ಕರಾವಳಿಯಲ್ಲಿ ಮತ ದ್ವೇಷ ರಾಜಕಾರಣ ಹೆಚ್ಚಾಗಿ, ಜಾತಿ ರಾಜಕಾರಣಕ್ಕೆ ಕಾಲಿಟ್ಟು ಇದೀಗ ಪುತ್ತೂರಿನಲ್ಲಿ ರಾಜಕಾರಣಿಗಳ ಆಡಳಿತ ಭ್ರಷ್ಟಾಚಾರ, ನಿರ್ಲಕ್ಷ ವಿರೋಧಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಬ್ಯಾನರ್ ಅಳವಡಿಸಿದ ಪ್ರಕರಣದಲ್ಲಿ, ಅತ್ಯಂತ ಹೀನಾಯ ದೈಹಿಕ ಹಲ್ಲೆ, ಮಾನಸಿಕ ಹಿಂಸೆ ನೀಡಲ್ಪಟ್ಟ ಘಟನೆ ಅತ್ಯಂತ ಖಂಡನೀಯವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ಹೇಳಿದ್ದಾರೆ.
ರಾಜಕೀಯ ಕಾರಣಕ್ಕಾಗಿ ಧರ್ಮದ, ಜಾತಿಯ, ಪಕ್ಷದ ದೃಷ್ಟಿಯಿಂದ ಕಾನೂನು ದುರುಪಯೋಗದ ಮೂಲಕ ಯಾವುದೇ ರೀತಿಯ ಹಲ್ಲೆ, ಹಿಂಸೆಯನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ. ಪುತ್ತೂರಿನಲ್ಲಿ ನಡೆದ ದೌರ್ಜನ್ಯದ ಬಗ್ಗೆ ಕೂಲಕುಂಶ ತನಿಖೆ ನಡೆಸಿ ಕ್ಷುಲ್ಲಕ ವಿಚಾರದಲ್ಲಿ ಕಾನೂನು ಬಾಹಿರವಾಗಿ ನಡೆದುಕೊಂಡ ಪೋಲಿಸ್ ಇಲಾಖೆ ಅಧಿಕಾರಿಗಳು ಮತ್ತು ಇದಕ್ಕೆ ಒತ್ತಡ ಹೇರಿದ ರಾಜಕೀಯ ಕೃತ್ಯ ಹಾಗೂ ಇಂತಹ ಭೀತಿ ಹುಟ್ಟಿಸುವ ಘಟನೆ ಮರುಕಳಿಸುದಂತೆ, ಕ್ರಮಕ್ಕೆ ಆಮ್ ಆದ್ಮಿ ಪಾರ್ಟಿ ಆಗ್ರಹಿಸುತ್ತದೆ ಎಂದು ಅಶೋಕ್ ಎಡಮಲೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement