Advertisement
MIRROR FOCUS

ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”

Share

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಒಂದು. ಪುತ್ತೂರು ಸೀಮೆಯ ಪ್ರಮುಖ ದೇವಸ್ಥಾನವೂ ಇದು. ಇಲ್ಲಿನ ವಾರ್ಷಿಕ ಜಾತ್ರೆ, ಉತ್ಸವ ಎಂದರೆ ಸೀಮೆಯ ಎಲ್ಲರಿಗೂ ಅದೊಂದು ಮನೆಯ ಕಾರ್ಯಕ್ರಮದ ಹಾಗೆ. ಸಂಭ್ರಮಕ್ಕಿಂತಲೂ ತಾನು ಅಲ್ಲಿ ಇರಬೇಕು ಎನ್ನುವುದೇ ಅಲ್ಲಿನ ಭಾವ.…..ಮುಂದೆ ಓದಿ….

ಚಿತ್ರ : ವಿನಾಯಕ ನಾಯಕ್‌, ಪುತ್ತೂರು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೀಮೆಯ ದೇವಸ್ಥಾನ ಆಗಿರುವುರಿಂದ ಪುತ್ತೂರು ಸೀಮೆಯ ಪ್ರಮುಖ ದೇವಸ್ಥಾನ, ಈ ಸೀಮೆಯ ಜನರ ಆರಾಧ್ಯ ದೇವರು. ಎಲ್ಲಾ ಕಡೆಯೂ ಇರುವಂತೆಯೇ ಪುತ್ತೂರಿನ ಈ ದೇವಸ್ಥಾನವೂ ಸೀಮೆಯ ದೇವಸ್ಥಾನ. ನೂರಾರು, ಸಾವಿರಾರು ಜನರು ಬರುತ್ತಾರೆ ಪೂಜೆ ಮಾಡುತ್ತಾರೆ, ಭಗವಂತ ನೀನೇ ಎಲ್ಲವೂ ಎನ್ನುತ್ತಾರೆ. ಸೀಮೆಯ ಜನರು ಮಾತ್ರವಲ್ಲ ಪುತ್ತೂರಿನ ಒಡೆಯನಿಗೆ ಹತ್ತೂರಿನಲ್ಲೂ ಭಕ್ತರಿದ್ದಾರೆ. ಇಷ್ಟಪಟ್ಟು ಬರುವವರಿದ್ದಾರೆ. ಎಲ್ಲಾ ಕಾರ್ಯಗಳಲ್ಲೂ ಶ್ರೀ ಮಹಾಲಿಂಗೇಶ್ವರ ದೇವರೇ ಅಂತಿಮ ಎನ್ನುವುದೇ ಇಲ್ಲಿರುವ ಭಾವ.

ಪುತ್ತೂರು ಜಾತ್ರೆ ಬಂದರೆ ಸಾಕು ಅನೇಕ ಮನೆಗಳಲ್ಲಿ ತಯಾರಿಗಳು ನಡೆಯುತ್ತವೆ. ಮನೆಯಿಂದ ಒಂದು ದಿನವಾದರೂ ಇಡೀ ಮನೆಮಂದಿ ಭಾಗವಹಿಸುತ್ತಾರೆ. ಕೆಲವು ಜನರಂತೂ ಮನೆಯ ಕಾರ್ಯಕ್ರಮಗಳಲ್ಲಿಅಷ್ಟೊಂದು ಸಕ್ರಿಯವಾಗಿರಲಿಕ್ಕಿಲ್ಲ, ದೇವಸ್ಥಾನದ ಎಲ್ಲಾ ಉತ್ಸವಗಳಲ್ಲಿ ಅವರು ಸಕ್ರಿಯ. ಈಗಂತೂ ದೇವರು ಕಟ್ಟೆ ಪೂಜೆಗಾಗಿ ವಿವಿಧ ಕಡೆ ಸಂಚರಿಸುತ್ತಾರೆ, ಉತ್ಸವ ನಡೆಯುತ್ತದೆ. ಈ ಸಂದರ್ಭ ಪ್ರಕೃತಿ ಸಹಜವಾಗಿ ಮಳೆ ಬಂದರೆ ಸಾಕು, ಆಗಂತೂ, “ಎಂತ ಮಳೆ ಮಾರಾಯ್ರೆ, ದೇವರ ಸವಾರಿ ಹೇಗೆ ಹೋಗುವುದು, ಎಂತ ವ್ಯವಸ್ಥೆ ಆಗಿದೆ..” “ಛೆ.. ಛೆ..” ಹೀಗೆಲ್ಲಾ ಹೇಳುವುದು ಕೇಳುತ್ತೇವೆ. ಅಂದರೆ ಒಂದು ಉತ್ಸವ ಮನೆಯ ಕಾರ್ಯಕ್ರಮದಷ್ಟೇ ಪ್ರಾಧಾನ್ಯತೆಯಿಂದ ಮಾಡುವುದು , ಮಾಡಿಸುವುದು ಮಹಾಲಿಂಗೇಶ್ವರ ದೇವರ ಮಹಿಮೆ, ಆ ದೇವರ ಸೆಳೆತ ಎನ್ನುವುದು ಹಲವರ ಅಭಿಪ್ರಾಯ.

