ್ ಕುಮಾರ್ ಪುತ್ತಿಲ ಅವರು ಹಲವಾರು ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಯೋಜನೆ ಹಾಕಿಕೊಂಡು, ಮುಂದೆ ಈ ಅಪಪ್ರಚಾರಗಳನ್ನು ನಿರ್ಲಕ್ಷಿಸಿ ಹಿಂದುತ್ವದ ಗೆಲುವಿಗೆ ಪಣ ತೊಡುತ್ತೇವೆ ಎಂದು ಹೇಳಿದ್ದಾರೆ. ಈಗಾಗಲೇ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಅಡಿಕೆ ಕೃಷಿಕರ, ಸಾಮಾಜಿಕ ಕಾಳಜಿ ಇರುವ ಕೃಷಿಕರಿಗೂ ದೂರವಾಣಿ ಮೂಲಕ ಮಾತುಕತೆ ನಡೆಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕೃಷಿಕರು ಬರೆದುಕೊಂಡಿದ್ದಾರೆ.
ಬಿಜೆಪಿಯಿಂದ ಆಶಾ ತಿಮ್ಮಪ್ಪ, ಕಾಂಗ್ರೆಸ್‌ನಿಂದ ಅಶೋಕ್ ಕುಮಾರ್ ರೈ ಸ್ಪರ್ಧೆ ಮಾಡುತ್ತಿದ್ದಾರೆ. ಈವರ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಈ ನಡುವೆಯೇ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಪುತ್ತೂರಿನಲ್ಲಿ ಇತಿಹಾಸ ಸೃಷ್ಟಿಸಲು ಪಣ ತೊಟ್ಟಿದ್ದಾರೆ.