ಚಿತ್ರಕೃಪೆ : ವಿನಾಯಕ ನಾಯಕ್‌ , ಪುತ್ತೂರು
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರು ತಲೆಬಾಗಿ ಬೊಗಸೆಯ ಮೂಲಕ ದೇವರಲ್ಲಿ ಬೇಡುವ ವಿಶೇಷತೆಯನ್ನ ಅಷ್ಟಮಂಗಲ ಪ್ರಶ್ನೆಯಲ್ಲೂ ಉಲ್ಲೇಖಿಸಿದ್ದಾರೆ. ಅಂದರೆ ಮಹಾಲಿಂಗೇಶ್ವರ ಪ್ರೀತಿಯ ದೇವರು ಮಾತ್ರವಲ್ಲ, ಬೇಡಿದ್ದನ್ನು ನೀಡುವ ದೇವರು ಎನ್ನುವ ಭಾವ ಇದೆ ಎನ್ನುತ್ತಾರೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿಅಧ್ಯಕ್ಷ ಕೇಶವಪ್ರಸಾದ್‌ ಮುಳಿಯ.

ಅನೇಕ ವರ್ಷಗಳಿಂದ ಇಡೀ ದಿನ ಉತ್ಸವ, ಕಟ್ಟೆಪೂಜೆಗಳಲ್ಲಿ ಭಾಗವಹಿಸಿ ಕೊನೆಯ ದಿನ ವೀರಮಂಗಲದವರೆಗೂ ಪಾದಯಾತ್ರೆಯ ಮೂಲಕ ಸಾಗಿ ಮತ್ತೆ ಪಾದಯಾತ್ರೆಯ ಮೂಲಕ ದೇವರ ಜೊತೆಗೇ ಬರುವ ಕೆಲವು ಮಂದಿ ಇದ್ದಾರೆ. ಇಷ್ಟೂ ಸಮಯ ಯಾವ ಸುಸ್ತು ಕೂಡಾ ಗೊತ್ತಾಗಲಿಲ್ಲ ಎನ್ನುವುದು ಅವರ ಅನುಭವ. ಮಹಾಲಿಂಗೇಶ್ವರ ಜೊತೆಗಿದ್ದರೆ ಸುಸ್ತು ಇಲ್ಲ ಎನ್ನುವುದು ಅಲ್ಲಿರುವ ಪಾಸಿಟಿವ್‌ ಶಕ್ತಿ.

ಚಿತ್ರಕೃಪೆ : ಅಖಿಲ್‌ ಪುತ್ತೂರು
ಇಡೀ ಜಾತ್ರೆಯ ವೇಳೆ ಎಲ್ಲಾ ವ್ಯವಸ್ಥೆಗಳನ್ನು ಆಡಳಿತವು ಮಾಡುತ್ತದೆ. ಯಾವ ಲೋಪವೂ ಆಗದಂತೆ ಎಚ್ಚರಿಕೆ ವಹಿಸಿಕೊಂಡು ಸಿದ್ಧತೆ ಮಾಡುತ್ತದೆ, ಆಡಳಿತವು. ಈ ಬಾರಿಯೂ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಎನ್ನುತ್ತಾರೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌.

ಪುತ್ತೂರು ಜಾತ್ರೆ ಆರಂಭವಾದ ಕೂಡಲೇ ಈ ಆಸುಪಾಸಿನ ಹಾಗೂ ಬಹುತೇಕ ಸೀಮೆಯ ಎಲ್ಲರೂ ದೂರದ ಪ್ರವಾಸ ಹೋಗುವುದು ಕಡಿಮೆ, ಹೋದರೂ ರಾತ್ರಿ ವೇಳೆಗೆ ಮನೆಗೆ ಬರುವುದು ಇದೆ. ಅದರ ಜೊತೆಗೆ ಮರ ಏರುವುದು ಸೇರಿದಂತೆ ಮನೆಯಲ್ಲಿ ಶುಭಕಾರ್ಯಕ್ರಮ ಹಮ್ಮಿಕೊಳ್ಳುವುದು ಕಡಿಮೆಯೇ. ಏಕೆಂದರೆ ನಮ್ಮ ಮನೆಯ ಅಂದರೆ ಸೀಮೆಯ ಒಡೆಯನ ಕಾರ್ಯಕ್ರಮ ನಡೆಯುತ್ತಿದೆ ಅಂದರೆ ನಮ್ಮದೇ ಮನೆಯ ಕಾರ್ಯಕ್ರಮ ಅದು ಎನ್ನುವ ಭಾವ ಈಗಲೂ ಇದೆ.

Advertisement

ಅನೇಕ ವರ್ಷಗಳಿಂದ ಪುತ್ತೂರು ಜಾತ್ರೆಯ ಧ್ವಜಾರೋಹಣದ ಬಳಿಕ ಪ್ರತೀ ದಿನ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ , ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಪುತ್ತೂರಿನ ಬೊಳುವಾರಿನ ಪ್ರವೀಣ ಬೊಳುವಾರು ಅವರ ಅನುಭವವೇ ಅದ್ಭುತ. ತಡರಾತ್ರಿ 2 – 3 ಗಂಟೆಯವರೆಗೆ ದೇವರ ಜೊತೆಗೆ ಉತ್ಸವದಲ್ಲಿದ್ದು, ವಿಡಿಯೋ, ಫೋಟೊ ಇತ್ಯಾದಿಗಳಲ್ಲೂ ತೊಡಗಿಸಿಕೊಂಡು ಮರುದಿನ ಮತ್ತೆ ದೇವಸ್ಥಾನದ ಉತ್ಸವಗಳಲ್ಲಿ ಭಾಗಿಯಾತ್ತಾರೆ. ಅವರ ಅನುಭವದ ಪ್ರಕಾರ ಇಷ್ಟೂ ವರ್ಷದ ಅನುಭವದ ಪ್ರಕಾರ ಪುತ್ತೂರು ಮಹಾಲಿಂಗೇಶ್ವರ ದೇವರು ಹಾಗೂ ದೇವಸ್ಥಾನದ ಉತ್ಸವ ವಿಶೇಷ ಶಕ್ತಿ ನೀಡುತ್ತದೆ ಎನ್ನುತ್ತಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು

ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…

2 minutes ago

ಕುಕ್ಕುಟ ಸಂಜೀವಿನಿ ಯೋಜನೆ : ಉಚಿತ ಕೋಳಿ ಮರಿ ಶೇಡ್ ನಿರ್ಮಾಣಕ್ಕೆ ಆರ್ಥಿಕ ನೆರವು

ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…

7 minutes ago

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

17 hours ago

ಕೂದಲಿಗೆ ಬಳಸುವ ಎಣ್ಣೆಯ ಪ್ರಯೋಜನ

ಚಳಿಗಾಲ ಎಂದರೆ ಒಂದು ರೀತಿಯಲ್ಲಿ ಕಿರಿಕಿರಿ. ವಯಸ್ಸಾದವರಂತೆ ಚರ್ಮ ಸುಕ್ಕು ಕಟ್ಟುವುದು, ಆರೋಗ್ಯದಲ್ಲಿ…

24 hours ago

ಚಳಿಗಾಲದಲ್ಲಿ ಹೃದಯದ ಕಾಳಜಿಯ ಬಗ್ಗೆ ನಿರ್ಲಕ್ಷ್ಯ ಬೇಡ- ಎಚ್ಚರಿಕೆ ಇರಲಿ

ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತದೆ. ಆದರಲ್ಲೂ ಹೃದಯದ ಸಮಸ್ಯೆಗಳ ಬಗ್ಗೆ ಕಾಳಜಿ…

24 hours ago

ಮಹಿಳೆಯರಿಗಾಗಿ ಉಚಿತ ಆರಿ ವರ್ಕ್ಸ್ ತರಬೇತಿ

ಮಹಿಳೆಯರು ಸಹ ಉದ್ಯೋಗವನ್ನು ಮಾಡಬೇಕೆಂದು ಸರ್ಕಾರವು ಅನೇಕ ರೀತಿಯ ಯೋಜನೆಯನ್ನು ಜಾರಿಗೊಳಿಸಿದ್ದು, ಟ್ರೈಲರಿಂಗ್…

24 hours ago